3:02 AM Wednesday24 - April 2024
ಬ್ರೇಕಿಂಗ್ ನ್ಯೂಸ್
ಬಹಿರಂಗ ಪ್ರಚಾರದ ಕೊನೆಯ ದಿನ: ಅನುಭವ, ಕಾರ್ಯಸೂಚಿ ತೆರೆದಿಟ್ಟ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್… ಬಹಿರಂಗ ಪ್ರಚಾರದ ಕೊನೆಯ ದಿನ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರಿಂದ ಪಂಪ್’ವೆಲ್’… ಪಂಪ್ ವೆಲ್ ನಿಂದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಉರಿ… ನಂಜನಗೂಡು: ಮಾಜಿ ಶಾಸಕ ಹರ್ಷವರ್ಧನ್ ಅವರಿಂದ ಬಿಜೆಪಿ ಅಭ್ಯರ್ಥಿ ಬಾಲರಾಜ್ ಪರ ಮತಯಾಚನೆ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಪ್ರಣಾಳಿಕೆ ಬಿಡುಗಡೆ ಹಿಂದೂ ಧರ್ಮ ಸಾಮರಸ್ಯದ ಬದುಕು ಹೇಳಿಕೊಟ್ಟಿದೆ: ಬೈಕಂಪಾಡಿ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ… ಮೋರ್ಗನ್ಸ್ ಗೇಟ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ರೋಡ್ ಶೋ: ಮತ… ಪ್ರಿಯಾಂಕಾ ಗಾಂಧಿ ಇಂದು ರಾಜ್ಯಕ್ಕೆ: ಚಿತ್ರದುರ್ಗದಲ್ಲಿ ಬಹಿರಂಗ ಸಭೆ; ಹಗರಿಬೊಮ್ಮನಹಳ್ಳಿಯಲ್ಲಿ ಸೌಮ್ಯಾ ರೆಡ್ಡಿ… ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏ.26ರಂದು ವಿಜಯಪುರಕ್ಕೆ: ರಾಜು ಆಲಗೂರ ಪರ ಚುನಾವಣಾ… ಬರ ಪರಿಹಾರ ನೀಡದಿದ್ದರೆ ಪ್ರಧಾನಿ ಹಾಗೂ ಗೃಹ ಸಚಿವರಿಗೆ ರಾಜ್ಯಕ್ಕೆ ಬರಲು ಜನತೆ…

ಇತ್ತೀಚಿನ ಸುದ್ದಿ

ಶಾಲೆಯ ಮಾದರಿಯಲ್ಲಿ ಗ್ರಂಥಾಲಯಗಳು ನಿರ್ವಹಣೆ ಆಗಬೇಕು: ಸಿಎಂಆರ್ ಶ್ರೀನಾಥ್ ಅಭಿಮತ

24/06/2021, 07:27

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಕೋವಿಡ್ ಕಾಲದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯಗಳನ್ನು ಶಾಲೆಯ ಮಾದರಿಯಲ್ಲಿ ನಿರ್ವಹಣೆ ಮಾಡಿ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಬೇಕೆಂದು ಸಮಾಜ ಸೇವಕ ಸಿಎಂಆರ್‌ ಶ್ರೀನಾಥ್ ಹೇಳಿದರು.

ನಗರದ ಗ್ರಂಥಾಲಯದ ಆವರಣದಲ್ಲಿ ಸೋಮವಾರ ಮೇಲ್ವಿಚಾರಕರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಓದುಗರಿಗೆ ಪುಸ್ತಕಗಳನ್ನ ಕೊಂಡುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಗ್ರಂಥಾಲಯದ ಮೂಲಕ ಪುಸ್ತಕಗಳನ್ನ ಕೊಟ್ಟು ವಿದ್ಯಾವಂತರನ್ನಾಗಿ ರೂಪಿಸುವಲ್ಲಿ ಗ್ರಂಥಾಲಯದ ಮೇಲ್ವಿಚಾರಕರ ಪಾತ್ರ ದೊಡ್ಡದು ಎಂದರು.

ದೇಶ ಮತ್ತು ರಾಜ್ಯಕ್ಕೆ ಉನ್ನತ ಅಽಕಾರಿಗಳನ್ನ ಕೊಟ್ಟ ಜಿಲ್ಲೆ ಕೋಲಾರ. ಅದಕ್ಕೆ ಮೂಲ ಶಿಕ್ಷಣ ಕಾರಣ. ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾವಂತರಿಗೆ ಕಾಲಕಾಲಕ್ಕೆ ತಲುಪಿಸಿ ಉನ್ನತ ಅಽಕಾರಿಗಳು ಆಗಲು ಗ್ರಂಥಾಲಯದ ಮೇಲ್ವಿಚಾರಕರ ಶ್ರಮ ಅಪಾರವಾದುದು ಎಂದರು.

ರೋಟರಿ ಸೆಂಟ್ರಲ್ ಅಧ್ಯಕ್ಷ ಎಸ್.ಸುಧಾಕರ್‌ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿನ ಜನರು ಇವತ್ತಿಗೂ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವುದಕ್ಕೆ ಹೆದರುತ್ತಿದ್ದಾರೆ. ಇದರಿಂದಲೇ ಹೆಚ್ಚಿಗೆ ಸಾವು-ನೋವುಗಳು ಆಗಿರುವುದು. ಇನ್ನು ಮುಂದಾದರೂ ಪ್ರತಿಯೊಬ್ಬರು ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಕೂಡಲೇ ತಪಾಸಣೆ ಮಾಡಬೇಕು, ಅಲ್ಲದೆ ಕಡ್ಡಾಯವಾಗಿ ಲಸಿಕೆಯನ್ನ ಹಾಕಿಸಿಕೊಂಡು ಅಮೂಲ್ಯವಾದ ಜೀವಗಳನ್ನ ಉಳಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷ ಹಾಗು ಕೋಲಾರ ಮತ್ತು  ಚಿಕ್ಕಬಳ್ಳಾಪುರ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರು ಕೆ.ಎಸ್.ಗಣೇಶ್ ಮಾತನಾಡಿ, ಕೊರೊನಾ ೨ನೇ ಅಲೆಯಲ್ಲಿ ನಾವು ಅನೇಕ ಸ್ನೇಹಿತರನ್ನ ಕಳೆದುಕೊಂಡಿದ್ದೇವೆ. ನಮ್ಮನ್ನ ನಾವು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು. ಲಾಕ್‌ಡೌನ್ ದಿನಗಳು ನಮ್ಮ ಜೀವಮಾನದಲ್ಲಿ ಎಂದಿಗೂ ಬಾರದ ರೀತಿಯಲ್ಲಿ ನಾವು ಎಚ್ಚರಿಕೆ ಕ್ರಮಗಳನ್ನ ತೆಗದುಕೊಂಡು ನಮ್ಮ ಜೀವವನ್ನು ಉಳಿಸಿಕೊಳ್ಳಬೇಕೆಂದರು.

ಕೋಲಾರ ಜಿಲ್ಲೆಯಲ್ಲಿ ಸುಮಾರು ೧೫ ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಪ್ರತಿಯೊಂದು ತಾಲೂಕಿನಲ್ಲಿ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು ಮುಂದೆ ಬಂದು ಬಡವರಿಗೆ ದಿನಸಿ ಕಿಟ್, ಔಷಧ ಕಿಟ್‌ಗಳನ್ನ ವಿತರಣೆ ಮಾಡುತ್ತಿದ್ದಾರೆ. ಆದರೆ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಜನಪ್ರತಿನಿಧಿಗಳು ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ, ಇಂತಹ ಸಂದರ್ಭದಲ್ಲಿ ವೈಯುಕ್ತಿಕವಾಗಿ ಸಿಎಂಆರ್ ಶ್ರೀನಾಥ್ ಮುಂದೆ ಬಂದು ತಮ್ಮ ಜೀವದ ಹಂಗನ್ನ ತೊರೆದು ಕೊರೋನಾ ಸೋಂಕಿತರ ಮನೆ ಬಾಗಲಿಗೆ ಹೋಗಿ ಮೆಡಿಸಿನ್ ಕಿಟ್ ವಿತರಣೆ ಮಾಡಿದರು. ಅಲ್ಲದೆ ಜೀವನದ ಬದುಕು ದುಸ್ತರವಾಗಿದ್ದ ಸಂದರ್ಭದಲ್ಲಿ ಬಡವರಿಗೆ, ದಿನಗೂಲಿ ನೌಕರರಿಗೆ ಆಹಾರ ಕಿಟ್‌ಗಳನ್ನ ವಿತರಣೆ ಮಾಡುತ್ತಿರುವುದನ್ನ ಪ್ರಶಂಸಿಸಿದರು.

ಕೊಲಾರ ಜಿಲ್ಲಾ ಗ್ರಂಥಾಲಯದ ಉಪ ನಿರ್ದೇಶಕರು ದಿವಾಕರ್ ಮಾತನಾಡಿ, ಕೊರೊನಾ ನಮಗೆ ಬದುಕಿನ ಪಾಠ ಹೇಳಿಕೊಟ್ಟಿದೆ. ಎಷ್ಟೋ ಮಂದಿ ಒಂದೊತ್ತಿನ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿಯನ್ನು ತಂದು ಕೊಟ್ಟಿದೆ. ಸಾಕಷ್ಟು ಮಂದಿ ಸಮಾಜ ಸೇವಕರು, ಶ್ರೀಮಂತರ ಇದ್ದರೂ ಕೂಡ ಕೆಲವರಿಗೆ ಸೇವೆ,ದಾನ ಧರ್ಮ ಮಾಡುವ ಗುಣ ಇರೋದಿಲ್ಲ, ಇಂತಹ ಸಂದರ್ಭದಲ್ಲಿ ಸಿಎಂಆರ್ ಶ್ರೀನಾಥ್ ಅವರು ಬಡವರ ಪರವಾಗಿ ನಿಂತು ದಿನಸಿ- ಔಷಧ ಕಿಟ್‌ಗಳನ್ನ ಕೊಡುತ್ತಿರುವುದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದರು.

ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಛೇರ್ಮನ್ ಗೋಪಾಲಕೃಷ್ಣ ಮಾತನಾಡಿ, ಕೊರೊನಾ ಲಸಿಕೆಯನ್ನು ಪ್ರತಿಯೊಬ್ಬರು ಹಾಕಿಸಿಕೊಂಡು ಜೀವವನ್ನು ಉಳಿಸಿಕೊಳ್ಳಬೇಕು. ಈ ವಿಚಾರದಲ್ಲಿ ಯಾರು ನಿರ್ಲಕ್ಷ್ಯ ಮಾಡಬಾರದು ಎಂದರು.

ಇದೇ ಸಂದರ್ಭದಲ್ಲಿ ಕೋಲಾರ ತಾಲೂಕಿನ ೫೦ ಕ್ಕೂ ಹೆಚ್ಚು ಮಂದಿ ಗ್ರಂಥಾಲಯದ ಮೇಲ್ವಿಚಾರಕರಿಗೆ ದಿನಸಿ ಕಿಟ್‌ಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಕೆ.ಆರ್.ತ್ಯಾಗರಾಜು, ಕೋಲಾರ ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ ಚಂದ್ರಶೇಖರ್, ಎಲ್‌ಸಿಸಿ ಸುಧಾಕರ್, ನಗರಸಭೆ ಸದಸ್ಯ ರಫೀಕ್, ವಕೀಲ ಜೆ.ಸಿ.ಹನುಮಂತು, ಮೇಲ್ವಿಚಾರಕ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.

ಕೋಲಾರ ತಾಲೂಕು ಗ್ರಂಥಾಲಯ ಮೇಲ್ವಿಚಾರಕ ಸಂಘದ ಅಧ್ಯಕ್ಷೆ  ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು