ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ

info.reporterkarnataka@gmail.com

ಮಸ್ಕಿ ಉಪ ಚುನಾವಣೆ ಭಾರಿ ಜಿದ್ದಾಜಿದ್ದಿನಿಂದ ಮುಕ್ತಾಯಗೊಂಡಿದೆ. ಪ್ರಮುಖ ಪಕ್ಷಗಳು ಸಿಕ್ಕಾಪಟ್ಟೆ ರೊಕ್ಕ ಹುಡಿ ಮಾಡಿವೆ. ಇನ್ನೇನಿದ್ದರೂ ಎಲ್ಲರ ದೃಷ್ಟಿ ಫಲಿತಾಂಶದತ್ತ. ಯಾರು ಗೆಲ್ಲಬಹುದು?  ಯಾರು ಸೋಲ ಬಹುದು ಎಂಬ ಜಿಜ್ಞಾಸೆ ಇಡೀ ರಾಜ್ಯದಲ್ಲಿ ಶುರುವಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳೇ ಈ ಬಾರಿಯೂ ಉಪ ಚುನಾವಣೆಯಲ್ಲಿ ತೊಡೆ ತಟ್ಟಿದ್ದಾರೆ. ಆದರೆ ಆ ಇಬ್ಬರು ಅಭ್ಯರ್ಥಿಗಳು ಪಕ್ಷ ಬದಲಾಯಿಸಿಕೊಂಡಿದ್ದಾರೆ. ಪ್ರತಾಪ್ ಗೌಡ ಅವರು ಕಳೆದ ಬಾರಿ ಕಾಂಗ್ರೆಸ್ ನಿಂದ ಗೆದ್ದು ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಹಾಗೆಯೇ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಮೂರಂಕಿ ಮತಗಳಿಂದ ಸೋತ ಬಸವನ ಗೌಡ ಅವರು ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದಾರೆ. ಒಂದು ಮಾಹಿತಿ ಪ್ರಕಾರ ಕಾಂಗ್ರೆಸ್ ಅಭ್ಯರ್ಥಿ 10 ಕೋಟಿ ರೂ. ಖರ್ಚು ಮಾಡಿದ್ದಾರೆ. ಹಾಗೆ ಬಿಜೆಪಿ ಅಭ್ಯರ್ಥಿ ಬರೋಬ್ಬರಿ 85 ಕೋಟಿ ರೂ. ಖರ್ಚು ಮಾಡಿದ್ದಾರೆ. ಚುನಾವಣೆ ಭಾರಿ ಜೋರಿನಲ್ಲೇ ನಡೆದಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಮಸ್ಕಿಯಲ್ಲೇ ಟೆಂಟ್ ಹಾಕಿದ್ದರು. ಮುಖ್ಯಮಂತ್ರಿ ಕೂಡ ಮೂರು ನಾಲ್ಕು ಭಾರಿ ಬಂದು ಹೋಗಿದ್ದಾರೆ. ಡಜನ್ ಗಟ್ಟಲೆ ಸಚಿವರು ಪ್ರಚಾರದಲ್ಲಿ ಭಾಗಿಯಾಗಿದ್ದರು. ಒಬ್ಬ ಸಚಿವ ಬರುವಾಗ 50- 60 ಕಾರುಗಳು ಮಸ್ಕಿಯಲ್ಲಿ ಧೂಳು ಎಬ್ಬಿಸುತ್ತಿದ್ದವು. ಬಿಜೆಪಿ ಮೇಲೆ ರೊಕ್ಕ ಹಂಚಿದ ಆರೋಪವೂ ಇದೆ. ಚುನಾವಣಾ ಆಯೋಗಕ್ಕೂ ದೂರು ಹೋಗಿದೆ. ಹಾಗೆ ಕಾಂಗ್ರೆಸ್ ನಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಲವು ಸುತ್ತಿನ ಪ್ರಚಾರ ಹಾಗೂ ರೋಡ್ ಶೋ ನಡೆಸಿದ್ದಾರೆ. ಇಲ್ಲೂ ಕೂಡ ಡಜನ್ ಗಟ್ಟಲೆ ಮಾಜಿ ಸಚಿವರು ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗೆ ಮತದಾರರೇ ದೇಣಿಗೆ ಸಂಗ್ರಹಿಸಿ ಕೊಟ್ಟಿದ್ದಾರೆ. ಇದೀಗ ಫಲಿತಾಂಶ ಮಾತ್ರ ಹೊರ ಬರಲು ಬಾಕಿ ಇದೆ. ಯಾವುದಕ್ಕೂ ಕಾದು ನೋಡಬೇಕು.

Leave a Reply

Your email address will not be published. Required fields are marked *