4:29 AM Thursday16 - May 2024
ಬ್ರೇಕಿಂಗ್ ನ್ಯೂಸ್
ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,…

ಇತ್ತೀಚಿನ ಸುದ್ದಿ

ಹಾಸ್ಟೆಲ್ ನಲ್ಲಿ ಹಳಸಿದ ಅನ್ನ: ಕುಲಪತಿ ಬಂಗ್ಲೆ ಎದುರು ವಿದ್ಯಾರ್ಥಿಗಳಿಂದ ಪಾತ್ರೆ, ಪಗಡೆ ಸಹಿತ ರಾತ್ರಿ ಪ್ರತಿಭಟನೆ

02/05/2024, 14:37

ಮಂಗಳೂರು(reporterkarnataka.com): ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಬರುವಂತಹ ಪುರುಷರ ವಸತಿ ನಿಲಯದಲ್ಲಿ ಹಳಸಿದ ಅನ್ನ ನೀಡುವುದನ್ನು ಪ್ರತಿಭಟಿಸಿ ವಿದ್ಯಾರ್ಥಿ ಪರಿಷತ್ತಿನ ನೇತೃತ್ವದಲ್ಲಿ ಪಾತ್ರೆಗಳನ್ನೆಲ್ಲ ಹೊತ್ತುಕೊಂಡು ಹೋಗಿ ಕುಲಪತಿಗಳ ಬಂಗಲೆಯ ಎದುರು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ಪುರುಷರ ವಸತಿ ನಿಲಯದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತಿದ್ದು, ಈ ಕುರಿತಂತೆ ನಿಲಯ ಪಾಲಕರಿಗೆ ಹಲವು ಬಾರಿ ಹಾಸ್ಟೆಲ್ ವಿದ್ಯಾರ್ಥಿ ಪರಿಷತ್ತು ಗಮನಕ್ಕೆ ತಂದರೂ ಕೂಡ, ನಿಲಯಪಾಲಕರು ಇದನ್ನ ನಿರ್ಲಕ್ಷಿಸಿದ್ದ ಕಾರಣಕ್ಕಾಗಿ ಕುಲಪತಿಯವರಿಗೆ ಪತ್ರದ ಮೂಲಕ ಸಮಸ್ಯೆಯನ್ನು ಪರಿಹರಿಸುವಂತೆ ಮನವಿ ಸಲ್ಲಿಸಲಾಗಿತ್ತು.


ಆಗ ಅವರು ಅದಕ್ಕೆ ಸ್ಪಂದನೆ ನೀಡಿದರು. ಆದರೆ ಅವರ ಆಶ್ವಾಸನೆಗೆ ಯಾವ ರೀತಿಯ ಬದಲಾವಣೆಗಳು ಹಾಸ್ಟೆಲ್ ನಲ್ಲಿ ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಮೇ 1ರಂದು ರಾತ್ರಿ 8.30 ಸುಮಾರಿಗೆ ಹಾಸ್ಟೆಲ್ ನಲ್ಲಿ ಮಧ್ಯಾಹ್ನ ಉಳಿದ ಹಳಸಿದ ಅನ್ನವನ್ನೇ ರಾತ್ರಿಯ ಊಟಕ್ಕೆ ಬಡಿಸಿದ ಕಾರಣ ವಿದ್ಯಾರ್ಥಿಗಳು ಆಕ್ರೋಶಗೊಂಡು ಹಾಸ್ಟೆಲ್ ವಿದ್ಯಾರ್ಥಿ ಪರಿಷತ್ತಿನ ನೇತೃತ್ವದಲ್ಲಿ ಪಾತ್ರೆಗಳನ್ನೆಲ್ಲ ಹೊತ್ತುಕೊಂಡು ಹೋಗಿ ಕುಲಪತಿಗಳ ಬಂಗಲೆಯ ಎದುರು ಪ್ರತಿಭಟನೆ ನಡೆಸಿದರು. ತಕ್ಷಣ ಪೊಲೀಸ್ ಸಿಬ್ಬಂದಿಯೂ ಧಾವಿಸಿ ಪ್ರತಿಭಟನೆಯನ್ನು ತೆರವುಗೊಳಿಸಲು ಪ್ರಯತ್ನಿಸಿದರು. ಆದರೆ ವಿದ್ಯಾರ್ಥಿಗಳು ಸಮಸ್ಯೆಗೆ ಪರಿಹಾರ ಸಿಗುವವರೆಗೆ ಪ್ರತಿಭಟನೆಯಿಂದ ಮೇಲೆ ಏಳುವುದಿಲ್ಲ ಎಂಬ ಎಚ್ಚರಿಕೆ ನೀಡಿ ರಾತ್ರಿ 12 ಗಂಟೆವರೆಗೆ ಪ್ರತಿಭಟನೆಯನ್ನು ಮುಂದುವರಿಸಿದ್ದರು, ಇದರ ಪರಿಣಾಮವಾಗಿ ಕುಲ ಸಚಿವರು, ಕುಲಸಚಿವರು ಪರೀಕ್ಷಾಂಗ ವಿಭಾಗ ಹಾಗೂ ಹಣಕಾಸು ಅಧಿಕಾರಿಗಳು ಆ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ, ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಭೋಜನಾಯಕ್ಕೆ ಆಗಮಿಸಿ ವಾಸ್ತವ ಸ್ಥಿತಿಯನ್ನು ಪ್ರತ್ಯಕ್ಷವಾಗಿ ಅರಿತುಕೊಂಡರು. ಹಾಗೂ ವಿದ್ಯಾರ್ಥಿಗಳು ನಿಲಯ ಪಾಲಕರನ್ನು ತಕ್ಷಣವೇ ವಜಾ ಮಾಡುವಂತೆ ಆಗ್ರಹಿಸಿದ ಕಾರಣಕ್ಕಾಗಿ ಅದಕ್ಕೆ ಒಪ್ಪಿಗೆಯನ್ನು ಸೂಚಿಸಿದರು.
ಬೆಂಗಳೂರಿನಲ್ಲಿದ್ದ ಕುಲಪತಿಯವರು ಫೋನ್ ಮೂಲಕ ವಿದ್ಯಾರ್ಥಿ ಗಳ ಸಮಸ್ಯೆ ಬಗೆಹರಿಸುವಂತೆ, ಹಾಗೂ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಅಸ್ವಾಸನೆ ನೀಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು