9:42 AM Saturday18 - September 2021
ಬ್ರೇಕಿಂಗ್ ನ್ಯೂಸ್
ಕೋಲಾರ: ಮಕ್ಕಳಲ್ಲಿ ಹೆಚ್ಚಾಗುತ್ತಿರುವ ವೈರಲ್ ಫೀವರ್ ತಡೆಗೆ ವಿಶೇಷ ವೈದ್ಯರ ತಂಡ ರಚಿಸಿ,… ಕಾರ್ಕಳ: ಕಾಲೇಜಿಗೆಂದು ತೆರಳಿದ 17ರ ಹರೆಯದ ತರುಣ ನಾಪತ್ತೆ ಒಂದೇ ದಿನ 2 ಕೋಟಿ ಜನರಿಗೆ ವ್ಯಾಕ್ಸಿನೇಶನ್: ಹೊಸ ದಾಖಲೆ ನಿರ್ಮಾಣ; ಯಾವ… ಹುಬ್ಬಳ್ಳಿಯಲ್ಲಿ ಕಣ್ಣೀರು ಸುರಿಸಿದ ಮುಖ್ಯಮಂತ್ರಿ ಬೊಮ್ಮಾಯಿ !!: ಅಷ್ಟಕ್ಕೂ ಸಿಎಂ ದುಃಖಿಸಿದ್ದು ಯಾಕಾಗಿ?  ಪ್ರಧಾನಿ ಮೋದಿ ಜನ್ಮದಿನಾಚರಣೆ: ಮಂಗಳೂರಿನಲ್ಲಿ ಕಾಂಗ್ರೆಸ್ ನಿಂದ ಟೀ, ಪಕೋಡ ಮಾರಿ ವಿನೂತನ… ವಿಶ್ವದ ಅಗ್ರ ಶ್ರೇಣಿಯ ಆಪಲ್ ‘ಐಫೋನ್ 13’ ಸರಣಿ ಬಿಡುಗಡೆ !; ಹಾಗಾದರೆ… ರಾಜ್ಯದ 372 ತಾಲೂಕುಗಳಲ್ಲಿ ಸ್ಮಶಾನವೇ ಇಲ್ಲ: ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದೇನು?… ವರ್ಗಾವಣೆ ನಿರೀಕ್ಷೆಯಲ್ಲಿದ್ದ ರಾಜ್ಯದ ಶಿಕ್ಷಕರಿಗೆ ಬಿಗ್ ಶಾಕ್: ಹಾಗಾದರೆ ಸರಕಾರ ಹೊರಡಿಸಿದ ಹೊಸ… ದೇಗುಲ ಧ್ವಂಸ; ಮೈಸೂರು ಉಸ್ತುವಾರಿ ಸಚಿವರು ರಾಜೀನಾಮೆ ನೀಡಲಿ: ಮಾಜಿ ಸಚಿವ ಯು.ಟಿ.ಖಾದರ್… ಬಾಲಿವುಡ್ ನಟ, ದಾನಿ ಸೋನು ಸೂದ್‌ಗೆ ಸೇರಿದ 6 ಸ್ಥಳಗಳಿಗೆ ಐಟಿ ದಾಳಿ:…

ಇತ್ತೀಚಿನ ಸುದ್ದಿ

ಎನ್ ಎಸ್ ಯುಐ ರಾಜ್ಯ ಜಂಟಿ ಕಾರ್ಯದರ್ಶಿ ಆಗಿ ಕಾಂಗ್ರೆಸ್ ಯುವ ನಾಯಕ ಜಿಂಕಲರ ಶಶಾಂಕ ನೇಮಕ 

24/08/2021, 13:12

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಕಾಂಗ್ರೇಸ್ ಯುವ ನಾಯಕ ಜಿಂಕಲರ ಶಶಾಂಕ ಅವರು ಎನ್.ಎಸ್.ಯು.ಐ ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.

ಈ ಕುರಿತು ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಎರಿಕ್ ಸ್ಟಿಫನ್  ಅವರು, ಶಶಾಂಕ ಅವರನ್ನು ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್

ಸಂಘಟನೆಯ ಜಂಟಿ ಕಾರ್ಯದರ್ಶಿಗಳನ್ನಾಗಿ ಆಗಸ್ಟ್ 18ರಂದು ನೇಮಿಸಿರುವುದಾಗಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

ಅಭಿನಂದನೆ; ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳು ರಾಷ್ಟ್ರ ಹಾಗೂ ರಾಜ್ಯ ರಾಜಕೀಯದಲ್ಲಿ, ತಮ್ಮದೇ ಆದ ವಿಶಿಷ್ಟ ವಾದ ಪ್ರಭಾವ ಮತ್ತು ತನ್ನದೇ ಆದ ಛಾಪನ್ನು ಮೂಡಿಸುತ್ತಲೇ ಬಂದಿವೆ. ಅದು ಯಾವುದೇ ಪಕ್ಷವಾಗಿರಬಹುದು ಅಥವಾ ಎರಡೂ ಜಿಲ್ಲೆಗಳ ಯಾವುದೇ ಭಾಗದ ಮುಖಂಡರಿರಬಹುದು. ಅಂತೆಯೇ ಕೂಡ್ಲಿಗಿ ಪಟ್ಟಣ ಜಿಂಕಲರ ಶಶಾಂಕರವರು ರಾಷ್ಟ್ರೀಯ ಕಾಂಗ್ರೇಸ್ ಮುಖಂಡರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಪಕ್ಷದ ವಿದ್ಯಾರ್ಥಿ ಸಂಘಟನೆಯ ರಾಜ್ಯ ಜಂಟಿ ಕಾರ್ಯದರ್ಶಿಗಳಾಗಿ ತಾವು ನೇಮಕ ವಾಗೋ ಮೂಲಕ ಸಮಾಜಕ್ಕೆ ಪ್ರಸ್ತುತ ಪಡಿಸಿದ್ದಾರೆ.ಅದಕ್ಕಾಗಿ ಅವರಿಗೆ ಪಕ್ಷದ ಮುಖಂಡರಿಂದ ಕಾರ್ಯಕರ್ತರಿಂದ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.

ಪ್ರವಾಸಿ ಮಂದಿರದಲ್ಲಿ ಜರುಗಿದ ಪತ್ರಿಕಾ ಗೋಷ್ಠಿ ಯಲ್ಲಿ, ಶಶಾಂಕ ಅವರನ್ನು ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂದಿಸಿ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೇಸ್ ಮಹಿಳಾ ಮುಖಂಡರಾದ ಜಿಂಕಲರ ನಾಗಮಣಿ, ಎಚ್.ಕೆ.ಕುಂಟೆ ಛಲುವಾದಿ ಉಮೇಶ, ಪಪಂ ಸದಸ್ಯ ಕಾವಲ್ಲಿ ಶಿವಪ್ಪ, ಪ್ರದೀಪ, ಕೆ.ಕೆ.ಹಟ್ಟಿ ಬಸವರಾಜ, ಮೊರಬದ ವೀರಭದ್ರಪ್ಪ, ಚಾಂದಭಾಷಾ, ಮುನ್ನಾಬಯ್ಯ, ಮಾಳ್ಗಿ ಮಂಜುನಾಥ, ಸಾಲುಮನಿ ರಾಘವೇಂದ್ರ ಸೇರಿದಂತೆ ಪಟ್ಟಣ ಹಾಗೂ ತಾಲೂಕಿನ ವಿವಿದ ಭಾಗದಿಂದ ಆಗಮಿಸಿದ್ದ ಕಾಂಗ್ರೇಸ್ ಮುಖಂಡರು ಮತ್ತು ಕಾರ್ಯಕರ್ತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು