ಇತ್ತೀಚಿನ ಸುದ್ದಿ
ಬಿಜೆಪಿ ಟಿಕೆಟ್ ಹೆಸರಿನಲ್ಲಿ ಬಹುಕೋಟಿ ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಕಾರು ಬಾಗಲಕೋಟೆಯಲ್ಲಿ ಪತ್ತೆ
17/09/2023, 15:39

ಬಾಗಲಕೋಟೆ(reporterkarnataka.com): ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಬಹುಕೋಟಿ ವಂಚಿಸಿದ ಪ್ರಕರಣ ಸಂಬಂಧ ಬಂಧಿತಳಾದ ಚೈತ್ರಾ ಕುಂದಾಪುರ ಅವರ ಕಾರು ಬಾಗಲಕೋಟೆಯಲ್ಲಿ ಪತ್ತೆಯಾಗಿದೆ.
ಉದ್ಯಮಿ ಗೋವಿಂದ ಬಾಬು ಅವರಿಗೆ ವಂಚಿಸಿದ್ದಾರೆ ಎನ್ನಲಾದ 5 ಕೋಟಿ ರೂಪಾಯಿ ಹಣದಲ್ಲೇ ಚೈತ್ರಾ ಕುಂದಾಪುರ ಕಿಯಾ ಕಾರು ಖರೀದಿಸಿದ್ದಳು ಎನ್ನಲಾಗಿದೆ. ಇದೀಗ ಆ ಕಾರು ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಪತ್ತೆಯಾಗಿದೆ. ಮುಧೋಳದ ಹಿಂದೂ ಕಾರ್ಯಕರ್ತ ಕಿರಣ್ ಎಂಬವರ ಮನೆಯಲ್ಲಿ ಕಾರು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.