ಇತ್ತೀಚಿನ ಸುದ್ದಿ
18ನೇ ಲೋಕಸಭೆ ಪ್ರಥಮ ವಿಶೇಷ ಅಧಿವೇಶನ ಆರಂಭ: ಹಂಗಾಮಿ ಸ್ಪೀಕರ್ ಆಯ್ಕೆ; ನೂತನ ಸಂಸದರಿಂದ ಪ್ರತಿಜ್ಞೆ ವಿಧಿ
24/06/2024, 11:56
ನವದೆಹಲಿ(reporterkarnataka.com): 18ನೇ ಲೋಕಸಭೆಯ ಪ್ರಥಮ ವಿಶೇಷ ಅಧಿವೇಶನ ಇಂದಿನಿಂದ (ಜೂ 24) ಆರಂಭಗೊಂಡಿದ್ದು, ಜುಲೈ 3ರವರೆಗೆ ನಡೆಯಲಿದೆ.
ಬಿಜೆಪಿಗೆ ಸ್ಪಷ್ಟ ಬಹುಮತ ಬಾರದ ಹಿನ್ನೆಲೆಯಲ್ಲಿ ರೂಪುಗೊಂಡ ಎನ್ ಡಿಎ ಮೈತ್ರಿಕೂಟದ ಮೊದಲ ಅಧಿವೇಶನ ಇದಾಗಿದೆ. ಸದನದ ನಾಯಕ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷದ ನಾಯಕರು ಸೇರಿದಂತೆ ನೂತನವಾಗಿ ಆಯ್ಕೆಯಾದ ಸಂಸತ್ ಸದಸ್ಯರಿಂದ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ. ಇದೇ ಸಂದರ್ಭದಲ್ಲಿ ಲೋಕಸಭೆಯ
ನೂತನ ಸ್ಪೀಕರ್ ಆಯ್ಕೆಗಾಗಿ ಚುನಾವಣೆ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ನೆರವೇರಲಿದೆ. ಬೆಳಗ್ಗೆ 11ಗಂಟೆಗೆ ಅಧಿವೇಶನ ಆರಂಭವಾಗಿದೆ. ಮೊದಲಿಗೆ ಪ್ರಧಾನಿ ಮೋದಿ, ಆ ಬಳಿಕ ಸಚಿವ ಸಂಪುಟದ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಂತರ ಅಸ್ಸಾಂನಿಂದ ಮೊದಲ್ಗೊಂಡು ಪಶ್ಚಿಮ ಬಂಗಾಳ ರಾಜ್ಯದ ಸದಸ್ಯರು ಕ್ರಮವಾಗಿ ಪ್ರಮಾಣ ವಚನ ಸ್ವೀಕರಿಸುವರು. 280 ಸದಸ್ಯರು ಸೋಮವಾರ ಹಾಗೂ 264 ಸದಸ್ಯರು ಮಂಗಳವಾರ ಪ್ರಮಾಣ ಸ್ವೀಕರಿಸಲಿದ್ದಾರೆ.
ಜೂ. 26ರಂದು ಲೋಕಸಭೆ ಸ್ಪೀಕರ್ ಆಯ್ಕೆ ಚುನಾವಣೆ ಹಾಗೂ ಜೂ.27 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.