11:46 AM Monday5 - June 2023
ಬ್ರೇಕಿಂಗ್ ನ್ಯೂಸ್
ರೈಲು ದುರಂತ ಗಾಯಾಳುಗಳ ಪ್ರಧಾನಿ ಮೋದಿ ಭೇಟಿ: ಯೋಗಕ್ಷೇಮ ವಿಚಾರಣೆ; ಮಡಿದವರಿಗೆ 10… ಕಡಲನಗರಿ ಕುಡ್ಲದಲ್ಲಿ 2 ದಿನಗಳ ‘ಹಲಸಿನ ಹಬ್ಬ’; ಜಾಕ್ ಫ್ರುಟ್ ಐಸ್ ಕ್ರೀಂ,… ಫಲ್ಗುಣಿ ನದಿಗೆ ರುಚಿ ಗೋಲ್ಡ್ ತ್ಯಾಜ್ಯ ವಿಸರ್ಜಿಸುವ ಕೊಳವೆ ಪತ್ತೆ: ನಾಗರಿಕ ಹೋರಾಟ… ಒಡಿಸ್ಸಾ ರೈಲು ದುರಂತ: ಕಳಸದಿಂದ ಸಮೇದ್ ಶಿಖರ್ಜಿ ಯಾತ್ರೆಗೆ ತೆರಳಿದ್ದ 110 ಮಂದಿ… ಇವರೇ ಅದೃಷ್ಟವಂತ 110 ಮಂದಿ ಕನ್ನಡಿಗರು!: ಒಡಿಶಾದಲ್ಲಿ ಭೀಕರ ದುರಂತಕ್ಕೀಡಾದ ರೈಲಿನ ಪ್ರಯಾಣಿಕರು;… ಒಡಿಶಾ: ಭೀಕರ ರೈಲು ದುರಂತ; ಕರ್ನಾಟಕದ 110 ಮಂದಿ ಕನ್ನಡಿಗ ಪ್ರಯಾಣಿಕರು ಸೇಫ್ ಲೋಕಸಭೆ ಚುನಾವಣೆ: ನಳಿನ್, ಡಿವಿ, ಮಂಗಳಾ ಅಂಗಡಿ ಸಹಿತ 10ಕ್ಕೂ ಹೆಚ್ಚು ಸಂಸದರು… ಮಾಣಿ: ಬಾಲವಿಕಾಸ ಅಂಗ್ಲ ಮಾಧ್ಯಮ ಶಾಲೆ ಕಚೇರಿ ಉದ್ಘಾಟನೆ; ವೆಲ್ ಕಮ್ ಡೇ… 5 ಲಕ್ಷ ರೂ. ವಂಚನೆ ಪ್ರಕರಣ: ಪೋಲಿಸ್ ಕಾನ್ ಸ್ಟೇಬಲ್ ಸಹಿತ 3… ಮುಡಾ ಉದ್ಯೋಗಿ ನೇಣಿಗೆ ಶರಣು: ಅನಾರೋಗ್ಯದಿಂದ ಬೇಸೆತ್ತು ಆತ್ಮಹತ್ಯೆ?

ಇತ್ತೀಚಿನ ಸುದ್ದಿ

ಆದಿ ಗ್ರಾಮೋತ್ಸವ ಬೆಳ್ಳಿಹಬ್ಬ ಸರಣಿ ಆರಂಭ: ಸದ್ದಿಲ್ಲದ ಸಾಧಕಿ ಶಿರ್ತಾಡಿ ಗಂಗಮ್ಮಗೆ ಗೌರವ

19/03/2023, 21:09

ಅಜೆಕಾರು(reporterkarnataka.com): ಸದ್ದಿಲ್ಲದ ಸಾಧಕಿ,ಜ್ಯೋತಿಷಿ, ಸಮಾಜ ಮುಖಿ ಚಿಂತಕಿ ಶಿರ್ತಾಡಿಯ ಗಂಗಮ್ಮ ಸುಬ್ಬರಾವ್ ಅವರಿಗೆ ಅಜೆಕಾರಿನ ಆದಿಗ್ರಾಮೋತ್ಸವ ಬೆಳ್ಳಿ ಹಬ್ಬದ ತುಳುವ ಸಾಧಕರಿಗೆ ನಮ್ಮ ನಮನ ಸರಣಿಯ ಪ್ರತಿಷ್ಠಿತ ಗೌರವವನ್ನು ಶಿರ್ತಾಡಿಯ ಅವರ ನಿವಾಸ ಆಂಗಿರಸದಲ್ಲಿ ಶನಿವಾರ ಪ್ರದಾನಿಸಲಾಯಿತು.

ಹಿರಿಯ ಸಾಧಕರನ್ನು ಹುಡುಕಿ ನಡೆಸುವ ಇಂತಹ ಕಾರ್ಯಕ್ರಮಗಳು ಪ್ರಶಂಸಾರ್ಹ ಎಂದು ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಹೇಳಿದರು.

ಸಂಕಷ್ಟದಿಂದ ಬದುಕು ಕಟ್ಟಿಕೊಂಡೆ. ತನ್ನ ಮಕ್ಕಳು ಮತ್ತು ಉಳಿದವರ ಮಕ್ಕಳು ಎಂದು ಬೇಧ ಎಣಿಸಲಿಲ್ಲ. ಸರ್ವರ ಒಳಿತಿಗಾಗಿ ಯೋಚಿಸಿದರೆ ನೆಮ್ಮದಿಯ ಬದುಕು ಬದುಕುವುದು ಸಾಧ್ಯ ಎಂದು ಗಂಗಮ್ಮ ನುಡಿದರು.
ಗಂಗಮ್ಮ ಅವರು ತಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು ಹಂಚಿಕೊಂಡರು. ವಿನೂತನ ಕಾರ್ಯಕ್ರಮಗಳನ್ನು ಮಾಡುವುದರಲ್ಲಿ ಅಜೆಕಾರು ಸಾಧನೆ ಮಾಡಿದ್ದಾರೆ ಎಂದು ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ಅಭಿಪ್ರಾಯ ಪಟ್ಟರು.
ನಮ್ಮ ಗ್ರಾಮದ ಹಿರಿಯರನ್ನು ಆದಿಗ್ರಾಮೋತ್ಸವ ಸಮಿತಿ ಗುರುತಿಸಿದ್ದು ಹೊಸ ಯೋಚನೆಗಳಿಗೆ ಸ್ಪೂರ್ತಿ ನೀಡಿದಂತಾಗಿದೆ ಎಂದು ಶಿರ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಹೇಳಿದರು.
ಬೆಳ್ಳಿ ಹಬ್ಬ ಸಂಚಾಲಕ, ಆದಿಗ್ರಾಮೋತ್ಸವದ ರೂವಾರಿ ಶೇಖರ ಅಜೆಕಾರು ಅಧ್ಯಕ್ಷತೆ ವಹಿಸಿದ್ದರು. ಮಂದಾರ ಪ್ರತಿಷ್ಠಾನದ ಕಾರ್ಯದರ್ಶಿ ಮಂದಾರ ರಾಜೇಶ ಭಟ್, ಗ್ರಾಮೋತ್ಸವ ಸಮಿತಿಯ ಗೌರವಾಧ್ಯಕ್ಷ ಸಾಣೂರು ಅರುಣ್ ಶೆಟ್ಟಿಗಾರ್, ವಾಲ್ಪಾಡಿ ಕ್ರಿಕೆಟರ್ಸ್ ಅಧ್ಯಕ್ಷ, ಪತ್ರಕರ್ತ ಅಶ್ರಫ್ ವಾಲ್ಪಾಡಿ, ವಾಯ್ಸ್ ಆಫ್ ಆರಾಧನಾದ ನಿರ್ದೇಶಕಿ ಪದ್ಮಶ್ರೀ ನಿಡ್ಡೋಡಿ ಅತಿಥಿಗಳಾಗಿದ್ದರು. ಉಪನ್ಯಾಸಕ ಶ್ರೀಕಾಂತ್ ಹೊಳ್ಳ ಅವರು ಕುಟುಂಬದ ಪರವಾಗಿ ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿದರು. ಸೋಮಶೇಖರ ಮಯ್ಯ ಸ್ವಾಗತಿಸಿದರು. ಅರ್ಚಿತ್ ಕಶ್ಯಪ್,ಅನನ್ಯ ಉಡುಪ, ಶ್ರೀವಾಣಿ ಮಯ್ಯ, ಶಿವಾನಿ, ಶರ್ವಾಣಿ ಕಾರ್ತಿಕ್, ಪ್ರದ್ಯುಮ್ನ ತಮ್ಮ ಹಾಡುಗಳ ಮೂಲಕ ರಂಜಿಸಿದರು. ಶಿಕ್ಷಕಿ ಶರಣ್ಯ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿದರು. ಕವಯತ್ರಿ ಮಾನಸ ಪ್ರವೀಣ್ ಭಟ್ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು