9:31 AM Friday26 - April 2024
ಬ್ರೇಕಿಂಗ್ ನ್ಯೂಸ್
ಜನಾರ್ದನ ಪೂಜಾರಿ ಮಾದರಿಯಲ್ಲಿ ಪದ್ಮರಾಜ್ ಪೂಜಾರಿ ಅಭಿವೃದ್ಧಿಯ ಹರಿಕಾರ ಆಗಲಿದ್ದಾರೆ: ಲಿಬ್‌ಝಿತ್ ಅಭಿಮತ ನೈಟ್ ಸರ್ವಿಸ್ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬೆಳ್ತಂಗಡಿ ನಿವಾಸಿಯ ಬಂಧನ ರಾಜ್ಯದ 14 ಕ್ಷೇತ್ರಗಳಲ್ಲಿ ನಾಳೆ ಮೊದಲ ಹಂತದ ಚುನಾವಣೆ: ಕರಾವಳಿಯಲ್ಲಿ ಸಕಲ ಸಿದ್ದತೆ;… ನಂಜನಗೂಡಿನ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ: ಮತಗಟ್ಟೆಯ ಅಧಿಕಾರಿಗಳಿಗೆ ಪಾಠ; ಜಾಗೃತಿಯಾಗಿ ಕರ್ತವ್ಯ… ನಾವು ಇಂದೇ ಹೊಂಟೇವು ಮತಗಟ್ಟೆಗೆ; ನೀವು ನಾಳೆ ತಪ್ಪದೆ ಬನ್ನಿ ಮತದಾನಕ್ಕೆ ದ.ಕ. ಲೋಕಸಭೆ ಕ್ಷೇತ್ರ: ರಾಹುಲ್, ಪ್ರಿಯಾಂಕಾ ಬಾರದೆ, ಸ್ಟಾರ್ ಕ್ಯಾಂಪೇನರ್ ಇಲ್ಲದೆ ಚುನಾವಣೆ… ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್… ಬಹಿರಂಗ ಪ್ರಚಾರದ ಕೊನೆಯ ದಿನ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರಿಂದ ಪಂಪ್’ವೆಲ್’… ಪಂಪ್ ವೆಲ್ ನಿಂದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಉರಿ… ನಂಜನಗೂಡು: ಮಾಜಿ ಶಾಸಕ ಹರ್ಷವರ್ಧನ್ ಅವರಿಂದ ಬಿಜೆಪಿ ಅಭ್ಯರ್ಥಿ ಬಾಲರಾಜ್ ಪರ ಮತಯಾಚನೆ

ಇತ್ತೀಚಿನ ಸುದ್ದಿ

ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪತ್ರಕರ್ತ  ಬಿ. ಎಸ್. ಕುಲಾಲ್ ಗೆ ಕುಲಾಲ ಮಾತೃ ಸಂಘದಿಂದ ಗೌರವ

09/11/2021, 23:00

ಮಂಗಳೂರು(reporterkarnataka.com) :  ದ. ಕ. ಜಿಲ್ಲಾ ಮೂಲ್ಯರ ಯಾನೇ ಕುಲಾಲರ ಮಾತೃ ಸಂಘ ದ ಕಾರ್ಯಾಲಯದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪತ್ರಕರ್ತ ಬಿ. ಎಸ್. ಕುಲಾಲ್ ಅವರನ್ನು ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಬಿ.ಎಸ್. ಕುಲಾಲ್, ಸುದೀರ್ಘ ಕಾಲದಿಂದ ಪತ್ರಿಕೆಯಲ್ಲಿ ನನ್ನ ಸೇವೆಯನ್ನು ಮಾಡಿದ್ದೇನೆ. ಪ್ರಶಸ್ತಿಗಾಗಿ ಯಾವುದೇ ರೀತಿಯ ಶಿಫಾರಸನ್ನು ಮಾಡಿಲ್ಲ ಮತ್ತು ಅರ್ಜಿಯನ್ನು ನೀಡಿಲ್ಲ. ನನ್ನ ಪತ್ರಿಕಾ ಮಾಧ್ಯಮದ ಸೇವೆಯನ್ನು ಜಿಲ್ಲಾಡಳಿತ ಗುರುತಿಸಿದೆ. ಇದು ಜಿಲ್ಲೆಯ ಸ್ವಾರ್ಥರಹಿತ ನಿಷ್ಠಾವಂತ ಪತ್ರಕರ್ತರಿಗೆ ಸಂದ ಗೌರವಾಗಿದೆ. ಸಮಾಜ ನನ್ನನ್ನು ಗುರುತಿಸಿರುವುದು ಅಭಿಮಾನ ತಂದಿದೆ ಎಂದು ನುಡಿದರು.

ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರು ಉಪಸ್ಥಿತರಿದ್ದು ಕುಲಾಲ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಪ್ರತಿಭೆಗಳಿಗೆ ಜಿಲ್ಲಾ  ಕುಲಾಲರ  ಮಾತೃ  ಸಂಘ ಸಹಕಾರ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಾಲ್ ಮಾತೃ ಸಂಘದ ಅಧ್ಯಕ್ಷ ಮಯೂರ ಉಳ್ಳಾಲ್ ಅವರು ಮಾತನಾಡಿ,ಮಾಧ್ಯಮ ಕ್ಷೇತ್ರದಲ್ಲಿ ಕುಲಾಲ  ಸಮಾಜದ ಬಂಧುಗಳು ಅಪಾರ ಸಂಖ್ಯೆಯಲ್ಲಿದ್ದಾರೆ. ಅವರೆಲ್ಲರ ಸೇವಾಕಾರ್ಯಗಳನ್ನು ಗುರುತಿಸುವ ಕೆಲಸ ಮುಂದಿನ ದಿನಗಳಲ್ಲಿ ಕುಲಾಲ ಸಂಘಗಳು ನಡೆಸುತ್ತದೆ. ಕುಲಾಲ ಸಮಾಜ ಬಾಂಧವರನ್ನು ಸರಕಾರ ಗುರುತಿಸಿರುವುದು ಅಭಿಮಾನ ತಂದಿದೆ ಎಂದು ನುಡಿದರು

 ಈ ಸಂದರ್ಭದಲ್ಲಿ ಜಿಲ್ಲಾ ಕುಲಾಲ  ಮಾತೃ ಸಂಘದ ಉಪಾಧ್ಯಕ್ಷ ಜಯಪ್ರಕಾಶ್, ಪುಂಡರೀಕಾಕ್ಷ  (ಮುಡಿಪು ಸಂಘದ ಪ್ರತಿನಿಧಿ), ಚಂದ್ರಕಾಂತ (ಮಾತೃ ಸಂಘದ ಕಾರ್ಯದರ್ಶಿ), ಸದಾಶಿವ ಕುಲಾಲ್ (ಸಂಘಟನಾ ಕಾರ್ಯದರ್ಶಿ), ಪ್ರವೀಣ್ ಬಸ್ತಿ (ಕೊಲ್ಯ ಕುಲಾಲ ಸಂಘ ಅಧ್ಯಕ್ಷರು), ಸುಕುಮಾರ್ ಬಂಟ್ವಾಳ (ಕುಲಾಲ ಯುವ ವೇದಿಕೆ ಜಿಲ್ಲಾಧ್ಯಕ್ಷ ರು), ದಿನೇಶ್ ಕುಲಾಲ್ (ಮುಂಬಯಿ ಕರ್ನಾಟಕ ಮಲ್ಲ ಪತ್ರಿಕೆಯ ವರದಿಗಾರ), ಸತೀಶ್ ಸಂಪಾಜೆ (ವಿಜಯ ಕರ್ನಾಟಕ ಉದ್ಯೊಗಿ),  ನವೀನ್ ಕುಲಾಲ್ (ಪುತ್ತೂರು ಕುಲಾಲ ಸಂಘ ಪ್ರತಿನಿಧಿ) , ಕಿರಣ್ ಅಟ್ಲೂರು (ಸೇವಾದಳದ ದಳಪತಿ), ಪದ್ಮನಾಭ ವೇಣೂರು (ಪತ್ರಕರ್ತರು), ಧರಣಿ (ವಿಜಯ ಕರ್ನಾಟಕ ಉದ್ಯೊಗಿ) ಹಾಗೂ ಸೈಲೇಶ್ ನೆಟ್ಟಾರ್ (ಸುಳ್ಯ ಕುಲಾಲ ಸಂಘದ ಅಧ್ಯಕ್ಷರು) ಮತ್ತು ಪ್ರಸಾದ್ ಕುಲಾಲ್ ಸಿದ್ಧಕಟ್ಟೆ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು