12:04 PM Monday5 - June 2023
ಬ್ರೇಕಿಂಗ್ ನ್ಯೂಸ್
ರೈಲು ದುರಂತ ಗಾಯಾಳುಗಳ ಪ್ರಧಾನಿ ಮೋದಿ ಭೇಟಿ: ಯೋಗಕ್ಷೇಮ ವಿಚಾರಣೆ; ಮಡಿದವರಿಗೆ 10… ಕಡಲನಗರಿ ಕುಡ್ಲದಲ್ಲಿ 2 ದಿನಗಳ ‘ಹಲಸಿನ ಹಬ್ಬ’; ಜಾಕ್ ಫ್ರುಟ್ ಐಸ್ ಕ್ರೀಂ,… ಫಲ್ಗುಣಿ ನದಿಗೆ ರುಚಿ ಗೋಲ್ಡ್ ತ್ಯಾಜ್ಯ ವಿಸರ್ಜಿಸುವ ಕೊಳವೆ ಪತ್ತೆ: ನಾಗರಿಕ ಹೋರಾಟ… ಒಡಿಸ್ಸಾ ರೈಲು ದುರಂತ: ಕಳಸದಿಂದ ಸಮೇದ್ ಶಿಖರ್ಜಿ ಯಾತ್ರೆಗೆ ತೆರಳಿದ್ದ 110 ಮಂದಿ… ಇವರೇ ಅದೃಷ್ಟವಂತ 110 ಮಂದಿ ಕನ್ನಡಿಗರು!: ಒಡಿಶಾದಲ್ಲಿ ಭೀಕರ ದುರಂತಕ್ಕೀಡಾದ ರೈಲಿನ ಪ್ರಯಾಣಿಕರು;… ಒಡಿಶಾ: ಭೀಕರ ರೈಲು ದುರಂತ; ಕರ್ನಾಟಕದ 110 ಮಂದಿ ಕನ್ನಡಿಗ ಪ್ರಯಾಣಿಕರು ಸೇಫ್ ಲೋಕಸಭೆ ಚುನಾವಣೆ: ನಳಿನ್, ಡಿವಿ, ಮಂಗಳಾ ಅಂಗಡಿ ಸಹಿತ 10ಕ್ಕೂ ಹೆಚ್ಚು ಸಂಸದರು… ಮಾಣಿ: ಬಾಲವಿಕಾಸ ಅಂಗ್ಲ ಮಾಧ್ಯಮ ಶಾಲೆ ಕಚೇರಿ ಉದ್ಘಾಟನೆ; ವೆಲ್ ಕಮ್ ಡೇ… 5 ಲಕ್ಷ ರೂ. ವಂಚನೆ ಪ್ರಕರಣ: ಪೋಲಿಸ್ ಕಾನ್ ಸ್ಟೇಬಲ್ ಸಹಿತ 3… ಮುಡಾ ಉದ್ಯೋಗಿ ನೇಣಿಗೆ ಶರಣು: ಅನಾರೋಗ್ಯದಿಂದ ಬೇಸೆತ್ತು ಆತ್ಮಹತ್ಯೆ?

ಇತ್ತೀಚಿನ ಸುದ್ದಿ

ಗ್ರಾಮೀಣ ರಸ್ತೆ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದೇನೆ: ಕನ್ಯಾನ ಗ್ರಾಮ ಸಡಕ್ ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಯ್ಕ್

20/03/2023, 10:53

ಬಂಟ್ವಾಳ(reporterkarnataka.com):
ರಸ್ತೆಗಳ ಅಭಿವೃದ್ಧಿಗೆ ತನ್ನ ಅವಧಿಯಲ್ಲಿ ಹೆಚ್ಚು ಒತ್ತು ನೀಡಿದ್ದು, ಬಂಟ್ವಾಳ ಕ್ಷೇತ್ರದಾದ್ಯಂತ 1500ಕ್ಕೂ ಅಧಿಕ ಸಂಪರ್ಕ ರಸ್ತೆಗಳಾಗಿವೆ. ಗ್ರಾಮೀಣ ಪ್ರದೇಶದ ರಸ್ತೆಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.

ಅವರು ಕನ್ಯಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 8.10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ರಸ್ತೆ ಅಭಿವೃದ್ಧಿ ಮತ್ತು ಸೇತುವೆ ನಿರ್ಮಾಣವನ್ನು ಉದ್ಘಾಟಿಸಿ ಮಾತನಾಡಿದರು.
8.10 ಕೋಟಿ ರೂ. ವೆಚ್ಚದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ನಿರ್ಮಾಣಗೊಂಡ ಬಾಳೆಕೋಡಿ ಪಿಲಿಂಗುಲಿ, ಅಕ್ಕರೆಕೋಡಿ ಬೆರಿಪದವು ರಸ್ತೆ ಅಭಿವೃದ್ಧಿ ಮತ್ತು ಸೇತುವೆ ನಿರ್ಮಾಣದಿಂದ ಸ್ಥಳೀಯರಿಗೆ ಪ್ರಯೋಜನವಾಗಲಿದೆ ಎಂದರು.


ಗ್ರಾಪಂ ಮಾಜಿ ಅಧ್ಯಕ್ಷ ಕೆ.ಪಿ.ರಘುರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಬಿಜೆಪಿ ಕೊಳ್ನಾಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು, ತಾಪಂ ಮಾಜಿ ಸದಸ್ಯರಾದ ಕುಮಾರ ಭಟ್ ಬದಿಕೋಡಿ, ಪಂಚಾಯಿತಿ ಸದಸ್ಯರಾದ ನಾರಾಯಣ ಗೌಡ, ವನಿತಾ ಪಿಲಿಂಗುಳಿ, ಉಪಾಧ್ಯಕ್ಷರಾದ ಕುಸುಮಾ, ಸ್ಥಳದಾನಿಗಳಾದ ಜಯರಾಮ ಶೆಟ್ಟಿ ಪಿಲಿಂಗುಳಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು