5:29 PM Tuesday25 - March 2025
ಬ್ರೇಕಿಂಗ್ ನ್ಯೂಸ್
Constitution | ಕಾಂಗ್ರೆಸ್ ದೇಶದ್ರೋಹಿಗಳ ಪಕ್ಷ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ… Delhi | ಸಂವಿಧಾನ ವಿರೋಧಿ ರಾಜ್ಯ ಸರಕಾರ ರಾಜೀನಾಮೆ ನೀಡಲಿ: ಮಾಜಿ ಸಿಎಂ… Honey Trap | ಬಿಜೆಪಿ ಬಳಿ ಸಿಡಿ‌ ಫ್ಯಾಕ್ಟರಿಯೇ ಇದೆ; ಅವರ ಕಾಲದಲ್ಲಿ… Speaker | ಅಶಿಸ್ತು, ಅಗೌರವ ತೋರಿಸಿದರೆ ಮುಂದಿನ ಅಧಿವೇಶನದಲ್ಲೂ ಸಸ್ಪೆಂಡ್ ಮಾಡುವೆ: ಸ್ಪೀಕರ್… ಚಿಕ್ಕಮಗಳೂರು: ಸಿಡಿಲು ಬಡಿದು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೃದ್ದ ಮಹಿಳೆ ಸಾವು IndiGo6E | ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಮತ್ತೊಂದು ವಿಮಾನ ಸೇವೆ: ಕೇಂದ್ರ ಸಚಿವ ಪ್ರಹ್ಲಾದ್… FIR Against Madhwaraj | ಮಹಿಳೆಯ ಕಟ್ಟಿ ಹಾಕಿ ಹಲ್ಲೆ ಪ್ರಕರಣದ ಸಮರ್ಥನೆ?:… Ugadi | ರಾಜಭವನದದಲ್ಲಿ ಚಿಗುರಿದ ‘ಚಂದನ’ದ ‘ಚೈತ್ರಾಂಜಲಿ’: ಗಾಜಿನ ಮನೆಯಲ್ಲಿ ಮೂಡಿ ಬಂತು… Karnataka Bundh | ಪ್ರತಿಷ್ಠೆಗಾಗಿ ಅನಾವಶ್ಯಕ ಬಂದ್ ಕರೆ ಕೊಡಬಾರದು: ಮಾಜಿ ಗೃಹ… 23.24 ಕೋಟಿ ಮೌಲ್ಯದ ಅಕ್ರಮ ಒತ್ತುವರಿ ತೆರವು: ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್

ಇತ್ತೀಚಿನ ಸುದ್ದಿ

18 ವರ್ಷದ ಯುವಕನ ಆತ್ಮಹತ್ಯೆ: ಅಪಘಾತದಲ್ಲಿ 17 ಹಲ್ಲುಗಳನ್ನು ಕಳೆದುಕೊಂಡ ನೋವುಗೆ ಬಲಿಯಾದ ವಿಘ್ನೇಶ್

23/03/2025, 11:15

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಭುವನ ಕೋಟೆ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. 18 ವರ್ಷದ ಯುವಕ ವಿಘ್ನೇಶ್ 4 ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ 17 ಹಲ್ಲುಗಳನ್ನು ಕಳೆದುಕೊಂಡು ತೀವ್ರ ಶಾರೀರಿಕ ಹಾಗೂ ಮಾನಸಿಕ ನೋವು ಅನುಭವಿಸುತ್ತಿದ್ದ. ಈ ನೋವಿನಿಂದ ಮನನೊಂದು, ಆತ ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಘ್ನೇಶ್ ಕೊಪ್ಪದಲ್ಲಿರುವ ಐಟಿಐ ಸಂಸ್ಥೆಯಲ್ಲಿ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದ. ದೈಹಿಕ ಹಾಗೂ ಮಾನಸಿಕ ಪೀಡನೆ ಎದುರಿಸುತ್ತಿದ್ದ ಈ ಯುವಕ, ಯಾವಾಗಲೂ ಆಸ್ಪತ್ರೆಗೆ ಹೋಗಿ ಬರಬೇಕಾಗುತ್ತಿತ್ತು. ನಿರಂತರ ಚಿಕಿತ್ಸೆ ಮತ್ತು ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆಗಳ ನಡುವೆ ಆತ ಮಾನಸಿಕವಾಗಿ ಜರ್ಜರಿತನಾಗಿದ್ದ. ಸ್ಥಳಕ್ಕೆ ಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು