2:15 PM Tuesday22 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

2023 ವಿಧಾನಸಭೆ ಚುನಾವಣೆ: 100 ಕ್ಷೇತ್ರಗಳಿಗೆ ಬಿಜೆಪಿಯಿಂದ ಹೊಸ ಮುಖ?; ದ.ಕ. ಜಿಲ್ಲೆಯ 4 ಮಂದಿಗೆ ಟಿಕೆಟ್ ಇಲ್ಲ?

18/10/2021, 15:57

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಮುಂಬರುವ ವಿಧಾನಸಭೆ ಚುನಾವಣೆಗೆ ರಾಜ್ಯದ ಎಲ್ಲ ಮೂರು ಪ್ರಮುಖ ಪಕ್ಷಗಳು ಸಿದ್ಧತೆಯಲ್ಲಿ ತೊಡಗಿವೆ. ಅಧಿಕಾರರೂಢ ಬಿಜೆಪಿ ಸ್ವಂತ ಬಲದಲ್ಲಿ ಮತ್ತೆ ಅಧಿಕಾರಕ್ಕೇರುವ ಬಗ್ಗೆ ಯೋಜನೆ ರೂಪಿಸಿದೆ. ರಾಜ್ಯದ 224 ಸ್ಥಾನಗಳ ಪೈಕಿ ಕನಿಷ್ಠ 150 ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರುವುದು ಬಿಜೆಪಿ ಪರಮ ಗುರಿಯಾಗಿದೆ. ಈ ನಿಟ್ಟಿನಲ್ಲಿ 100 ಕ್ಷೇತ್ರಗಳಲ್ಲಿ ಮತ್ತೆ ಹೊಸ ಮುಖಗಳನ್ನು ಕಣಕ್ಕಿಳಿಸುವ ಬಗ್ಗೆ ಪಕ್ಷದ ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

ಕನಿಷ್ಠ 100 ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಕಣಕ್ಕಿಳಿಸಬೇಕೆನ್ನುವ ಸೂಚನೆಯನ್ನು ಹೈಕಮಾಂಡ್ ರಾಜ್ಯ ಬಿಜೆಪಿಗೆ ನೀಡಿದೆ. ಇದು ಹಲವು ಮಂದಿ ಹಾಲಿ ಶಾಸಕರು, ಸಚಿವರಲ್ಲಿ ನಡುಕ ಹುಟ್ಟಿಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಹೊಸ ಮುಖಗಳನ್ನು, ಏನೂ ಅಲ್ಲದ ಹೆಸರಿಲ್ಲದ ಸಾಮಾನ್ಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಜಯಗಳಿಸುವ ಪ್ರಯೋಗದಲ್ಲಿ ಯಶಸ್ವಿ ಕಂಡಿರುವ ಬಿಜೆಪಿ 150 ಸೀಟುಗಳನ್ನು ಬಾಚಿಕೊಳ್ಳಲು ಮತ್ತೆ ಹಳೆ ತಂತ್ರಕ್ಕೆ ಶರಣಾಗಲಿದೆ. ರಾಜ್ಯದ100 ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಪರಿಚಯಿಸುವ ಪ್ರಯೋಗ ಈ ಬಾರಿಯೂ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಾಲಿ 8 ಮಂದಿ ಶಾಸಕರ ಪೈಕಿ 7 ಮಂದಿ ಹೊಸಬರಾದರೂ ಮುಂದಿನ ಚುನಾವಣೆಯಲ್ಲಿ ಅವರನ್ನು ಹಳೆ ಮುಖವೆಂದೇ ಪರಿಗಣಿಸಲಾಗುತ್ತದೆ. ಸಾಧನೆ ಶೂನ್ಯ ಶಾಸಕರನ್ನು, ಪಕ್ಷ ಸಂಘಟನೆಗೆ ಕೈಜೋಡಿಸದ ಶಾಸಕರನ್ನು, ಸ್ಥಳೀಯ ಆರೆಸ್ಸೆಸ್ ನಾಯಕರ ಕಡೆಗಣಿಸಿದ ಶಾಸಕರನ್ನು ಮುಂದಿನ ಚುನಾವಣೆಯಲ್ಲಿ ಕೈಬಿಡಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ 8 ಶಾಸಕರ ಪೈಕಿ 2ರಿಂದ 4 ಮಂದಿಯನ್ನು ಹಾಗೂ ಉಡುಪಿ ಜಿಲ್ಲೆಯ 5 ಮಂದಿ ಶಾಸಕರ ಪೈಕಿ ಇಬ್ಬರಿಗೆ ಟಿಕೆಟ್ ನಿರಾಕರಿಸಲಾಗುತ್ತದೆ. ಯಾರನ್ನೆಲ್ಲ ಕೈಬಿಡಬೇಕೆನ್ನುವ ಪಟ್ಟಿ ಕೂಡ ಈಗಾಗಲೇ ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಹೈಕಮಾಂಡ್ ಗುಪ್ತವಾಗಿ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿಕೊಂಡಿದೆ ಎನ್ನಲಾಗಿದೆ.

ಮುಂದಿನ ವಿಧಾನಸಭೆ ಚುನಾವಣೆಯ ಬಳಿಕ ಆಪರೇಶನ್ ಕಮಲ ಯಾವುದೇ ಕಾರಣಕ್ಕೂ ಅವಕಾಶ ಸಿಗಬಾರದು ಎಂಬ ಏಕೈಕ ಕಾರಣಕ್ಕಾಗಿ ಮಿಷನ್ 150 ಬಿಜೆಪಿ ಸಿದ್ಧಪಡಿಸಿದೆ. ಕ್ಲೀನ್ ಇಮೇಜ್ ಮೂಲಕ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೇರಬೇಕು ಎನ್ನುವುದು ಹೈಕಮಾಂಡ್ ಗುರಿಯಾಗಿದೆ.

ಕನಿಷ್ಠ 100 ಕ್ಷೇತ್ರಗಳಿಗೆ ಹೊಸ ಮುಖಗಳನ್ನು ಕಣಕ್ಕಿಳಿಸುವಾಗ ಅವರ ಸಾಧನೆ, ಹಿನ್ನೆಲೆ ಮತ್ತು ವಯಸ್ಸನ್ನು ಮುಖ್ಯವಾಗಿ ಪರಿಗಣಿಸಲಾಗುವುದು. ಹೊಸ ಮುಖಗಳಿಗೆ ಅವಕಾಶ ನೀಡುವಾಗ ಕೆಲವು ಹಾಲಿ ಶಾಸಕರ ಜತೆಗೆ ಕಳೆದ ಬಾರಿ ಸೋತವರನ್ನೂ ಕೈಬಿಟ್ಟು ಹೊಸಬರನ್ನು ಆಯ್ಕೆ ಮಾಡಲಾಗುತ್ತದೆ. ಪಕ್ಕಾ ಸಂಘ ಪರಿವಾರದ ಹಿನ್ನೆಲೆಯಿಂದ ಬಂದಿರುವ ಯುವಕರನ್ನು ಕಣಕ್ಕಿಳಿಸಬೇಕೆನ್ನುವ ಸೂಚನೆಯನ್ನು ಕಮಲ ಹೈಕಮಾಂಡ್ ನೀಡಿದೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು