8:43 AM Friday26 - April 2024
ಬ್ರೇಕಿಂಗ್ ನ್ಯೂಸ್
ಜನಾರ್ದನ ಪೂಜಾರಿ ಮಾದರಿಯಲ್ಲಿ ಪದ್ಮರಾಜ್ ಪೂಜಾರಿ ಅಭಿವೃದ್ಧಿಯ ಹರಿಕಾರ ಆಗಲಿದ್ದಾರೆ: ಲಿಬ್‌ಝಿತ್ ಅಭಿಮತ ನೈಟ್ ಸರ್ವಿಸ್ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬೆಳ್ತಂಗಡಿ ನಿವಾಸಿಯ ಬಂಧನ ರಾಜ್ಯದ 14 ಕ್ಷೇತ್ರಗಳಲ್ಲಿ ನಾಳೆ ಮೊದಲ ಹಂತದ ಚುನಾವಣೆ: ಕರಾವಳಿಯಲ್ಲಿ ಸಕಲ ಸಿದ್ದತೆ;… ನಂಜನಗೂಡಿನ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಮತಗಟ್ಟೆಯ ಅಧಿಕಾರಿಗಳಿಗೆ ಪಾಠ; ಜಾಗೃತಿಯಾಗಿ ಕರ್ತವ್ಯ… ನಾವು ಇಂದೇ ಹೊಂಟೇವು ಮತಗಟ್ಟೆಗೆ; ನೀವು ನಾಳೆ ತಪ್ಪದೆ ಬನ್ನಿ ಮತದಾನಕ್ಕೆ ದ.ಕ. ಲೋಕಸಭೆ ಕ್ಷೇತ್ರ: ರಾಹುಲ್, ಪ್ರಿಯಾಂಕಾ ಬಾರದೆ, ಸ್ಟಾರ್ ಕ್ಯಾಂಪೇನರ್ ಇಲ್ಲದೆ ಚುನಾವಣೆ… ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್… ಬಹಿರಂಗ ಪ್ರಚಾರದ ಕೊನೆಯ ದಿನ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರಿಂದ ಪಂಪ್’ವೆಲ್’… ಪಂಪ್ ವೆಲ್ ನಿಂದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಉರಿ… ನಂಜನಗೂಡು: ಮಾಜಿ ಶಾಸಕ ಹರ್ಷವರ್ಧನ್ ಅವರಿಂದ ಬಿಜೆಪಿ ಅಭ್ಯರ್ಥಿ ಬಾಲರಾಜ್ ಪರ ಮತಯಾಚನೆ

ಇತ್ತೀಚಿನ ಸುದ್ದಿ

ಪ್ರತಿ ಲೀಟರ್ ಇಂಧನಕ್ಕೆ ಹೆಚ್ಚಿನ ಉತ್ಪಾದಕತೆ ಪಡೆಯಿರಿ ಅಥವಾ ಯಂತ್ರ  ಹಿಂತಿರುಗಿಸಿ: ಮಹೀಂದ್ರಾ ಭರವಸೆ

10/05/2022, 17:58

•ಸರ್ವಿಸ್ ಖಾತರಿಯು ಯಂತ್ರವನ್ನು 48 ಗಂಟೆಗಳಲ್ಲಿ ಮತ್ತೆ ಕಾರ್ಯಾಚರಣೆಗೆ ಸಿದ್ಧಗೊಳಿಸುವ  ಭರವಸೆ ನೀಡುತ್ತದೆ ಅಥವಾ ಗ್ರಾಹಕರಿಗೆ ಪ್ರತಿ ದಿನಕ್ಕೆ ರೂ 1,000 ನೀಡಲಾಗುವುದು.

•ಮಹೀಂದ್ರಾ ಬಿಎಸ್‌4 ಬ್ಯಾಕ್‌ಹೋ ಲೋಡರ್‌ಗೆ - ಮಹೀಂದ್ರಾ ಅರ್ಥ್‌ಮಾಸ್ಟರ್ ಎಸ್‌ಎಕ್ಸ್‌ನಲ್ಲಿ ಅನ್ವಯವಾಗುವ ಪ್ರತಿ ಲೀಟರ್ ಇಂಧನಕ್ಕೆ ಖಾತರಿಪಡಿಸಿದ ಹೆಚ್ಚಿನ ಉತ್ಪಾದಕತೆ.

•50ಕ್ಕೂ ಹೆಚ್ಚು 3ಎಸ್‌ ಡೀಲರ್‌ಶಿಪ್‌ಗಳು, ಅಧಿಕೃತ ಸೇವಾ ಕೇಂದ್ರಗಳು, ಬಿಡಿಭಾಗಗಳ ರಿಟೇಲ್ ಮಾರಾಟ ಮಳಿಗೆಗಳ ಜಾಲ ಒಳಗೊಂಡ ನಿರಂತರವಾಗಿ ಬೆಳೆಯುತ್ತಿರುವ ಮತ್ತು ವ್ಯಾಪಕವಾದ ಸರ್ವೀಸ್‌ ಮತ್ತು ಬಿಡಿಭಾಗಗಳ ನೆಟ್‌ವರ್ಕ್‌ ಸೌಲಭ್ಯ.

ಬೆಂಗಳೂರು(reporterkarnataka.com): ಮಹೀಂದ್ರಾ ಗ್ರೂಪ್‌ನ ಭಾಗವಾಗಿರುವ ಮಹೀಂದ್ರಾ ನಿರ್ಮಾಣ ಸಲಕರಣೆಗಳ ತಯಾರಿಕಾ ವಿಭಾಗವು (ಎಂಸಿಇ), ತನ್ನ ಮಹೀಂದ್ರಾ ಅರ್ಥಮಾಸ್ಟರ್‌ ಶ್ರೇಣಿಯ ಬಿಎಸ್‌4 ಬ್ಯಾಕ್‌ಹೊ ಲೋಡರ್ಸ್‌ಗಳಿಗೆ ವಿಶಿಷ್ಟ ಬಗೆಯ ಮತ್ತು ಗ್ರಾಹಕರಿಗೆ ಮೌಲ್ಯವರ್ಧಿತ ಸೇವೆ ಒದಗಿಸುವ– ‘ಪ್ರತಿ ಲೀಟರ್ ಇಂಧನಕ್ಕೆ ಗರಿಷ್ಠ ಪ್ರಮಾಣದ ಉತ್ಪಾದಕತೆ ಪಡೆಯಿರಿ ಅಥವಾ ಯಂತ್ರ ಹಿಂತಿರುಗಿಸಿ’ ಖಾತರಿ ಸೌಲಭ್ಯ ಪ್ರಕಟಿಸಿದೆ.

ಹೊಸ ಶ್ರೇಣಿಯ ನೆಲ ಅಗೆಯುವ ಯಾಂತ್ರಿಕ ಬೃಹತ್‌ ಸಲಕರಣೆಯ (ಬ್ಯಾಕ್‌ಹೊ ಲೋಡರ್ಸ್‌), ಸಾಬೀತಾಗಿರುವ ಮತ್ತು ವಿಶ್ವಾಸಾರ್ಹ 74 ಎಚ್‌ಪಿ ಸಿಆರ್‌ಐ (74 HP CRI)  ಮಹೀಂದ್ರಾ ಎಂಜಿನ್ ಮತ್ತು ಇತರ ಅನೇಕ ಉನ್ನತ ತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡಿದೆ, ಅತ್ಯಾಧುನಿಕ ಐಮ್ಯಾಕ್ಸ್‌ (iMAXX) ಟೆಲಿಮ್ಯಾಟಿಕ್ಸ್ ಸೌಲಭ್ಯ ಹೊರತುಪಡಿಸಿ, ಇತರ ಹಲವಾರು ಸುಧಾರಿತ ತಂತ್ರಜ್ಞಾನಗಳು ಖಾತರಿದಾಯಕ ಇಂಧನ ದಕ್ಷತೆಯನ್ನೂ ಒದಗಿಸಲಿವೆ. ಇಂಧನವು ನಿರ್ವಹಣಾ ವೆಚ್ಚದ ಪ್ರಮುಖ (ಸರಿ ಸುಮಾರು ಶೇ 50ರಷ್ಟು) ಭಾಗವಾಗಿದೆ. ಬನಾನಾ ಬೂಮ್, ಜಾಯ್‌ಸ್ಟಿಕ್ ಲಿವರ್, ಗಟ್ಟಿಮುಟ್ಟಾದ ವಿನ್ಯಾಸ ಮತ್ತು ದೊಡ್ಡ ಬಕೆಟ್‌ಗಳಂತಹ ವಿಶಿಷ್ಟ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಅರ್ಥ್‌ ಮಾಸ್ಟರ್ ಶ್ರೇಣಿಯು, ಎಲ್ಲಾ ರೀತಿಯ ನೆಲ ಅಗೆಯುವ ಕಾರ್ಯಾಚರಣೆಗಳಿಗೆ ಹೆಚ್ಚು ಸೂಕ್ತವಾಗಿರುತ್ತದೆ, ಗಣಿಗಾರಿಕೆ, ಕಂದಕ ತೋಡುವುದು, ಕಲ್ಲು– ಬಂಡೆ ಕತ್ತರಿಸುವುದು, ಕಟ್ಟಡ ನಿರ್ಮಾಣ ಕಾಮಗಾರಿ ಹಾಗೂ ನಿರ್ಮಾಣ ಉದ್ಯಮದಲ್ಲಿ ಯಾವುದೇ ಕಾಮಗಾರಿ ನಿರ್ವಹಿಸಲು ಮಹೀಂದ್ರಾ ಬಿಎಸ್‌4 ಬ್ಯಾಕ್‌ಹೊ ಲೋಡರ್ ಅರ್ಥ್‌ಮಾಸ್ಟರ್‌ ಶ್ರೇಣಿಯು ಹೆಚ್ಚು ಸೂಕ್ತವಾಗಿದೆ. ಈ ಎಲ್ಲ ಪ್ರಯೋಜನಗಳು ಅರ್ಥ ಮಾಸ್ಟರ್‌ ಬಳಸುವವರಿಗೆ  ಸಂಪೂರ್ಣ ಮನಶಾಂತಿ ಒದಗಿಸುತ್ತವೆ. ಅವರ ನಿರ್ಮಾಣ ಯಂತ್ರೋಪಕರಣಗಳ (ಸಿಇ) ವಹಿವಾಟು ವೃದ್ಧಿಗೊಳಿಸಿ ಹೆಚ್ಚಿನ ಲಾಭವನ್ನೂ ತಂದುಕೊಡಲಿವೆ. 

ಈ ಸಂದರ್ಭದಲ್ಲಿ ಮಾತನಾಡಿರುವ, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಲಿಮಿಟೆಡ್‌ನ ವಾಣಿಜ್ಯ ವಾಹನಗಳ ವಹಿವಾಟು ವಿಭಾಗದ ಮುಖ್ಯಸ್ಥ  ಜಲಜ್ ಗುಪ್ತಾ ಅವರು, ‘ಪ್ರತಿ ಲೀಟರ್‌ ಇಂಧನಕ್ಕೆ ಹೆಚ್ಚಿನ ಉತ್ಪಾದಕತೆ (ಅಥವಾ ಯಂತ್ರ ಹಿಂತಿರುಗಿಸಿ) ಭರವಸೆಯು ನಿರ್ಮಾಣ ಸಲಕರಣೆಗಳ ಬಳಕೆಯಲ್ಲಿ ಅಭೂತಪೂರ್ವ ನಿರ್ಧಾರವಾಗಿದೆ. ದಿನೇ ದಿನೇ ಇಂಧನ ಬೆಲೆ ದುಬಾರಿಯಾಗುತ್ತಿರುವುದನ್ನು ಗಮನಿಸಿದರೆ, ಗ್ರಾಹಕರಿಗೆ ಮೌಲ್ಯವರ್ಧಿತ ಸೌಲಭ್ಯ ಪರಿಚಯಿಸಲು ಇದಕ್ಕಿಂತ ಉತ್ತಮ ಸಮಯವಿಲ್ಲ. ಸುಧಾರಿತ ತಂತ್ರಜ್ಞಾನ ಬಳಕೆ, ಈ ವಿಭಾಗದಲ್ಲಿ ಮುಂಚೂಣಿಯಲ್ಲಿ ಇರುವುದು ಮತ್ತು ಭಾರತದ ಕಟ್ಟಡ ನಿರ್ಮಾಣ ಸಲಕರಣೆಗಳ ಉದ್ಯಮದಲ್ಲಿ ಗರಿಷ್ಠ ಗುಣಮಟ್ಟದ ಭರವಸೆ ನೀಡುವ ಮಹೀಂದ್ರಾದ ಸಾಮರ್ಥ್ಯದಲ್ಲಿ ನಮ್ಮ ಗ್ರಾಹಕರು ಇರಿಸಿರುವ ನಂಬಿಕೆಯನ್ನು ಇದು ಪುನರುಚ್ಚರಿಸುತ್ತದೆ ಎಂದು ನಾವು ದೃಢವಾಗಿ ನಂಬಿದ್ದೇವೆ. ಸಕಾಲದಲ್ಲಿ ಸರ್ವೀಸ್‌ ಖಾತರಿಯು ನಮ್ಮ ಗ್ರಾಹಕರಿಗೆ ನಾವು ತೋರುವ ಬದ್ಧತೆ ಸೂಚಿಸುತ್ತದೆ. ನಮ್ಮ ಉತ್ಪನ್ನಗಳು ಮತ್ತು ಮಾರಾಟದ ನಂತರದ ಸರ್ವೀಸ್‌ ಸಾಮರ್ಥ್ಯಗಳಲ್ಲಿ ನಮ್ಮ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುತ್ತದೆ’ ಎಂದು ಹೇಳಿದ್ದಾರೆ.

‘ನಮ್ಮ ಹೊಸ ಬಿಎಸ್‌4 ಯಂತ್ರೋಪಕರಣಗಳು ಹೆಚ್ಚಿನ ಇಂಧನ ದಕ್ಷತೆ ಒದಗಿಸಲಿವೆ. ಇದು ಭಾರತದ ಗ್ರಾಹಕರನ್ನು ಆಳವಾಗಿ ತಿಳಿದುಕೊಂಡಿರುವ ಮಹೀಂದ್ರಾದ ಉನ್ನತ ತಾಂತ್ರಿಕ ಸಾಮರ್ಥ್ಯದ ಫಲಿತಾಂಶವಾಗಿದೆ. ಗ್ರಾಹಕರು ಸಕಾಲದಲ್ಲಿ ಸರ್ವೀಸ್‌ ಖಚಿತಪಡಿಸಿಕೊಳ್ಳಲು ಸೇವೆಯ ಖಾತರಿಯನ್ನೂ ಮಹೀಂದ್ರಾ ನಿರ್ಮಾಣ ಸಲಕರಣೆಗಳ ತಯಾರಿಕಾ ವಿಭಾಗವು (ಎಂಸಿಇ), ಒದಗಿಸುತ್ತಿದೆ. ಯಂತ್ರೋಪಕರಣವು ಶೀಘ್ರಗತಿಯಲ್ಲಿ ಕಾರ್ಯಾಚರಣೆಗೆ ಸಿದ್ಧವಾಗುವುದನ್ನು ಇದು ಖಾತರಿಪಡಿಸುತ್ತದೆ. ಅತ್ಯಾಧುನಿಕ ಐಮ್ಯಾಕ್ಸ್‌ ಟೆಲಿಮ್ಯಾಟಿಕ್ಸ್ ತಂತ್ರಜ್ಞಾನವು, ಮಾಲೀಕರು ದೂರದಲ್ಲಿ ಇದ್ದುಕೊಂಡೇ  ತಮ್ಮ ಯಂತ್ರಗಳ ಮೇಲೆ ನಿಯಂತ್ರಣ ಸಾಧಿಸುವ ಸೌಲಭ್ಯ ಒದಗಿಸುವ ಮೂಲಕ ಅವುಗಳ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವುದಕ್ಕೂ ನೆರವಾಗಲಿದೆ’ ಎಂದೂ ಜಲಜ್‌ ಗುಪ್ತಾ ಹೇಳಿದ್ದಾರೆ.

ಗ್ರಾಹಕರಿಗೆ ಒದಗಿಸಲಾಗುವ ಈ ಮೌಲ್ಯವರ್ಧಿತ ಸೌಲಭ್ಯವು  ನಿರ್ಮಾಣ ಸಲಕರಣೆ ತಯಾರಿಕೆ ವಿಭಾಗದಲ್ಲಿ ಕಂಪನಿಯು ಪ್ರವರ್ಧಮಾನಕ್ಕೆ ಏರಲು ಸಹಾಯ ಮಾಡಲಿದೆ ಎನ್ನುವುದರಲ್ಲಿ ಕಂಪನಿಯು ದೃಢ ನಂಬಿಕೆ ಹೊಂದಿದೆ. ಯಂತ್ರೋಪಕರಣಗಳ ಕಾರ್ಯಕ್ಷಮತೆ ಮತ್ತು ಸರ್ವೀಸ್‌ ಖಾತರಿಗಳು ಕಂಪನಿಯ ಅಂತರ್ಜಾಲ ತಾಣ www.mahindraconstructionequipment.com ದಲ್ಲಿ ಸುಲಭವಾಗಿ ಲಭ್ಯವಿರುವ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತವೆ

ಇತ್ತೀಚಿನ ಸುದ್ದಿ

ಜಾಹೀರಾತು