7:15 AM Sunday3 - March 2024
ಬ್ರೇಕಿಂಗ್ ನ್ಯೂಸ್
ದ. ಕ. ಮತ್ತು ಉಡುಪಿ ಪಂಚಾಯತ್‌ರಾಜ್ ಹಾಗೂ ನಗರ ಸ್ಥಳೀಯಾಡಳಿತ ಜನಪ್ರತಿನಿಧಿಗಳ ಕ್ರೀಡೋತ್ಸವ… ನವ ಮಂಗಳೂರು ಬಂದರು: 270 ಪ್ರಯಾಣಿಕರ ಹೊತ್ತ 5ನೇ ಕ್ರೂಸ್ ಹಡಗು ಆಗಮನ ಪಾಲಿಕೆಯ ಚರಿತ್ರೆಯಲ್ಲೇ ಮೊದಲ ಬಾರಿಗೆ ಅಂಗಳಕ್ಕೂ ತೆರಿಗೆ: ಪ್ರತಿಪಕ್ಷದ ನಾಯಕ ಪ್ರವೀಣ್ ಚಂದ್ರ… ಅಗಲಿದ ಹಿರಿಯ ಪತ್ರಕರ್ತ, ಸುದ್ದಿಲೋಕದ ಮೇರು ಪರ್ವತ ಮನೋಹರ್ ಪ್ರಸಾದ್ ಗೆ ಮಾಜಿ… ಹುಳಗಳಿದ್ದ ಅಕ್ಕಿಯಿಂದಲೇ ಬಿಸಿಯೂಟ ತಯಾರಿ: ವಡೇರಹಳ್ಳಿ ಸರಕಾರಿ ಪ್ರಾಥಮಿಕ ಶಾಲೆ ವಿರುದ್ಧ ಗ್ರಾಮಸ್ಥರ… ಕ್ಯಾರಟ್‌ಲೇನ್: ತನಿಷ್ಕ್ ಪಾಲುದಾರಿಕೆಯಲ್ಲಿ ಮಂಗಳೂರಿನಲ್ಲಿ 2ನೇ ಮಳಿಗೆ ಆರಂಭ ಸುದ್ದಿಲೋಕದ ಮೇರು ಪರ್ವತ, ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಇನ್ನಿಲ್ಲ 44 ನಿಗಮ- ಮಂಡಳಿಗಳಿಗೆ ಅಧ್ಯಕ್ಷರ ನೇಮಕ: ಮಮತಾ ಗಟ್ಟಿಗೆ ಗೇರು, ಸದಾಶಿವ ಉಳ್ಳಾಲ್… ಬಲ್ಲಾಳರಾಯ ದುರ್ಗ: ಚಾರಣಕ್ಕೆ ಬಂದು ದಟ್ಟಾರಣ್ಯದಲ್ಲಿ ನಾಪತ್ತೆಯಾಗಿದ್ದ ಯುವಕ ಪತ್ತೆ: 3 ತಾಸಿಗೂ… ಶಕ್ತಿನಗರ: ಪೈಟಿಂಗ್ ಮಾಡುತ್ತಿದ್ದಾಗ ಎರಡನೇ ಮಹಡಿಯಿಂದ ಕೆಳಗೆ ಬಿದ್ದು ಯುವಕ ದಾರುಣ ಮೃತ್ಯು

ಇತ್ತೀಚಿನ ಸುದ್ದಿ

ವಾಯ್ಸ್ ಆಫ್ ಆರಾಧನಾ; ನವೆಂಬರ್ ತಿಂಗಳ ಟಾಪರ್ ಆಗಿ ಹೇತಿಶ್ರೀ ಎಚ್.ಎನ್. ಹಾಗೂ ಸುಭಿಕ್ಷ ಅನಿಲ್ ಮುಂಡಗೋಡ ಆಯ್ಕೆ

06/12/2023, 17:07

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ನವೆಂಬರ್ ತಿಂಗಳ ಟಾಪರ್ ಆಗಿ ಹೆತಿಶ್ರೀ ಎಚ್.ಎನ್. ಹಾಗೂ ಸುಭಿಕ್ಷ ಅನಿಲ್ ಮುಂಡಗೋಡ ಹುಬ್ಬಳ್ಳಿ ಆಯ್ಕೆಯಾಗಿದ್ದಾರೆ.


ಬೆಂಗಳೂರಿನ ನಿವಾಸಿಯಾದ ನವೀನ್ ಎಚ್.ಎಂ. ಹಾಗೂ
ದೀಪಾ ಕೆ.ಎಚ್. ದಂಪತಿಯ ಪುತ್ರಿ ಹೇತಿಶ್ರೀ ಎಚ್.ಎನ್.
ಯುಕೆಜಿಯಲ್ಲಿ ಓದುತ್ತಿದ್ದು ಇದರ ಜೊತೆ ಸಂಗೀತ, ಭರತನಾಟ್ಯ, ಚಿತ್ರಕಲೆ ಹಾಗೂ ಡ್ಯಾನ್ಸ ಕಲಿಯುತ್ತಿದ್ದಾಳೆ.
ಹೇತಿಶ್ರೀ ತನ್ನ 4ನೇ ವಯಸ್ಸಿನಲ್ಲಿ ಕಲಾಕುಂಚ ಸಂಸ್ಥೆಯಿಂದ ಆಯೇೂಜಿಸಿದ್ದ ರಾಜ್ಯಮಟ್ಟದ ಆಕಷ೯ಕ ಪೋಟೊಸ್ಪಥೆ೯ಯಲ್ಲಿ ಪ್ರಥಮ ಬಾರಿಗೆ ಬಹುಮಾನ ಪಡೆದಿದ್ದಳು. ಇದರ ಜತೆಗೆ ಇಂಡಿಯಾ ಬುಕ್ ಆಫ್ ರೆಕಾಡ೯ನಲ್ಲಿ ಪ್ರಶಂಸೆ ಪಡೆದಿದ್ದಾಳೆ.
ಕಲಾದಪ೯ಣ ಆರ್ಟ ರಿಪ್ಲೆಕ್ಟ್ ಸಂಸ್ಥೆಯಿಂದ 2023ರ ಕಲಾದಪ೯ಣ ವಾಷಿ೯ಕ ಪ್ರಶಸ್ತಿ, ವಾಯ್ಸ್ ಆಫ್ ಆರಾಧನಾ ಸಂಸ್ಥೆಯಿಂದ
ಸೇವಾರತ್ನ ಪ್ರಶಸ್ತಿ, ಜನಸ್ಪಂದನ ಕಲಾಸಿರಿ ಪ್ರಶಸ್ತಿ, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಬಹುಮಾನ ಪಡೆದಿದ್ದಾಳೆ. ಲಿಟ್ಲ್ ಸೂಪರ್ ಸ್ಟಾರ್ ಹಾಗೂ ಲಿಟ್ಲ್ ಕಿಲಾಡೀಸ್ ಎಂಬ ಸಿರಿಕನ್ನಡ ಚಾನಲ್ ನಲ್ಲಿ ಭಾಗವಹಿಸಿದ್ದಾರೆ.
ಅನಿಲ್ ಕುಮಾರ್ ಹಾಗೂ ಶೈಲಜಾ ದಂಪತಿಯ ಪುತ್ರಿಯಾದ ಸುಭಿಕ್ಷ ಅನಿಲ್ ಮುಂಡಗೋಡ ಅವರು
ರ್ಬ್ಲೂ ಮಿಂಗ್ ಬರ್ಡ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಕೆಜಿ ಯಲ್ಲಿ ಓದುತ್ತಿದ್ದಾಳೆ‌.
ಚಿತ್ರ ಬಿಡಿಸುವುದು, ಕರಾಟೆ, ಯೋಗ, ಭರತನಾಟ್ಯ ಯಕ್ಷಗಾನ, ರಿಂಗ್ ಡ್ಯಾನ್ಸ್, ಸಂಗೀತ, ಭಜನೆ, ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಪ್ರತಿಭೆ. ಎ ಟು ಝಡ್
ವರೆಗೆ ದೇವರ ನಾಮ, 12 ರಾಶಿಗಳು, ಶ್ಲೋಕ, 27 ರಾಶಿಗಳು, ನವಗ್ರಹ ರಸಪ್ರಶ್ನೆ ಕಥೆ ಹೇಳುವುದು ಮಾತುಗಾರಿಕೆ ವಿಶೇಷ ಆಸಕ್ತಿ ಹೊಂದಿದ್ದಾಳೆ.
ತನ್ನ ಮೂರನೇ ವಯಸ್ಸಿನಿಂದ ನಾಟ್ಯ ಮಯೂರಿ ನೃತ್ಯ ಕಲಾ ಕೇಂದ್ರ ಮುಂಡಗೋಡ
ಶಶಿರೇಖಾ ಬೈಜು ಅವರ ಹತ್ತಿರ ಭರತನಾಟ್ಯ ಹಾಗೂ
ಕೂಚುಪುಡಿ ನೃತ್ಯವನ್ನು ಅಭ್ಯಾಸ ಮಾಡುತ್ತಿದ್ದಾಳೆ. ಐದನೇ ವಯಸ್ಸಿನಲ್ಲಿ ಕೂಚುಪುಡಿ ನೃತ್ಯವನ್ನು ಮಾಡಿ ಎಲ್ಲರ ಮೆಚ್ಚುಗೆ ಪಡೆದಿರುತ್ತಾಳೆ‌.
ಸಂಗೀತ ಅಭ್ಯಾಸವನ್ನು ರೇಖಾ ಮರಾಠ ಅವರ ಹತ್ತಿರ, ಕರಾಟೆಯನ್ನು ಸುರೇಂದ್ರ ನ್ಯಾಸ
ಅವರಿಂದ, ವೆಸ್ಟರ್ನ್ ಡ್ಯಾನ್ಸ್ ಅನ್ನು ಸಂದೀಪ್ ಕೋರಿಯವರ ಹತ್ತಿರ ಅಭ್ಯಾಸ ಮಾಡುತ್ತಿದ್ದಾಳೆ.
ಯೋಗವನ್ನು ಶರತ್ ಮಾರ್ಗಿಲಡ್ಕ ಅವರ ಮಾರ್ಗದರ್ಶನದಲ್ಲಿ ಕಲಿಯುತ್ತಿದ್ದಾಳೆ. ಗಿನ್ನಿಸ್
ವರ್ಲ್ಡ್ ರೆಕಾರ್ಡ್ ಸಂಸ್ಥೆಯು ಆಯೋಜಿಸಿದ ಒಂದು ನಿಮಿಷದಲ್ಲಿ ಅತಿ ಹೆಚ್ಚು ಬಾರಿ ಭುಜಂಗಾಸನ ಮತ್ತು ಪರ್ವತಾಶನ ಮಾಡುವ ಮೂಲಕ ಅಂತಾರಾಷ್ಟ್ರೀಯ ಯೋಗ ಬುಕ್ ಆಫ್ ರೆಕಾರ್ಡಿನಲ್ಲಿ ಭಾಗವಹಿಸಿ ಪ್ರಮಾಣ ಪತ್ರ ಮತ್ತು ಪದಕವನ್ನು ಪಡೆದಿದ್ದಾಳೆ. ಶರತ್ ಮಾರ್ಗಿಲಡ್ಕ ಅವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ನಲ್ಲಿತೀರ್ಥದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೇವಾರತ್ನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ನವರಾತ್ರಿಯಲ್ಲಿ ಮಂಗಳ ದೇವಿಯಲ್ಲಿ ಭರತನಾಟ್ಯ ಸೇವೆ ಮಾಡಿದ್ದಾಳೆ. ಹಲವಾರು ಕಡೆ ಭರತನಾಟ್ಯ ಕಾರ್ಯಕ್ರಮ ಮಾಡಿದ್ದಾಳೆ. ತನ್ನ ಎರಡನೇ ವಯಸ್ಸಿನಿಂದ ಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಳೆ. ‌ವಾಟ್ಸಾಪ್ ಆರಾಧನಾ ಪೇಜ್ ಅಲ್ಲಿ ಎರಡು ಬಾರಿ ವಿಜೇತಳಾಗಿದ್ದಾಳೆ. ಹಲವಾರು ಕ್ರೀಡೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರ ಬಂದಿದೆ. ಛೋಟಾ ಚಾಂಪಿಯನ್ ಅಡಿಶನ್ ನಲ್ಲಿ ಭಾಗವಹಿಸಿದ್ದಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು