7:46 PM Thursday25 - April 2024
ಬ್ರೇಕಿಂಗ್ ನ್ಯೂಸ್
ನಾವು ಇಂದೇ ಹೊಂಟೇವು ಮತಗಟ್ಟೆಗೆ; ನೀವು ನಾಳೆ ತಪ್ಪದೆ ಬನ್ನಿ ಮತದಾನಕ್ಕೆ ದ.ಕ. ಲೋಕಸಭೆ ಕ್ಷೇತ್ರ: ರಾಹುಲ್, ಪ್ರಿಯಾಂಕಾ ಬಾರದೆ, ಸ್ಟಾರ್ ಕ್ಯಾಂಪೇನರ್ ಇಲ್ಲದೆ ಚುನಾವಣೆ… ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್… ಬಹಿರಂಗ ಪ್ರಚಾರದ ಕೊನೆಯ ದಿನ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರಿಂದ ಪಂಪ್’ವೆಲ್’… ಪಂಪ್ ವೆಲ್ ನಿಂದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಉರಿ… ನಂಜನಗೂಡು: ಮಾಜಿ ಶಾಸಕ ಹರ್ಷವರ್ಧನ್ ಅವರಿಂದ ಬಿಜೆಪಿ ಅಭ್ಯರ್ಥಿ ಬಾಲರಾಜ್ ಪರ ಮತಯಾಚನೆ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಪ್ರಣಾಳಿಕೆ ಬಿಡುಗಡೆ ಹಿಂದೂ ಧರ್ಮ ಸಾಮರಸ್ಯದ ಬದುಕು ಹೇಳಿಕೊಟ್ಟಿದೆ: ಬೈಕಂಪಾಡಿ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ… ಮೋರ್ಗನ್ಸ್ ಗೇಟ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಮತ… ಪ್ರಿಯಾಂಕಾ ಗಾಂಧಿ ಇಂದು ರಾಜ್ಯಕ್ಕೆ: ಚಿತ್ರದುರ್ಗದಲ್ಲಿ ಬಹಿರಂಗ ಸಭೆ; ಹಗರಿಬೊಮ್ಮನಹಳ್ಳಿಯಲ್ಲಿ ಸೌಮ್ಯಾ ರೆಡ್ಡಿ…

ಇತ್ತೀಚಿನ ಸುದ್ದಿ

ʻಅರವಿಂದ್ ಸ್ಮಾರ್ಟ್ಸ್ಪೇಸಸ್ʼ:  ಉದ್ಯಮ ವಲಯದಲ್ಲೇ ಮೊದಲ ಸಂಪೂರ್ಣ ಡಿಜಿಟಲ್ ಮಾರಾಟ ವೇದಿಕೆ

12/05/2022, 13:13

*ಮನೆ-ಖರೀದಿಯ ಸಂಪೂರ್ಣ ಅನುಭವ ಕ್ರಾಂತಿಕಾರಕ, ಪಾರದರ್ಶಕ ಮತ್ತು ಸುಗಮವಾಗಿದೆ. ಆರಾಮವಾಗಿ ನಿಮ್ಮ ಮಂಚದ ಮೇಲೆ ಕೂತು ಸಿನಿಮಾ ಟಿಕೆಟ್ ಕಾಯ್ದಿರಿಸುವಷ್ಟು ಸುಲಭವಾಗಿದೆ

ಗ್ರಾಹಕರು ಆ ಮೂಲಕ ಮನೆಯೊಳಗೆ  ಸುತ್ತಾಡಲು, ಘಟಕಗಳನ್ನು ಆಯ್ಕೆ ಮಾಡಲು, ಬೆಲೆಯನ್ನು ವೀಕ್ಷಿಸಲು ಮತ್ತು ಸಂಪೂರ್ಣವಾಗಿ ಆನ್ ಲೈನ್ ನಲ್ಲಿ ಬುಕ್ ಮಾಡುವುದನ್ನು ಸಾಧ್ಯವಾಗಿಸಿದೆ.

ಬೆಂಗಳೂರು(reporterkarnataka.com): ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಅಭಿವೃದ್ಧಿ ಕಂಪನಿಗಳಲ್ಲಿ ಒಂದಾದ `ಅರವಿಂದ್ ಸ್ಮಾರ್ಟ್ಸ್ಪೇಸಸ್ ಲಿಮಿಟೆಡ್ʼ (ಎಎಸ್ಎಲ್) ತನ್ನ ಗ್ರಾಹಕರ ಮನೆ ಖರೀದಿ ಅನುಭವದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಸಜ್ಜಾಗಿದೆ. ಇದಕ್ಕಾಗಿ ಡಿಜಿಟಲ್ ನಾವಿನ್ಯತೆಯನ್ನು ಬಳಸಿಕೊಂಡು ಸಂಪೂರ್ಣ ಸುಗಮ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ಸೃಷ್ಟಿಸುತ್ತಿದೆ. ಆ ಮೂಲಕ ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸ್ವಾವಲಂಬನೆಯನ್ನು ಒಡಮೂಡಿಸುತ್ತಿದೆ. ರಿಯಲ್ ಎಸ್ಟೇಟ್ ಸಂಸ್ಥೆಯು ಇಂದು ಉದ್ಯಮ ವಲಯದಲ್ಲೇ ಮೊದಲ ಬಾರಿಗೆ ತನ್ನ ಡಿಜಿಟಲ್ ಮಾರಾಟ ವೇದಿಕೆಯನ್ನು ಪ್ರಾರಂಭಿಸಿದೆ. ಇದು ಗ್ರಾಹಕರಿಗೆ ಖರೀದಿಗೆ ಲಭ್ಯವಿರುವ ಮನೆಗಳ ಸಂಪೂರ್ಣ ಪಟ್ಟಿಯನ್ನು ನೋಡಲು ಮಾತ್ರವಲ್ಲದೆ, ಪ್ರತಿ ಘಟಕದ ಬೆಲೆಯ ಸಂಪೂರ್ಣ ಮಾಹಿತಿಯನ್ನು ಪಡೆಯಲು ಸಹ ಅನುವು ಮಾಡಿಕೊಡುತ್ತದೆ. ʻಅರವಿಂದ್ ಸ್ಮಾರ್ಟ್ಸ್ಪೇಸಸ್ʼ ಅತ್ಯುತ್ತಮ ದರ್ಜೆಯ ಪಾರದರ್ಶಕತೆಯೊಂದಿಗೆ ಅತ್ಯುತ್ತಮ ಗ್ರಾಹಕ ಅನುಭವವನ್ನು ಖಾತರಿಪಡಿಸುವ ನಿಟ್ಟಿನಲ್ಲಿ, ಗ್ರಾಹಕರಿಗೆ ತಮ್ಮ ಮನೆಗಳನ್ನು ಆಯ್ಕೆ ಮಾಡಲು, ಅವರ ಕನಸಿನ ಮನೆಯನ್ನು ಖರೀದಿಸಲು ಮತ್ತು ಯೋಜನೆಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ.

ಆನ್ಲೈನ್ ಮಾರಾಟ ವೇದಿಕೆಯಾದhttps://www.arvindsmartspaces.com/  ವೆಬ್ತಾಣದ ವಿಸ್ತರಣೆಯು, ಗ್ರಾಹಕರಿಗೆ ವಸತಿ ಯೋಜನೆಗಳ ʻವರ್ಚುವಲ್ ವಾಕ್ ಥ್ರೂʼಗಳನ್ನು ಒದಗಿಸುತ್ತದೆ. ಗ್ರಾಹಕರು ತಮ್ಮ ಸಂಭಾವ್ಯ ಮನೆಯೊಳಗಿನ ಸ್ಥಳಗಳನ್ನು ಕುಳಿತಲ್ಲಿದಂಲೇ ವೀಕ್ಷಿಸಲು ಸಹ ಸಾಧ್ಯವಾಗುತ್ತದೆ ಮತ್ತು ಒಳಾಂಗಣದಲ್ಲಿ ಇದ್ದಂತಹ ಅನುಭವವನ್ನು ಪಡೆಯಲು ಸಾಧ್ಯವಾಗುತ್ತದೆ. ʻಅರವಿಂದ್ ಸ್ಮಾರ್ಟ್ಸ್ಪೇಸಸ್ʼ ತನ್ನ ಹಾಲಿ ವೆಬ್ತಾಣಕ್ಕೆ ʻವಿಆರ್ ಮಾದರಿʼಯನ್ನು ಸಂಯೋಜಿಸುವ ಮೂಲಕ ಗ್ರಾಹಕರಿಗೆ ತಮ್ಮ ಬಾಲ್ಕನಿಗಳಿಂದ ಕಾಣುವ ಹೊರಗಿನ ನೋಟವನ್ನು ಪಡೆಯಲು, ಸುತ್ತಮುತ್ತಲ ಪ್ರದೇಶವನ್ನು ವರ್ಚುವಲ್ ರೂಪದಲ್ಲಿ ಇದ್ದಲ್ಲಿಂದಲೇ ನೋಡಲು ಅನುವು ಮಾಡಿಕೊಡಲಿದೆ. ಇಂತಹ  ಮೊಟ್ಟ ಮೊದಲ ಬಾರಿಗೆ ಕಲ್ಪಿಸಲಾದ ಈ ಸೌಲಭ್ಯದ ಮೂಲಕ ನಿಖರವಾದ ಘಟಕಗಳು, ಯೋಜನೆಯೊಳಗೆ ಅದು ಇರುವ ಸ್ಥಳ, ಲೇಔಟ್ ಮತ್ತು ಸಂಪೂರ್ಣ ಕಟ್ಟಡಗಳ ಲಭ್ಯತೆಯನ್ನು ಈ ವೇದಿಕೆ ಮೂಲಕ ಯಾರು ಬೇಕಾದರೂ ನೋಡಬಹುದಾಗಿದೆ. ವೆಬ್ಸೈಟ್ ಸಂಯೋಜನೆಯು ಮನೆಗಳನ್ನು ಖರೀದಿಯನ್ನು ಸಿನಿಮಾ ಟಿಕೆಟ್ ಕಾಯ್ದಿರಿಸುವಷ್ಟು ಸುಲಭವಾಗಿಸುತ್ತದೆ. ಗ್ರಾಹಕರು ನಿಖರವಾಗಿ ಯಾವ ಘಟಕಗಳು ಲಭ್ಯವಿದೆ ಎಂದು ನೋಡಬಹುದು, ಜೊತೆಗೆ ಅವರು ಖರೀದಿಸಲು ಹೊರಟಿರುವ ಪ್ರೀಮಿಯಂ, ಐಷಾರಾಮಿ ಜೀವನಶೈಲಿಯ ಟ್ರೈಲರ್ನ ಒಂದು ನೋಟವನ್ನು ಸಹ ಸೆರೆಹಿಡಿಯಲು ಸಾಧ್ಯವಾಗುತ್ತದೆ. 

‘ಅರವಿಂದ್ ಸ್ಮಾರ್ಟ್ಸ್ಪೇಸಸ್ ಲಿಮಿಟೆಡ್ʼ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀ ಕಮಲ್ ಸಿಂಗಾಲ್, ಅವರು “ಹಿಂದಿನ ಕಾಲದಲ್ಲಿ, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ವಿಶ್ವಾಸ ಮತ್ತು ಪಾರದರ್ಶಕತೆ ಇರುತ್ತಿರಲಿಲ್ಲ. ಈ ಮನಸ್ಥಿತಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ಉದ್ಯಮದಲ್ಲಿ ಒಂದು ಆದರ್ಶ ಬದಲಾವಣೆಯನ್ನು ತರುವುದು ನಮ್ಮ ಗುರಿಯಾಗಿದೆ. ʻಅರವಿಂದ್ ಲಿಮಿಟೆಡ್ʼನಂತಹ ಪಾರಂಪರಿಕ ಬ್ರಾಂಡ್ನಿಂದ ಬಂದಿರುವ ನಾವು ಸದಾ ಅತ್ಯುನ್ನತ ಗುಣಮಟ್ಟ ಮತ್ತು ಅತ್ಯಂತ ನೈತಿಕ ವ್ಯವಹಾರ ಅಭ್ಯಾಸಗಳಿಗಾಗಿ ಶ್ರಮಿಸಿದ್ದೇವೆ. ತಂತ್ರಜ್ಞಾನ ನಮ್ಮ ಬಳಿ ಇರುವುದರಿಂದ, ನಾವು ಈಗ ಗ್ರಾಹಕರನ್ನು ಸಶಕ್ತಗೊಳಿಸಲು  ಮತ್ತು ಅವರ ಬೆರಳ ತುದಿಯಲ್ಲಿ ನೈಜ ಸಮಯದಲ್ಲಿ ಎಲ್ಲಾ ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲು ಸಮರ್ಥರಾಗಿದ್ದೇವೆ. ಇದು  ನಮ್ಮ ಉದ್ಯಮದಲ್ಲಿ ಅಸಂಭವವೆಂದು ತೋರಿದ್ದನ್ನೂ ಸಾಧ್ಯ ಮಾಡಿದ್ದೇವೆ. ನಮ್ಮ ಗ್ರಾಹಕರು ಮತ್ತು ಅವರ ಅಗತ್ಯಗಳು ಸದಾ ನಮ್ಮ ಎಲ್ಲಾ ಕಾರ್ಯಾಚರಣೆಗಳು, ವಿನ್ಯಾಸಗಳು ಮತ್ತು ಪ್ರಕ್ರಿಯೆಗಳ ಕೇಂದ್ರಬಿಂದುವಾಗಿರುತ್ತವೆ.  ಮತ್ತು ನಾವು ಈ ಸಿದ್ಧಾಂತವನ್ನು ಈ ಮಾರಾಟ ವೇದಿಕೆಗೆ ವಿಸ್ತರಿಸುತ್ತೇವೆ.  ನಾವು ಬೆಂಗಳೂರಿನ ನಮ್ಮ ಯೋಜನೆಗಳ ಪೈಕಿ  ಒಂದರಲ್ಲಿ ಈ ವೇದಿಕೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುತ್ತಿದ್ದೇವೆ,  ನಮ್ಮ ಮುಂದಿನ ಎಲ್ಲಾ ಹೊಸ ಯೋಜನೆಗಳಿಗೆ ಇದನ್ನು ವಿಸ್ತರಿಸುವ ಗುರಿಯನ್ನು ನಾವು ಹೊಂದಿದ್ದೇವೆ”. ಎಂದು ಹೇಳಿದರು.

ಉದ್ಘಾಟನೆಯ ಸಮಯದಲ್ಲಿ, ಗ್ರಾಹಕರು ಬೆಂಗಳೂರಿನ ಯಲಹಂಕದಲ್ಲಿರುವ ಪ್ರೀಮಿಯಂ ವಸತಿ ಯೋಜನೆಯಾದ ʻಅರವಿಂದ್ ಬೆಲ್ ಏರ್ʼಗೆ ವರ್ಚುವಲ್ ಆಗಿ ಭೇಟಿ ನೀಡಲು ಮತ್ತು ಮನೆಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ, ಗ್ರಾಹಕರು ಇತರ ವಿವಿಧ ಸ್ಥಳಗಳಲ್ಲಿ ಮನೆಗಳನ್ನು ಕಾಯ್ದಿರಿಸಲು ಮತ್ತು ಖರೀದಿಸಲು ಸಾಧ್ಯವಾಗಲಿದೆ. ಏಕೆಂದರೆ ಈ ತಂತ್ರಜ್ಞಾನವನ್ನು ಮುಂಬರುವ ಎಲ್ಲಾ ಯೋಜನೆಗಳಲ್ಲಿ ಸಂಸ್ಥೆಯು ಅಳವಡಿಸಿಕೊಳ್ಳಲಿದೆ. ಕಂಪನಿಯು ಅಹಮದಾಬಾದ್, ಗಾಂಧಿನಗರ, ಬೆಂಗಳೂರು ಮತ್ತು ಪುಣೆಯಾದ್ಯಂತ ಸುಮಾರು 25 ದಶಲಕ್ಷ ಚದರ ಅಡಿ ರಿಯಲ್ ಎಸ್ಟೇಟ್ ಅಭಿವೃದ್ಧಿಯನ್ನು ಕೈಗೊಂಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು