9:46 PM Thursday2 - May 2024
ಬ್ರೇಕಿಂಗ್ ನ್ಯೂಸ್
ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:… ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ, ಕಾನೂನು ಸುವ್ಯವಸ್ಥೆ ಚಿಂತಾಜನಕ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳ ರೊಟ್ಟಿ ಸವಿದ ಪ್ರಧಾನಿ ಮೋದಿ ವಿಜಯಪುರದ ಶಿರನಾಳದಲ್ಲಿ ಶತಾಯುಷಿ ಭಾಗವ್ವ ಮತ ಚಲಾವಣೆ: 108ರ ಹರೆಯದ ಹಿರಿಯಜ್ಜಿ

ಇತ್ತೀಚಿನ ಸುದ್ದಿ

ಕೂಡ್ಲಿಗಿ‌ ಬಸ್ ನಿಲ್ದಾಣ: ಭರ್ಜರಿ ಬವಣೆಗಳ ತಾಣ; ಹೇಳೋರು ಇಲ್ಲ, ಕೇಳೋರು ಇಲ್ಲ!

30/12/2023, 20:45

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಬಸ್ ನಿಲ್ದಾಣದ ನಿರ್ಮಾಣ ಅವೈಜ್ಞಾನಿಕವಾಗಿದ್ದು, ಸದ್ಯ ಬಸ್ ನಿಲ್ದಾಣ ಮಾತ್ರವಲ್ಲ ಬವಣೆಗಳ ತಾಣವಾಗಿದೆ. ತಂಗುದಾಣದಲ್ಲಿ ತಂಗಲಿಕ್ಕೆ ಆಗದೇ ಬಾಸ್ ಗಾಗಿ ಪ್ರಯಾಣಿಕರು ಕಾಯುತ್ತಾ ನಿಲ್ಲುವ ನಿಲ್ದಾಣವಾಗಿದೆ.
ಬಸ್ ನಿಲ್ದಾಣದಲ್ಲಿ ಸಾಕಷ್ಟು ಬಯಲು ಭಾಗ್ಯವಿದೆ, ಆದರೆ ಕೂಡಲು ಸಾರ್ವಜನಿಕರಿಗೆ ಸಾಕಷ್ಟು ಆಸನದ ಭಾಗ್ಯವಿಲ್ಲ.
ಬಸ್ ನಿಲ್ದಾಣ ಅವ್ಯವಸ್ಥೆಯ ಆಗರ ಮಾತ್ರವಲ್ಲ, ಮೂಲಭೂತ ಸೌಕರ್ಯಗಳ ಕೊರತೆಗಳ ತಾಣವಾಗಿದೆ.
ಮಧ್ಯಾಹ್ನ 12 ಆದರೆ ಸಾಕು ಬಿರು ಬಿಸಿಲು ನೇರವಾಗಿ ಪ್ರಯಾಣಿಕರ ತಂಗುದಾಣಕ್ಕೆ ನುಗ್ಗುತ್ತಿದ್ದು, ಸಾರ್ವಜನಿಕರು ಕೂಡಲು ಮಾತ್ರವಲ್ಲ ನಿಲ್ಲಲೂ ಅಸಾಧ್ಯವಾಗಿದೆ.
ಪ್ರಯಾಣಕ್ಕಾಗಿ ಬಸ್ ಕಾಯುವವರು ಬಿಸಿಲಿನಿಂದ ರಕ್ಷಿಸಿಕೊಳ್ಳಲು, ಹತ್ತಿರದ ಮರಗಳ ಮೊರೆ ಹೋಗುವುದು ಸಾಮಾನ್ಯ.
ತಂಗುದಾಣ ಕೆಲ ತಾಸುಗಳ ಮಟ್ಟಿಗೆ ಬೆಳಿಗ್ಗೆ ಮತ್ತು ರಾತ್ರಿ ಹೊತ್ತಲ್ಲಿ ತಂಗಲಿಕ್ಕೆ ಬಳಕೆಯಾಗುತ್ತದೆ ಹೊರತು, ಯೋಗ್ಯ ಸೌಕರ್ಯವಿಲ್ಲದ ಕಾರಣ ಮಧ್ಯಾಹ್ನದ ಬಿರು ಬಿಸಿಲಿನಲ್ಲಿ ಮತ್ತು ಮಳೆಗಾಲದಲ್ಲಿ ಮಳೆ ನೀರು ಒಳ ನುಗ್ಗುತ್ತದೆ ಇದರಿಂದಾಗಿ ತಂಗುದಾಣ ಇದ್ದೂ ಇಲ್ಲದಂತಾಗಿದೆ. ಸಾಕಷ್ಟು ಆಸನಗಳ ವ್ಯವಸ್ಥೆಯಾಗಬೆೇಕಿದೆ ನಿಲ್ದಾಣದ ಮದ್ಯದಲ್ಲಿ, ಪಾರ್ಕ್ ನಿರ್ಮಾಣದ ಉದ್ದೇಶವಿದ್ದು ಅದು ನನೆಗುದಿಗೆ ಬಿದ್ದಿದೆ. ಬೇಸಿಗೆಯಲ್ಲಿ ಬಸ್ ನಿಲ್ದಾಣದಲ್ಲಿ ನೆರಳನ್ನು ಅರಸಿ ಅಲೆದಾಡಬೇಕಿದೆ, ಹಾಗೂ ಮಳೆಗಾಲದಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು ಪರದಾಡಬೇಕಾಗುತ್ತದೆ.
ಮಳೆಗಾಲದಲ್ಲಿ ಮಳೆ ನೀರು ತಂಗುದಾಣವನ್ನೆಲ್ಲಾ ಆಕ್ರಮಿಸುತ್ತಿದ್ದು, ನಿಲ್ಲಲೂ ಕೂಡ ಗೇಣುದ್ದ ಜಾಗ ಇರೋದಿಲ್ಲ ಎಲ್ಲಾ ಕಡೆ ಮಳೆ ನೀರು ಆವರಿಸಿರುತ್ತದೆ.


ತಾಲೂಕು ಕೇಂದ್ರದ ಬಸ್ ನಿಲ್ದಾಣದ ದುರಾಸ್ಥೆಯಿಂದಾಗಿ, ತಾಲೂಕಿನ ಪ್ರತಿಷ್ಠೆಗೆ ಭಂಗ ವುಂಟಾಗಲಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೌಚಾಲಯ ಅವ್ಯವಸ್ಥೆಯ ಆಗರವಾಗಿದ್ದು ನಿರ್ವಹಣೆ ತೀರಾ ಕಳಪೆಯಾದ್ಧಾಗಿದ್ದು, ನೈರ್ಮಲ್ಯತೆ ಸಂಪೂರ್ಣ ಕಾಣೆಯಾಗಿರುವ ಕಾರಣ ಬಸ್ ನಿಲ್ದಾಣದ ಬಹುಪಾಲು ದುರ್ನಾಥ ಬೀರುತ್ತಿದೆ.
ಶೌಚಾಲಯದಲ್ಲಿ ಪುರುಷ ಸಿಬ್ಬಂದಿ ಹಾಗೂ ಓರ್ವ ಮಹಿಳಾ ಸಿಬ್ಬಂದಿ ನೇಮಿಸಬೇಕಿದೆ, ಎಂಬ ಸಾರ್ವಜನಿಕರ ಬೇಡಿಕೆ ಬಹು ಕಾಲದಿಂದಲೂ ನೆರವೇರಿಲ್ಲ.
ಸೂಕ್ತ ನಿರ್ವಹಣೆ ಕಾಣದ ಶೌಚಾಲಯದಿಂದಾಗಿ, ಬಸ್ ನಿಲ್ದಾಣ “ಬ್ಯಾಡ್ ಸೆಂಟ್” ಸಿಂಪಡಿಸಿದಂತಾಗಿದ್ದು ಬಸ್ ಪ್ರಯಾಣಿಕರು ಹಾಗೂ ಸಿಬ್ಬಂದಿ ಮತ್ತು ಸಾರ್ವಜನಿಕರು ಮೂಗು ಮುಚ್ಚಿಕೊಂಡಿರುವ ದುರಾವಸ್ಥೆ ಸೃಷ್ಠಿಯಾಗಿದೆ. ನಿಲ್ದಾಣದ ಖಾಲಿ ಜಾಗಗಳು ಕಸ ತ್ಯಾಜ್ಯ ಗಿಡ ಗಂಟೆಗಳ ಸ್ಟಾಕ್ ಯಾರ್ಡ್ ಗಳಾಗಿದ್ದು, ಮಲ ಮೂತ್ರ ವಿಸರ್ಜಿಸುವ ಸ್ಥಳಗಳಾಗಿದೆ.
ಮಹಿಳೆಯರು ತಂಗುವ ತಂಗುದಾಣ ತುಂಬಾ ಚಿಕ್ಕದಾಗಿದ್ದು, ಸಾಕಷ್ಟು ಸ್ಥಳಾವಕಾಶವಿಲ್ಲದೇ ನಾಮಕಾವಸ್ಥೆಗೆ ನಿರ್ಮಿಸಲಾಗಿದ್ದು ಹಾಗಾಗಿ ಅದು ಇದ್ದೂ ಇಲ್ಲದಂತಾಗಿದೆ.
ಬಸ್ ನಿಲ್ದಾಣಕ್ಕೆ ಭಾರೀ ಗಾತ್ರದ ನಾಮಫಲಕ ಹಾಕಬೇಕಿದೆ, ಆದ್ರೆ ಇಲ್ಲಿ ನಾಮಕಾವಸ್ಥೆಗೆ ಹಾಕಿದ್ದು ತುಂಬಾ ಚಿಕ್ಕ ನಾಮಫಲಕ ಹಾಕಿದ್ದಾರೆ. ಇದು ಪ್ರಯಾಣಿಕರ ದೌರ್ಭಾಗ್ಯವಾಗಿದೆ.
ರಾತ್ರಿಹೊತ್ತಲ್ಲಿ ಕೆಲವೊಮ್ಮೆ ಬಸ್ ನಿಲ್ದಾಣವನ್ನು ಎಲ್ಲಿದೆ ಎಂದು ಹುಡುಕಾಡಬೇಕಿದೆ, ಆಗಾಗ ಕೈ ಕೊಡುವ ಬಲ್ಪಗಳ ಕಾರಣದಿಂದಾಗಿ ಕಗ್ಗತ್ತಲಲ್ಲಿ ಸಾರ್ವಜನಿಕರು ಹಾಗೂ ಪ್ರಯಾಣಿಕರು ಪರದಾಡುವಂತಹ ಸನ್ನಿವೇಶ ಜರುಗುತ್ತಿವೆ.
ಬಸ್ ನಿಲ್ದಾಣದಲ್ಲಿ ಬಸ್ ಗಳನ್ನು ಅಸಂಬದ್ದವಾಗಿ ನಿಲ್ಲಿಸುವುದು ಸಾಮಾನ್ಯವಾಗಿದೆ.
ನಿಗದಿತ ಸ್ಥಳಗಳಲ್ಲಿ ನಿಲ್ಲಿಸದಿರುವ ಕಾರಣ ಬಸ್ ಗಾಗಿ ಪ್ರಯಾಣಿಕರು ವಿನಾಕಾರಣ ಅಲೆದಾಡುತ್ತಿರುತ್ತಾರೆ.
ವಿಚಾರಣೆ ಕೇಂದ್ರದಲ್ಲಿನ ಸಿಬ್ಬಂದಿಯವರು ಸಾರ್ವಜನಿಕರೊಂದಿಗೆ, ಸ್ಪಂಧಿಸುವಲ್ಲಿ, ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳಿವೆ. ಒಟ್ಟಾರೆಯಾಗಿ ಬಸ್ ನಿಲ್ದಾಣ ಅವ್ಯವಸ್ಥೆಗಳ ತಾಣವಾಗಿದ್ದು, ಸಾಕಷ್ಟು ಬವಣೆಗಳ ತಾಣವಾಗಿದೆ.
ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರ ಪಾಲಿಗೆ ಈ ಮೂಲಕ ಬಸ್ ನಿಲ್ದಾಣ ಇದ್ದೂ ಇಲ್ಲದಂತಾಗಿದೆ. ಬಸ್ ನಿಲ್ದಾಣ ಪುಂಡ ಪೋಕರಿಗಳ ಅಡ್ಡೆಯಾಗುತ್ತಿದೆ, ಬಸ್ ನಿಲ್ದ‍ಾಣದಲ್ಲಿ ಪಡ್ಡೆ ಹುಡುಗರು ಬೇಕಾ ಬಿಟ್ಟಿ ಬೈಕ್ ರೈಡಿಂಗ್ ಮಾಡುವುದು ಸಾಮಾನ್ಯವಾಗಿದೆ. ನಿಲ್ದಾಣದ ತುಂಬೆಲ್ಲಾ ಗುಟ್ಕಾ ತಿಂದು ಹುಗುಳುತ್ತಿದ್ದಾರೆ, ಬಸ್ ನಿಲ್ದಾಣ ಸದಾ ಸಿಗರೇಟಿನ ಹೊಗೆ ಹಬ್ಬಿರುತ್ತದೆ. ಬಸ್ ನಿಲ್ದಾಣದಲ್ಲಿ ದಿನದ ಬಹುತೇಕ ಸಮಯದಲ್ಲಿ, ಪಡ್ಡೆ ಹುಡುಗರ ಗುಂಪು ಸಿಗರೇಟ್ ಸೇದೋದು ತುಂಬಾ ಹೈಲೇಟ್ ಆಗಿ ಕಾಣುತ್ತದೆ. ಸಾರ್ವಜನಿಕ ಸ್ಥಳದಲ್ಲಿ ದೂಮಪಾನ ಮದ್ಯ ಪಾನ ನಿಷೇಧಿಸಿ ಶಾಸನ ಹೊರಡಿಸಲಾಗಿದೆ, ಕೂಗಳತೆ ದೂರದಲ್ಲಿ ಪೊಲೀಸ್ ಠಾಣೆ ಇದೆಯಾದರೂ ಏನೂ ಪ್ರಯೋಜನವಾಗಿಲ್ಲ. ಕೂಡ್ಲಿಗಿ ಪೊಲೀಸರು ತಮಗೆ ವೈಯಕ್ತಿಕ ಆದಾಯ ಬರೋದಿದ್ರೆ ಮಾತ್ರ ರಿಸ್ಕ್ ತಗೋತಾರಂತೆ, ಇಲ್ಲಾಂದ್ರೆ ತಲಿನೇ ಕೆಡೆಸಿಕೊಳ್ಳೋದಿಲ್ಲವಂತೆ ಹಾಗಂತ ಸಾರ್ವಜನಿಕರೇ ಹೇಳುತ್ತಿದ್ದಾರೆ. ಪುಂಡರು ಪೋಕರಿಗಳು ಬಸ್ ನಿಲ್ದಾಣವನ್ನು, ಮದ್ಯ ಸೇವಿಸುವ ಕ್ಲಬ್ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಇದೆಲ್ಲಾ ತಿಳಿದೂ ಕೂಡ್ಲಿಗಿ ಪೊಲೀಸರು ಬಿಸಿ ಮುಟ್ಟಿಸುವ ಧೈರ್ಯ ಮಾಡುತ್ತಿಲ್ಲ, ತಮಗೂ ಇದಕ್ಕೂ ಸಂಬಂಧ ಇಲ್ಲ ಅನ್ನೋ ರೀತಿ ವರ್ತಿಸುತ್ತಿದ್ದಾರೆ. ಕೂಡ್ಲಿಗಿ ಪೊಲೀಸರ ವಿರುದ್ಧ ಮಹಿಳಾ ಹೋರಾಟಗಾರರು, ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಶಾಲಾ ಕಾಲೇಜ್ ರಸ್ತೆಯಲ್ಲಿ ಹಾಗೂ ಬಸ್ ನಿಲ್ದಾಣದೊಳಗೆ ಅಸಂಬದ್ಧ ಬೈಕ್ ರೈಡ್, ಶಾಲಾ ಕಾಲೇಜುಗಳ ಬಳಿ ದೂಮಪಾನ ಮಾಡೋ ಪುಂಡ ಪೋಕರಿಗಳ ವಿಷಯದಲ್ಲಿ , ಕೂಡ್ಲಿಗಿ ಪೊಲೀಸರು ಅತಿಯಾದ ಮೆದು ಧೋರಣೆಗೆ ತಾಳಿರುವುದು, ಸಾರ್ವಜನಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಬಸ್ ಸ್ಯ್ಟಾಂಡ್ ದೂಮ ಪಾನ ಮತ್ತು ಮದ್ಯ ವ್ಯಸನಿಗಳ ಪಾಲಿಗೆ, ಸಾರ್ವಜನಿಕ ಮದ್ಯ ಹಾಗೂ ದೂಮ ಪಾನದ ಕ್ಲಬ್ ನಂತೆ ಪರಿವರ್ತನೆಆಗಿದೆ ಅನ್ನೊ ಕೂಗಿದೆ. ಬಸ್ ನಿಲ್ದಾಣ ಪುಂಡ ಪುಡಾರಿಗಳ ಆವಾಸ ಸ್ಥಾನವಾಗಿದ್ದು, ಸಂಬಂಧಿಸಿದ ಇಲಾಖಾಧಿಕಾರಿಗಳು ಅಗತ್ಯ ಕ್ರಮ ಜರುಗಿಸಿ ನಿಯಂತ್ರಿಸಿ ಮುತುವರ್ಜಿ ತೋರಬೇಕಿದೆ ಎಂದು ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಮಹಿಳೆಯರಿಗಾಗಿ ವಿಶ್ರಾಂತಿ ಕೊಠಡಿ ಇದೆಯಾದರೂ ತುಂಬಾ ಚಿಕ್ಕದಾಗಿದ್ದು, ಬೃಹತ್ ಹಾಗೂ ಸುಸಜ್ಜಿತ ಸೌಕರ್ಯಗಳುಳ್ಳ ಮಹಿಳೆಯರ ವಿಶ್ರಾಂತಿ ಕೊಠಡಿ ನಿರ್ಮಿಸಬೇಕಿದೆ. ತಾಲೂಕು ಕೇಂದ್ರವಾಗಿದ್ದು ನಿತ್ಯವೂ ಹತ್ತಾರು ಶಾಲಾ ಕಾಲೇಜು ಗಳ, ಸಾವಿರಾರು ವಿದ್ಯಾರ್ಥಿನಿಯರು ಮತ್ತು ನೂರಾರು ಮಹಿಳೆಯರು. ನಿಲ್ದಾಣದಲ್ಲಿ ಸಾಕಷ್ಟು ಕಾಲ ಕಾಯುವುದು ಸಾಮಾನ್ಯ, ಅವರ ಸುರಕ್ಷತೆಗಾಗಿ ಹಾಗೂ ಮಹಿಳಾ ಪ್ರಯಾಣಿಕರ ಕ್ಷೇಮಕ್ಕಾಗಿ. ಶ್ರೀಘ್ರವೇ ನಿಲ್ದಾಣದಲ್ಲಿ ಪೊಲೀಸ್ ಇಲಾಖೆ ತಮ್ಮ ಮಹಿಳಾ ಸಿಬ್ಬಂದಿ ನೇಮಿಸಿ, ವಿದ್ಯಾರ್ಥಿನಿಯರು ಹಾಗೂ ಯುವತಿಯರು ಮತ್ತು ಮಹಿಳೆಯರು. ನೆಮ್ಮದಿಯಾಗಿರುವಂತೆ ಕ್ರಮ ಕೈಗೊಳ್ಳಬೇಕಿದೆ ಎಂದು, ಹಿರಿಯ ನಾಗರೀಕರು ಹಾಗೂ ವಿದ್ಯಾರ್ಥಿಗಳು ಸಾರ್ವಜನಿಕರು ಈ ಮೂಲಕ ಒತ್ತಾಯಿಸಿದ್ದಾರೆ. ಎಲ್ಲಾ ಬಸ್ ಗಳು ರಾತ್ರಿಹೊತ್ತಲ್ಲಿ ಖಡ್ಡಾಯವಾಗಿ ಬಸ್ ನಿಲ್ದಾಣ ಪ್ರವೇಶಿಸುವಂತೆ, ಅಗತ್ಯ ಕ್ರಮ ಜರುಗಿಸಬೇಕಿದೆ. ಹೊಸಪೇಟೆ ಯಿಂದ ಕೂಡ್ಲಿಗಿ ಪ್ರವೇಶಿಸುವ, ಹಾಗೂ ಕೂಡ್ಲಿಗಿಯಿಂದ ಹೊಸಪೇಟೆ ಕಡೆ ತೆರಳುವ ಬಸ್ ಗಳು. ಪಟ್ಟಣದ ಮದಕರಿ ವೃತ್ತದಿಂದ ಕೊಟ್ಟೂರು ರಸ್ತೆ ಮಾರ್ಗವಾಾಗಿ ಸಂಚರಿಸುತ್ತಿದ್ದು, ಇದರಿಂದಾಗಿ ರಾಜೀವಗಾಂಧೀನಗರ ಹಾಗೂ 15, 16, ವಾರ್ಡ್ ಗಳ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಮಹಿಳೆಯರು ವೃದ್ಧರು ವಿಕಲಾಂಗರು ಹಿರಿಯ ನಾಗರೀಕರು ತೀವ್ರ ಪರದಾಡುವಂತಾಗಿದೆ, ಸಂಬಂಧಿಸಿದ ಸಾರಿಗೆ ಇಲಾಖಾಧಿಕಾರಿಗಳು ಅಗತ್ಯ ಕ್ರಮ ಜರುಗಿಸಬೇಕಿದೆ ನಿರ್ಲಕ್ಷ್ಯ ತೋರಿದರೆ ಬಸ್ ತಡೆದು ಪ್ರತಿಭಟಿಸಲಾಗುವುದು ಎಂದು ಹೋರಾಟಗಾರರು ಎಚ್ಚಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು