11:29 AM Wednesday18 - May 2022
ಬ್ರೇಕಿಂಗ್ ನ್ಯೂಸ್
ವೈದ್ಯರ ಹೂ ಕುಂಡ ಎತ್ತುವ ದಮ್ಮು ಇಲ್ಲದ ಪಾಲಿಕೆ ಆಡಳಿತ, ಅಕ್ರಮ ಕಟ್ಟಡಕ್ಕೆ… ಉಳ್ಳಾಲ: ಮಳೆಗೆ ಕಿನ್ಯಾ ಬೆಳರಿಂಗೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಕುಸಿತ ವಿಜಯನಗರ ಪೂಜಾರಹಳ್ಳಿ ತಾಂಡ: ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಗಾರೆ ಪಾಠ.!? ಮಧುಗುಂಡಿ: 2019ರ ಮಹಾಮಳೆ ಸಂತ್ರಸ್ತರಿಗೆ ಸರಕಾರದಿಂದ ಇನ್ನೂ ಸಿಕ್ಕಿಲ್ಲ ಮನೆಭಾಗ್ಯ! ಬಡವರ ಅನ್ನಕ್ಕೂ ಕನ್ನ: ಇಂದಿರಾ ಕ್ಯಾಂಟೀನ್ ಊಟ ಹೋಟೆಲ್ ಗಳಿಗೆ ಸಪ್ಲೈ: ದಿನಕ್ಕೆ… ಕಾಫಿನಾಡ ಬಯಲು ಸೀಮೆಯಲ್ಲಿ ಭಾರಿ ಮಳೆ ಅಬ್ಬರ: ತರೀಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ 2… ಮೂಡಿಗೆರೆ: ರಸ್ತೆಗೆ ಉರುಳಿದ ಬೃಹತ್ ಮರ; 2 ತಾಸು ಸಂಚಾರ ಬಂದ್; ಕಿಮೀಗಟ್ಟಲೆ… ಕರ್ನಾಟಕದಿಂದ ರಾಜ್ಯಸಭೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧೆ?: ರಾಜ್ಯದಿಂದ ಈ ಹಿಂದೆ ಇಂದಿರಾ, ಸೋನಿಯಾ… ಕೇರಳದ ಟೊಮೆಟೋ ಜ್ವರ: ಕೊಡಗಿನಲ್ಲಿ ಮುನ್ನೆಚ್ಚರಿಕಾ ಕ್ರಮ; ಗಡಿಯಲ್ಲಿ ಕಟ್ಟುನಿಟ್ಟಿನ ಆರೋಗ್ಯ ತಪಾಸಣೆ ಕೆಎಸ್ಸಾರ್ಟಿಸಿ ಬಸ್ ಪಾಸ್ ಕುರಿತು ಗೊಂದಲ ಬೇಡ: ಹಳೆ ಪಾಸ್ ತೋರಿಸಿ ವಿದ್ಯಾರ್ಥಿಗಳೇ…

ಇತ್ತೀಚಿನ ಸುದ್ದಿ

ಮಾಜಿ ಸಿಎಂ ಯಡಿಯೂರಪ್ಪರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ: ಸರಕಾರದಿಂದ ಆದೇಶ

07/08/2021, 20:03

ಬೆಂಗಳೂರು(reporterkarnataka.com): ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಿ ಸರಕಾರ ಆದೇಶ ಹೊರಡಿಸಿದೆ.

ರಾಜ್ಯಪಾಲರ ಆದೇಶದ ಮೇರೆಗೆ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಅಧೀನ ಕಾರ್ಯದರ್ಶಿ ರಾಜೇಶ್ ಶಂಕ್ರಪ್ಪ ಎಸ್. ಅವರು ಈ ಕುರಿತು ಆದೇಶ ನೀಡಿದ್ದಾರೆ. ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧಿಕಾರವಧಿ ಇರುವ ತನಕ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಪುಟ ದರ್ಜೆಯ ಸಚಿವರಿಗೆ ನೀಡುವ ಎಲ್ಲ ಸ್ಥಾನಮಾನ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಒಂದು ಕಡೆ ಪದೇ ಪದೇ  ಕೊರೊನಾ ಲಾಕ್ ಡೌನ್ ನಿಂದ ಜನರು ತತ್ತರಿಸಿ ಹೋಗಿದ್ದಾರೆ. ಕೆಲಸ, ವ್ಯಾಪಾರವಿಲ್ಲದೆ ಮೂರು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದಾರೆ. ಇನ್ನೊಂದು ಕಡೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿ ಜನರು ಕಾಳಜಿ ಕೇಂದ್ರ ಸೇರಿದ್ದಾರೆ. ಮನೆ ಮಠ ಕಳೆದುಕೊಂಡವರಿಗೆ ಇನ್ನೂ ಸರಕಾರದಿಂದ ತಕ್ಕ ವ್ಯವಸ್ಥೆಯಾಗಿಲ್ಲ. ಕಳೆದ ವರ್ಷದ ಪ್ರವಾಹದಲ್ಲಿ ಸಂತ್ರಸ್ತರಾದವರಿಗೆ ಇನ್ನೂ ಪರಿಹಾರ ನೀಡಿಲ್ಲ. ಕೊರೊನಾ ಪ್ಯಾಕೇಜ್ ನಲ್ಲಿ ಘೋಷಿಸಿದ 2-3 ಸಾವಿರ ಕೂಡ ಹಲವರ ಕೈಸೇರಿಲ್ಲ. ಇವೆಲ್ಲದರ ನಡುವೆ ಹೊಸ ಸಚಿವರುಗಳು ಹಾರ-ತುರಾಯಿ ಹಾಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ಸಚಿವ ಪದವಿ ಸಿಗದವರು ಅಧಿಕಾರಕ್ಕಾಗಿ ಕೈಹಿಚುಕಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಸಿಕ್ಕಿದ ಖಾತೆ ಚೆನ್ನಾಗಿಲ್ಲ ಇನ್ನೂ ಹುಲುಸಾಗಿರುವ ಖಾತೆ ಬೇಕೆಂದು ಒದ್ದಾಡುತ್ತಿದ್ದಾರೆ. ಆದರೆ ಜನರು ಮಾತ್ರ ಮನೆ ಬಾಡಿಗೆ/ಮನೆ ಕಂತು, ಸಾಲದ ಕಂತು,ಅಂಗಡಿ ಬಾಡಿಗೆ, ಕರೆಂಟ್ ಬಿಲ್ ಕಟ್ಟಲಾಗದೆ ಒದ್ದಾಡುತ್ತಿದ್ದಾರೆ. ಈ ಜನಪ್ರತಿನಿಧಿಗಳು ಜನರ ಸೇವಕರೋ ಅಲ್ಲ, ಮಾಂಡಲಿಕರೋ ಎನ್ನುವುದು ಅರ್ಥವಾಗದೆ ಜನರು ಗೊಂದಲಕ್ಕೆ ಸಿಲುಕಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು