ಇತ್ತೀಚಿನ ಸುದ್ದಿ
1 ಕೋಟಿ ವೆಚ್ಚದಲ್ಲಿ ಪುನರ್ ನವೀಕರಣಗೊಂಡ ಚಿತ್ರಾಪುರ ದೇಗುಲ ಸರೋವರ ಉದ್ಘಾಟನೆ: ಶಾಸಕ ಡಾ. ಭರತ್ ಶೆಟ್ಟಿ ಚಾಲನೆ
27/01/2024, 22:58
ಚಿತ್ರಾಪುರ(reporterkarnataka.com): ಭವಿಷ್ಯದಲ್ಲಿ ಭಾರೀ ನೀರಿನ ಕ್ಷಾಮ ತಲೆದೋರದಂತೆ ಮಾಡಲು ಕೆರೆ, ಸರೋವರಗಳು ಜಲಸಂರಕ್ಷಣೆಗೆ ಪೂರಕವಾಗಿದ್ದು, ಇದರ ಜೀರ್ಣೋದ್ಧಾರ, ನವೀಕರಣ ಕಾರ್ಯಕ್ಕೆ ಆದ್ಯತೆ ನೀಡುವುದು ಅಗತ್ಯವಾಗಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ. ಹೇಳಿದರು.
ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸರೋವರವನ್ನು 1 ಕೋಟಿ ರೂ. ವೆಚ್ಚದಲ್ಲಿ ಪುನರ್ ನವೀಕರಣಗೊಳಿಸ ಲಾಗಿದ್ದು, ಇದರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಬಿಜೆಪಿ ಸರಕಾರ ಅಂತರ್ಜಲ ಸಂರಕ್ಷಣೆಗೆ ಒತ್ತು ನೀಡಿ ಕೆಲಸ ಮಾಡಿತ್ತು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿರುವ ಆರ್ಥಿಕ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಂಡು ಕೊಟ್ಯಂತರ ವೆಚ್ಚದಲ್ಲಿ ಹಲವು ಕೆರೆಗಳು ಇಂದು ಕಂಗೊಳಿಸುತ್ತಿವೆ. ಕೇವಲ ಲೇ ಔಟ್ ಮಾಡುವ ಕೆಲಸದಿಂದ ಪರಿಸರ ಸಹ್ಯ ಕೆಲಸಕ್ಕೂ ಮುಡಾವನ್ನು ಬಳಸಿಕೊಳ್ಳಲಾಗಿದೆ ಎಂದರು.
ಇದೇ ಸಂದರ್ಭ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ನಡೆದಿರು ವುದು ಕೋಟ್ಯಂತರ ರಾಮಭಕ್ತರ ಜೀವನವನ್ನು ಸಾರ್ಥಕ್ಯಗೊಳಿಸಿದೆ. ಭವಿಷ್ಯದಲ್ಲಿ ಪ್ರತಿಷ್ಠಾಪನೆಯ ದಿನ ಹಿಂದೂ ಸಮಾಜೋದ್ಧಾರಕ್ಕೆ ನಾವೆಲ್ಲಾ ಸಂಕಲ್ಪ ತೊಡಬೇಕಿದೆ ಎಂದರು.
ಕ್ಷೇತ್ರದ ಅನುವಂಶೀಯ ಆಡಳಿತ ಮೊತ್ತೇಸರರಾದ ಶ್ರೀ ವಿದ್ಯೆಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿಸರೋವರ ಸುಂದರವಾಗಿ ಮೂಡುವಲ್ಲಿಶಾಸಕರು ಅನು ದಾನ ಬಿಡುಗಡೆ ಮಾಡಿದ್ದಾರೆ.ಉತ್ತ ಮವಾಗಿ ಸ್ಪಂದಿಸಿದ್ದಾರೆ. ಇಂತಹ ಸತ್ಕಾರ್ಯ ಗಳಿಂದ ಸಮಾಜಕ್ಕೆ ಪ್ರಯೋಜನವಾಗುದರ ಜತೆಗೆ ಸದಾ ನೆನಪಿನಾಳದಲ್ಲಿ ಉಳಿಯುವ ಉತ್ತಮ ಕೆಲಸವಾಗಿದೆ ಎಂದು ಅವರು ನುಡಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲ ಉಮೇಶ್ ಟಿ. ಕರ್ಕೇರ,
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮನಪಾ ಸದಸ್ಯರಾದ ವೇದಾವತಿ, ಸುಮಿತ್ರ ಕರಿಯಾ, ಮುಡಾ ಆಯುಕ್ತ ಮನ್ಸೂರ್ ಆಲಿಖಾನ್, ಎಂಜಿನಿಯರ್ ಆರತಿ ಶೇಟ್ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೇಶವ ಸಾಲ್ಯಾನ್, ಕಲ್ಬಾವಿ ರಮೇಶ್ ರಾವ್, ಕನ್ಸಲೆಂಟ್ ಕೆ.ಪ್ರಕಾಶ್, ಅರ್ಚಕರಾದ ಕಾರ್ತಿಕ್ ಭಟ್, ಕೃಷ್ಣ ಶೆಟ್ಟಿ ಗುತ್ತಿಗೆದಾರ ಗೋಪಾಲ್ ಶೆಟ್ಟಿ, ಜೀರ್ಣೋದ್ದಾರ ಸಮಿತಿ ಪ್ರಮುಖರಾದ ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು ಹರೀಶ್ ಶೆಟ್ಟಿ ದೇವೀಪ್ರಸಾದ್ ಶೆಟ್ಟಿ ಸುರೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು.