9:28 PM Sunday17 - October 2021
ಬ್ರೇಕಿಂಗ್ ನ್ಯೂಸ್
ಕೋವಿಡ್ ನಿಯಮ ಉಲ್ಲಂಘನೆ: ಉಡುಪಿ ಹಿಂದೂ ಜಾಗರಣ ವೇದಿಕೆ ಪ್ರಮುಖರ ವಿರುದ್ಧ ದೂರು… ಕಾರ್ಕಳ ಪಳ್ಳಿಯಲ್ಲಿ ದೇಶೀ ತಳಿಯ ಗೋವು ನಾಪತ್ತೆ; ದನ ಕಳ್ಳತನ ಶಂಕೆ; ಪ್ರಕರಣ… ಇನ್ನು ಮುಂದೆ ಭಾನುವಾರವೂ ಶಾಲೆ? : ಇದೆಲ್ಲ ಯಾಕೆ ಗೊತ್ತೇ?  ಶಿಕ್ಷಣ ಸಚಿವರು ಏನು… ಕೇರಳದಲ್ಲಿ ಭಾರಿ ಮಳೆಗೆ ಭೂಕುಸಿತ: 3 ಮಂದಿ ಸಾವು; 13ಕ್ಕೂ ಹೆಚ್ಚು ಜನರು… ಎಂಡೋಸಲ್ಫಾನ್ ಪೀಡಿತ ಯುವಕನ ಮೇಲೆ ಅತ್ಯಾಚಾರ ಆರೋಪ: ಪುತ್ತೂರು ನಗರ ಠಾಣೆ ಪೊಲೀಸರಿಂದ… ಮಂಗಳೂರು ದಸರಾ ಮುಗಿಸಿ ವಾಪಸಾಗುತ್ತಿದ್ದ ವೇಳೆ ಬೈಕ್ ಅಪಘಾತ: ಇಬ್ಬರ ದಾರುಣ ಸಾವು;… ಕಾರ್ಕಳ: ವಿವಾಹಿತ ಮಹಿಳೆ ಇಬ್ಬರು ಮಕ್ಕಳೊಂದಿಗೆ ನಾಪತ್ತೆ; ತಮ್ಮನಿಗೆ ಕರೆ ಮಾಡಿದ್ದ ಆಕೆ… ಅಥಣಿ: ಕೃಷ್ಣಾ ನದಿ ಪ್ರವಾಹ ಸಂತ್ರಸ್ತರಿಗೆ ಈಗ ಮೊಸಳೆ, ವಿಷ ಜಂತುಗಳ ಕಾಟ: ಇನ್ನೂ… ವಸತಿ ಶಾಲೆಯ ಗಣಿತ ಶಿಕ್ಷಕನ ಕಾಮದಾಟ: ಅಪ್ರಾಪ್ತ ವಿದ್ಯಾರ್ಥಿನಿಯರ ಜತೆ ಅಶ್ಲೀಲ ವರ್ತನೆ;… ಮಂಗಳೂರು ದಸರಾ ಮಹೋತ್ಸವ: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಹರಿದು ಬಂದ ಭಕ್ತಸಾಗರ; ಶಾರದೆ,…

ಇತ್ತೀಚಿನ ಸುದ್ದಿ

ಲಿಂಗಸುಗೂರು ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಕೋಟಿ ಅನುದಾನ: ಶಾಸಕ  ಹುಲಿಗೇರಿ ಸಚಿವ ಶ್ರೀರಾಮುಲುಗೆ

23/06/2021, 08:05

ಅಮರೇಶ್ ಲಿಂಗಸುಗೂರು ರಾಯಚೂರು

info.reporterkarnataka@gmail.com

ಲಿಂಗಸುಗೂರಿನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ‌.ಆರ್. ಅಂಬೇಡ್ಕರ್ ಅವರ ಸಾಂಸ್ಕೃತಿಕ ಭವನ ನಿರ್ಮಾಣ ವೆಚ್ಚವನ್ನು ಹೆಚ್ಚಿಸಲು ಶಾಸಕ ಡಿ.ಎಸ್. ಹುಲಿಗೇರಿ ಅವರು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರಿಗೆ ಶಿಫಾರಸು ಮಾಡಿದ್ದಾರೆ.

ಲಿಂಗಸುಗೂರು ನಗರದ ಅಂಬೇಡ್ಕರ್ ಸಾಂಸ್ಕೃತಿಕ ಭವನಕ್ಕಾಗಿ ಸುಮಾರು 8,9 ವರ್ಷಗಳ ಹಿಂದೆ ಜಾಗ ಮೀಸಲಾಗಿಸಿಕೊಂಡು ಕಟ್ಟಡ ನಿರ್ಮಾಣಕ್ಕಾಗಿ 50 ಲಕ್ಷ ರೂಪಾಯಿಗಳನ್ನು ಸರಕಾರ ಮಂಜೂರು ಮಾಡಿತ್ತು. ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡುವುದಕ್ಕಾಗಿ 50 ಲಕ್ಷ ರೂಪಾಯಿಗಳು ಸಾಕಾಗುವುದಿಲ್ಲ. ಈ ಭವನದ ನಿರ್ಮಾಣದ ಅಳತೆ 800 ಚದರ ಅಡಿ ಆಗಿದ್ದು ಇದಕ್ಕೆ ಕೇವಲ ಐವತ್ತು ಲಕ್ಷ ರೂಪಾಯಿಗಳನ್ನು ಸರಕಾರ ಮಂಜೂರು ಮಾಡಿದ್ದು ಇದರಲ್ಲಿ ಸುಸಜ್ಜಿತವಾದ ಭವನ ನಿರ್ಮಾಣ ಮಾಡಲಿಕ್ಕೆ ಆಗುವುದಿಲ್ಲ ಎಂದು ಶಾಸಕರು ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ತಿಳಿಸಿದ್ದಾರೆ.

ಸರಕಾರ ಮಂಜೂರು ಮಾಡಿದಂಥ 50 ಲಕ್ಷ ರೂಪಾಯಿಗಳು ಯಾವುದಕ್ಕೂ ಸಾಲುವುದಿಲ್ಲ, ಇದರಿಂದ ಕೇವಲ ಬುನಿಯಾದಿ, ಬೇಸ್ಮೆಂಟ್ ಗೂ , ಹಾಗೂ ಕಟ್ಟಡ ಕಟ್ಟಲು ಕೂಲಿಗೂ ಸಾಧ್ಯವಿಲ್ಲದಂತೆ ಯಾಗುತ್ತದೆ. ಇದರಲ್ಲಿ ಭವನ ಎಲ್ಲಿಂದ ನಿರ್ಮಾಣ ಮಾಡಲು ಸಾಧ್ಯ,? ಸರಕಾರವು ಬೇರೆ ಬೇರೆ ಕೆಲಸಗಳಿಗೆ ನೂರಾರು ಕೋಟಿ ಹಣವನ್ನು ಖರ್ಚು ಮಾಡುತ್ತದೆ. ಆದರೆ ಮೀಸಲಾತಿ ಕ್ಷೇತ್ರವಾದ ಲಿಂಗಸುಗೂರು ಅಂಬೇಡ್ಕರ್ ರವರ ಭವನಕ್ಕೆ ಮಲತಾಯಿ ಧೋರಣೆಯನ್ನು ತೋರುತ್ತಿದೆ.ಮಠಗಳಿಗೆ ಹಾಗೂ ಮಹಾನ್ ವ್ಯಕ್ತಿಗಳ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲು, ಕೋಟ್ಯಾನು ಗಟ್ಟಲೆ ಹಣವನ್ನು ಮಂಜೂರು ಮಾಡಿರುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ನೂರಾರು ಕೋಟಿ ಗಟ್ಟಲೆ ಹಣವನ್ನು ನೀರಾವರಿ ಇಲಾಖೆಗೆ ಮತ್ತು ಇನ್ನು ಕೆಲವು ಇಲಾಖೆಗಳಿಗೆ ಕೋಟಿ ಕೋಟಿ ಹಣವನ್ನು ಈಗಲೂ ಬಿಡುಗಡೆ ಮಾಡಿರುತ್ತದೆ ಎಂದು ಶಾಸಕರು ಹೇಳಿದ್ದಾರೆ.

ಇದು ಮೀಸಲು ಕ್ಷೇತ್ರವಾದರೂ ಇತ್ತಕಡೆ ಗಮನವನ್ನು ಹರಿಸುತ್ತಿಲ್ಲ. ಇದಕ್ಕಾಗಿ ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕರಾದ ಮಾನಪ್ಪ ವಜ್ಜಲ್, ಜೆಡಿ.ಎಸ್ ಮುಖಂಡರಾದ ಸಿದ್ದು ಬಂಡಿ, ಹಾಗೂ ಹಾಲಿ ಶಾಸಕರು ಹಾಗೂ ಇನ್ನಿತರರು ಈ ಕ್ಷೇತ್ರಕ್ಕೆ ಮೀಸಲಾಗಿರುತ್ತಾರೆ. ಹಾಗೂ ಇನ್ನಿತರ ಸಂಘ ಸಂಸ್ಥೆಗಳು  ಈ ಸರಕಾರಕ್ಕೆ ಒತ್ತಾಯ ಮಾಡಿ ಸುಮಾರು 2ಕೋಟಿ ಯಷ್ಟು ಅನುದಾನ ವಾಗುವಂತೆ ಹಾಗು ಸುಸಜ್ಜಿತವಾದ ಸಾಂಸ್ಕೃತಿಕ ಭವನದ ಕಟ್ಟಡವನ್ನು ನಿರ್ಮಾಣ ಮಾಡಲು ಸಾಧ್ಯವಾಗುವಂತೆ ಪ್ರೇರೇಪಿಸಬೇಕು ಎಂದಿದ್ದಾರೆ.

ದಲಿತ ಯುವ ಮುಖಂಡ ಮೋಹನ್  ಗೋಸ್ಲೆ ಅವರು ಎಲ್ಲರೂ ಪಕ್ಷಬೇಧ ಮರೆತು ಒಗ್ಗಟ್ಟಾಗಿ ಡಾ ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಶ್ರಮಿಸಬೇಕೆಂದು ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು