1:40 AM Thursday20 - January 2022
ಬ್ರೇಕಿಂಗ್ ನ್ಯೂಸ್
ಲಾಕ್ ಡೌನ್, ಕರ್ಫ್ಯೂ ವಿಧಿಸುವುದಾಗಿದ್ದರೆ ವ್ಯಾಕ್ಸಿನ್ ಏಕೆ ನೀಡಬೇಕಿತ್ತು: ಸಂಸದ ಪ್ರತಾಪ್ ಸಿಂಹ… ಇಬ್ಬರು ಅಂತರ್ ಜಿಲ್ಲಾ ಚೋರರ ಬಂಧನ: 8 ಲಕ್ಷ ರೂ. ಮೌಲ್ಯದ ವಾಹನಗಳ… ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಸಖರಾಯಪಟ್ಟಣ ರಥೋತ್ಸವ ಆಚರಣೆ: ಅರ್ಚಕರು ಸೇರಿ 9 ಮಂದಿ ವಿರುದ್ಧ ಕೇಸ್ ಹೋಂ ಐಸೋಲೇಷನ್’ ಆಗಿರೋರಿಗೆ ಇನ್ಮುಂದೆ  ‘ಮೆಡಿಸಿನ್ ಕಿಟ್’ ವಿತರಣೆ:  ‘ಔಷಧಿಗಳ ಪಟ್ಟಿ ಹೀಗಿದೆ… ಖಾಸಗಿ ಮೆಡಿಕಲ್ ಕಾಲೇಜಿನ ಪ್ರಯೋಗ ಶಾಲೆಯೇ ಸರಕಾರಿ ವೆನ್ಲಾಕ್ ಅಸ್ಪತ್ರೆ?: ಬಡ ರೋಗಿಗಳ… ಜಿಲ್ಲಾಧಿಕಾರಿ ಆದೇಶಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು!: ಸಖರಾಯಪಟ್ಟಣದ ಶಕುನ ರಂಗನಾಥ ಸ್ವಾಮಿಗೆ ನಡೆಯಿತು… ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ವಾಯ್ಸ್ ಆಫ್ ಆರಾಧನ ಮಕ್ಕಳ ಸಾಂಸ್ಕೃತಿಕ ಸಂಭ್ರಮ ಕೆಮ್ಮಿದ್ರೆ ಕೊರೊನಾ ಅನ್ನೋ ಕಾಲವಿದು!; ಆದರೆ ಹೆದ್ದಾರಿ ಪ್ರಾಧಿಕಾರ 10 ಹಳ್ಳಿಗಳನ್ನೇ ಕೆಮ್ಮು… ಕಾಫಿನಾಡಿನ ಖಾಕಿಗಳಿಗೆ ಕೊರೊನಾ ಕಾಟ: 27 ಮಂದಿ ಪೊಲೀಸರಿಗೆ ಹೋಂ ಐಸೋಲೇಶನ್! ಕೋಸ್ಟಲ್ ವುಡ್ ನ ಬಹು ನಿರೀಕ್ಷಿತ ತುಳು ಚಿತ್ರ  ‘ಸರ್ಕಸ್’ ನ ಚಿತ್ರೀಕರಣ…

ಇತ್ತೀಚಿನ ಸುದ್ದಿ

ಮೊದಲ ಬಾರಿ ಸಚಿವರಾದರಿಗೆ ಜಾಕ್‌ಪಾಟ್ : ಸುನಿಲ್ ಕುಮಾರ್‌ಗೆ ಇಂಧನ, ಅರಗ ಜ್ಞಾನೇಂದ್ರಗೆ ಗೃಹ ಖಾತೆ

07/08/2021, 13:14

ಬೆಂಗಳೂರು (ReporterKarnataka.com)

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 29 ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಆದೇಶ ನೀಡಿದ್ದಾರೆ.

29 ಸಚಿವರಲ್ಲಿ 15 ಮಂತ್ರಿಗಳು ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ನಿರ್ವಹಸಿದ್ದ ಖಾತೆಯನ್ನೇ ಕೊಡಲಾಗಿದೆ, 7 ಸಚಿವರ ಖಾತೆ ಬದಲಾವಣೆ ಮಾಡಲಾಗಿದೆ. ಉಳಿದಂತೆ ಮೊದಲ ಬಾರಿಗೆ ಸಚಿವರಾದವರಿಗೆ ಪ್ರಮುಖ ಖಾತೆಯ ಜವಬ್ದಾರಿ ನೀಡಲಾಗಿದೆ. ವಿ ಸುನೀಲ್ ಕುಮಾರ್ ಅವರಿಗೆ ಇಂಧನ ಮತ್ತು ಆರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆ ನೀಡಲಾಗಿದೆ.

ಸಚಿವ ಸಂಪುಟದ ಖಾತೆ ಹಂಚಿಕೆ ವಿವರ ಹೀಗಿದೆ :-
ಉಮೇಶ್​ ಕತ್ತಿ- ಅರಣ್ಯ, ಆಹಾರ
ಎಸ್. ಅಂಗಾರ- ಮೀನುಗಾರಿಕೆ
ಜೆ.ಸಿ. ಮಾಧುಸ್ವಾಮಿ- ಸಣ್ಣ ನೀರಾವರಿ, ಕಾನೂನು ಸಂಸದೀಯ ವ್ಯವಹಾರ
ಅರಗ ಜ್ಞಾನೇಂದ್ರ- ಗೃಹ ಇಲಾಖೆ
ಡಾ. ಅಶ್ವತ್ಥ ನಾರಾಯಣ- ಉನ್ನತ ಶಿಕ್ಷಣ, ಐಟಿಬಿಟಿ
ಆನಂದ್​ ಸಿಂಗ್- ಪರಿಸರ, ಪ್ರವಾಸೋದ್ಯಮ
ಸಿಸಿ ಪಾಟೀಲ್- ಲೋಕೋಪಯೋಗಿ ಇಲಾಖೆ
ಕೋಟಾ ಶ್ರೀನಿವಾಸ ಪೂಜಾರಿ- ಸಮಾಜ ಕಲ್ಯಾಣ, ಹಿಂದುಳಿದ ವರ್ಗ
ಪ್ರಭು ಚೌಹಾಣ್​- ಪಶು ಸಂಗೋಪನೆ
ಮುರುಗೇಶ್ ನಿರಾಣಿ- ಬೃಹತ್ ಕೈಗಾರಿಕೆ
ಶಿವರಾಮ್ ಹೆಬ್ಬಾರ್​- ಕಾರ್ಮಿಕ ಖಾತೆ
ಎಸ್.ಟಿ. ಸೋಮಶೇಖರ್- ಸಹಕಾರ ಖಾತೆ
ಬಿ.ಸಿ. ಪಾಟೀಲ್- ಕೃಷಿ ಖಾತೆ
ಭೈರತಿ ಬಸವರಾಜ್- ನಗರಾಭಿವೃದ್ಧಿ
ಡಾ.ಕೆ. ಸುಧಾಕರ್- ಆರೋಗ್ಯ, ವೈದ್ಯಕೀಯ ಶಿಕ್ಷಣ ಖಾತೆ
ಗೋಪಾಲಯ್ಯ- ಅಬಕಾರಿ ಖಾತೆ
ಶಶಿಕಲಾ ಜೊಲ್ಲೆ- ಮುಜರಾಯಿ, ಹಜ್​, ವಕ್ಫ್​ ಖಾತೆ
ಎಂಟಿಬಿ ನಾಗರಾಜ್​- ಪೌರಾಡಳಿ ಖಾತೆ
ನಾರಾಯಣಗೌಡ- ರೇಷ್ಮೆ, ಕ್ರೀಡೆ, ಯುವ ಸಬಲೀಕರಣ
ಬಿ.ಸಿ. ನಾಗೇಶ್- ಶಿಕ್ಷಣ ಇಲಾಖೆ
ಸುನೀಲ್​ ಕುಮಾರ್ – ಇಂಧನ, ಕನ್ನಡ- ಸಂಸ್ಕೃತಿ ಇಲಾಖೆ
ಶ್ರೀರಾಮುಲು- ಸಾರಿಗೆ ಖಾತೆ, ಪರಿಶಿಷ್ಟ ಜಾತೆ ಸಚಿವಾಲಯ
ಆರ್. ಅಶೋಕ್ – ಕಂದಾಯ ಇಲಾಖೆ
ವಿ. ಸೋಮಣ್ಣ- ವಸತಿ, ಮೂಲಭೂತ ಅಭಿವೃದ್ಧಿ ಖಾತೆ
ಕೆ.ಎಸ್. ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ
ಹಾಲಪ್ಪ ಆಚಾರ್- ಗಣಿ, ಭೂ ವಿಜ್ಞಾನ, ಮಹಿಳಾ- ಮಕ್ಕಳ ಕಲ್ಯಾಣ
ಶಂಕರ ಪಾಟೀಲ್ ಮುನೇನಕೊಪ್ಪ- ಜವಳಿ, ಸಕ್ಕರೆ ಖಾತೆ
ಮುನಿರತ್ನ- ತೋಟಗಾರಿಕೆ ಖಾತೆ, ಯೋಜನೆ, ಅಲ್ಪಸಂಖ್ಯಾತ ಕಲ್ಯಾಣ, ಸಾಂಖಿಕ
ಗೋವಿಂದ ಕಾರಜೋಳ- ಜಲಸಂಪನ್ಮೂಲ ಖಾತೆ


ಇತ್ತೀಚಿನ ಸುದ್ದಿ

ಜಾಹೀರಾತು