6:09 PM Thursday2 - May 2024
ಬ್ರೇಕಿಂಗ್ ನ್ಯೂಸ್
ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ… ಅಶ್ಲೀಲ ವೀಡಿಯೊ ಪ್ರಕರಣ: ಬಂಧನದಿಂದ ತಪ್ಪಿಸಿಕೊಳ್ಳಲು ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ… ದತ್ತಪೀಠ ಬಳಿ 100 ಅಡಿ ಆಳಕ್ಕೆ ಉರುಳಿ ಬಿದ್ದ ಪ್ರವಾಸಿಗರ ಮಿನಿ ಬಸ್:… ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತ, ಕಾನೂನು ಸುವ್ಯವಸ್ಥೆ ಚಿಂತಾಜನಕ: ಬೆಳಗಾವಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳ ರೊಟ್ಟಿ ಸವಿದ ಪ್ರಧಾನಿ ಮೋದಿ ವಿಜಯಪುರದ ಶಿರನಾಳದಲ್ಲಿ ಶತಾಯುಷಿ ಭಾಗವ್ವ ಮತ ಚಲಾವಣೆ: 108ರ ಹರೆಯದ ಹಿರಿಯಜ್ಜಿ ಪ್ರಧಾನಿ ಮೋದಿ ಏ.28ರಂದು ಶಿರಸಿಗೆ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ…

ಇತ್ತೀಚಿನ ಸುದ್ದಿ

ರಕ್ತಹೀನತೆ: ಇದಕ್ಕೆ ಕಾರಣ ಏನು?; ರಕ್ತಹೀನತೆಯಿಂದ ಹೇಗೆ ಪಾರಾಗಬಹುದು?

22/01/2022, 08:03

ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಅಗತ್ಯಕ್ಕಿಂತ ಪ್ರಮಾಣಕ್ಕಿಂತ ಕಡಿಮೆ ಆಗುವುದನ್ನು ರಕ್ತಹೀನತೆ ಎನ್ನುತ್ತಾರೆ. ಆರೋಗ್ಯವಂತರಲ್ಲಿ ಇದರ ಪ್ರಮಾಣ ಮಹಿಳೆಯರಲ್ಲಿ <12gm/dl ಹಾಗು ಪುರುಷರಲ್ಲಿ <13gm/ ಕಂಡು ಬರುತ್ತದೆ.
ಇದು ಇತ್ತೀಚಿನ ದಿನಮಾನದಲ್ಲಿ ಅತೀ ಹೆಚ್ಚಾಗಿ ಮಹಿಳೆಯರಲ್ಲಿ ಕಂಡು ಬರುತ್ತಿರುವ ಸಮಸ್ಯೆ ಆಗಿದೆ. ಇದಕ್ಕೆ ಬೇರೆ ಬೇರೆ ಕಾರಣಗಳನ್ನು ಕಾಣಬಹುದಾದೆ. ನಮ್ಮ ದೇಶದಲ್ಲಿ ಕಬ್ಬಿಣ ಅಂಶದ ಕೊರತೆಯಿಂದಾಗಿ ಬರುವ ರಕ್ತಹೀನತೆಯನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ.

ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಸಮಸ್ಯೆಗಳಾದ ಅಲ್ಸರ್, ಕ್ಯಾನ್ಸರ್, ಕೆಲವೊಂದು ಔಷಧಿಯ ಸೇವನೆಯಿಂದ, ಮಹಿಳೆಯರಲ್ಲಿ ಋತುಸ್ರಾವ, ಗರ್ಭಿಣಿಯರಲ್ಲಿ, ಬಾಣಂತಿಯರಲ್ಲಿ, ಹದಿಹರೆಯದ ಹೆಣ್ಣುಮಕ್ಕಳಲ್ಲಿ, ಜಂತುಹುಳುವಿನ ಸಮಸ್ಯೆಯಿಂದ, ಅಪೌಷ್ಟಿಕ ಆಹಾರ ಸೇವನೆಯಿಂದಾಗಿ ರಕ್ತ ಹೀನತೆ ಕಂಡುಬರಬಹುದು.

ರಕ್ತಹೀನತೆಯಿಂದಾಗಿ ತಲೆಸುತ್ತವುದು, ಕೂದಲು ಉದುರುವುದು, ಉಬ್ಬಿದ ಉಗುರುಗಳು, ಉಸಿರಾಡಲು ತೊಂದರೆ, ಪದೇ ಪದೇ ಕಂಡುಬರುವ ಬಾಯಿಹುಣ್ಣು, ಆಯಾಸ, ಹೃದಯದ ಬಡಿತದಲ್ಲಿ ಏರಿಳಿತ, ಮುಟ್ಟಿನ ತೊಂದರೆಯೊಂದಿಗೆ , ಕೆಲವರಲ್ಲಿ ಆಹಾರೇತರ ವಸ್ತುಗಳಾದ ಮಂಜುಗಡ್ಡೆ, ಮಣ್ಣು, ಸೀಮೆಸುಣ್ಣದ ಸೇವನೆಯನ್ನು ಕಾಣಬಹುದಾಗಿದೆ. ಇಂತಹ ಲಕ್ಷಣಗಳು ಕಂಡುಬಂದರೆ ಹಿಮೋಗ್ಲೋಬಿನ್ ಪ್ರಮಾಣವನ್ನು ಪರಿಶೀಲಿಸಿಕೊಳ್ಳುವುದು ಅಗತ್ಯ.

ರಕ್ತಹೀನತೆ ಸಮಸ್ಯೆಯಿಂದ ಮುಕ್ತರಾಗಬೇಕಾದರೆ ಮೊದಲು ಮೂಲ ಕಾರಣವನ್ನು ತಿಳಿದುಕೊಂಡು, ನಂತರ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಮುಖ್ಯ ಕಬ್ಬಿನಾಂಶ ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಆಹಾರಗಳಾದ ಹಸಿರು ತರಕಾರಿ, ಬೀಟ್ರೂಟ್, ಕ್ಯಾರಟ್, ಸೇಬು ಹಣ್ಣು, ದಾಳಿಂಬೆ ಹಣ್ಣು, ಬ್ರೋಕಲಿ, ಒಣ ದ್ರಾಕ್ಷಿ ಖರ್ಜುರ, ನುಗ್ಗೆಸೊಪ್ಪು,ಮಾಂಸಹಾರಗಳನ್ನು ನಿಗದಿತ ಪ್ರಮಾಣದಲ್ಲಿ ಸೇವಿಸುವುದರಿಂದ ಆರಂಭಿಕ ಘಟ್ಟದಲ್ಲೇ ಪರಿಣಾಮಕಾರಿಯಾಗಿರುವುದು.

ರಕ್ತಹೀನತೆ ಎನ್ನುವುದು ಒಂದು ಖಾಯಿಲೆಯಲ್ಲ, ಕೆಲವೊಮ್ಮೆ ಇದು ಇತರ ರೋಗದ ಲಕ್ಷಣವಾಗಿರಬಹುದು. ಆದ್ದರಿಂದ ಇದನ್ನು ಕಡೆಗಣಿಸದೆ ಸೂಕ್ತ ಚಿಕಿತ್ಸೆಯನ್ನು ಆರಂಭಿಕ ಘಟ್ಟದಲ್ಲೇ ಪಡೆದುಕೊಳ್ಳುವುದರಿಂದ ಆರೋಗ್ಯದ  ಸುಸ್ಥಿತಿಯನ್ನು ಕಾಪಾಡಿಕೊಳ್ಳಬಹುದು.

ಡಾ. ಭವ್ಯ ಶೆಟ್ಟಿ
ಹೋಮಿಯೋಪತಿ ವೈದ್ಯರು
ಶ್ರೀ ಗುರು ಹೋಮಿಯೋಪತಿ ಕ್ಲೀನಿಕ್ ಬೆಳುವಾಯಿ 

drbhavyashetty10@gmail.com

ಇತ್ತೀಚಿನ ಸುದ್ದಿ

ಜಾಹೀರಾತು