ಇತ್ತೀಚಿನ ಸುದ್ದಿ
12 ಕೋಟಿ ವೆಚ್ಚದಲ್ಲಿ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇಗುಲ ಜೀರ್ಣೋದ್ಧಾರಕ್ಕೆ ಚಾಲನೆ
29/11/2022, 20:05

ಸುರತ್ಕಲ್(reporterkarnataka.com):
ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವು ಸಮಗ್ರವಾಗಿ 12 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದ್ದು,ಚಿತ್ರಾಪುರ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು ಮುಂದಾಳತ್ವದಲ್ಲಿ ಹಾಗೂ ಕುಡುಪು ಕೃಷ್ಣರಾಜ ತಂತ್ರಿಯವರ ಪೌರೋಹಿತ್ಯದಲ್ಲಿ,ಸಮಿತಿ ಗೌರವಾಧ್ಯಕ್ಷ ಡಾ.ಭರತ್ ಶೆಟ್ಟಿವೈ ಉಪಸ್ಥಿತಿಯಲ್ಲಿ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಶುಭಾರಂಭ ಒದಗಿಸಲಾಯಿತು.
ಜೀರ್ಣೋದ್ಧಾರ ಸಮಿತಿ ಸಂಚಾಲಕರಾಗಿರುವ ಉಮೇಶ್ ಟಿ.ಕರ್ಕೇರ ಹಾಗೂ ಕುಟುಂಬಸ್ಥರು ಅಂದಾಜು 16 ಲಕ್ಷ ರೂ.ವೆಚ್ಚದಲ್ಲಿ ಸಮರ್ಪಿಸಿದ ನೂತನ ಧ್ವಜಸ್ಥಂಭದ ಪ್ರತಿಷ್ಠೆ ಧಾರ್ಮಿಕ ವಿಧಿ ವಿಧಾನದಂತೆ ಮುಂಜಾನೆ ಪ್ರತಿಷ್ಟಾಪನೆ ನಡೆಯಿತು.
ಬಳಿಕ ಮಂಜಣ್ಣ ಬ್ರಿಗೆಡ್ ಇದರ ಸಹಕಾರದಲ್ಲಿ ನೂತನ ನಾಗಬನ ನಿರ್ಮಾಣಕ್ಕೆ ಅಡಿಗಲ್ಲು ಉದ್ಯಮಿ ಹಾಗೂ ಜೀರ್ಣೋದ್ದಾರ ಸಮಿತಿಯ ಕೃಷ್ಣ ಶೆಟ್ಟಿ ಅವರು ಹೆದ್ದಾರಿ ಬದಿ ಅ೦ದಾಜು 25 ಲಕ್ಷರೂ.ವೆಚ್ಚದಲ್ಲಿ ನಾಲ್ಕು ಕಂಬಗಳ ಸ್ವಾಗತ ಗೋಪುರ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಯಿತು.
ಶಾಸಕ ಡಾ.ಭರತ್ ಶೆಟ್ಟಿ ವೈ ಮಾತನಾಡಿ, ಭಾರತವು ಆಧ್ಯಾತ್ಮದ ಕೇಂದ್ರ ಬಿಂದುವಾಗಿದೆ. ಶಾಂತಿ ನೆಮ್ಮದಿಗಾಗಿ ವಿದೇಶದ ಜನತೆ ಇಂದು ನಮ್ಮ ಐತಿಹಾಸಿಕ ದೇವಸ್ಥಾನಗಳಿಗೆ ಭೇಟಿ ನೀಡಿ ಸಂಸ್ಕೃತಿ,ಆಚಾರ ವಿಚಾರ, ಯೋಗ,ಪ್ರಾಣಯಾಮ,ಒಂಕಾರದಂತಹ ಮಂತ್ರಗಳ ಶಕ್ತಿಯನ್ನು ತಿಳಿದು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಭವಿಷ್ಯದಲ್ಲಿ ಚಿತ್ರಾಪುರ ಕ್ಷೇತ್ರ ಜಗತ್ತಿನ ಗಮನ ಸೆಳೆಯಲಿದೆ. ಅಂತಹ ಅಭಿವೃದ್ಧಿ ಇಲ್ಲಿ ನಡೆಯುತ್ತಿದೆ ಎಂದು ನುಡಿದರು.
ಈ ಸಂದರ್ಭ ಆಶೀರ್ವಚನ ನೀಡಿದ ಚಿತ್ರಾಪುರ ಶ್ರೀಗಳು ಆರಾಧ್ಯ ದೇವರಾದ ಶ್ರೀ ದುರ್ಗಾಪರಮೇಶ್ವರೀ ಮತ್ತು
ಪರಿವಾರ ಶಕ್ತಿಗಳ ಕ್ಷೇತ್ರವು ಇಂದು ತಾಯಿಯ ಆಶೀರ್ವಾದದಲ್ಲಿ ಬೆಳಗುವಂತಾಗಿದೆ.ಐತಿಹಾಸಿಕ ಸಾನಿಧ್ಯ
ಏಳಿಗೆಯಾದರೆ ಗ್ರಾಮ, ಊರು ದೇಶಕ್ಕೆ ಒಳಿತಾಗುತ್ತದೆ.ಈ ಜೀರ್ಣೋದ್ದಾರದಲ್ಲಿ ಭಾಗಿಯಾದವರಿಗೆ ದೇವರು ಕೈ
ಹಿಡಿದು ಕಾಪಾಡುತ್ತಾಳೆ ಎಂಬ ನಂಬಿಕೆಗೆ ಪುಷ್ಠಿ ನೀಡುವಂತೆ ಹಲವಾರು ಪವಾಡಗಳು ನಡೆದಿರುವುದು ತಿಳಿದ ವಿಚಾರವಾಗಿದೆ. ಮುಂದೆಯೂ ಕ್ಷೇತ್ರದ ಒಳಿತಿಗೆ ಸಹಕರಿಸುವ ಸರ್ವರಿಗೂ ದೇವಿಯು ಹರಸಲಿ ಎಂದು ನುಡಿದರು.
ಸಮಿತಿ ಸಂಚಾಲಕರಾದ ಉಮೇಶ್ ಟಿ.ಕರ್ಕೇರ ಹಾಗೂ ಅಧ್ಯಕ್ಷರಾದ ಕೇಶವ ಸಾಲ್ಯಾನ್ ಬೈಕಂಪಾಡಿ ಅವರು ಭಕ್ತರ, ದಾನಿಗಳ ಕೊಡುಗೆಗಳು ಇನ್ನಷ್ಟು ಕ್ಷೇತ್ರಕ್ಕೆ ದೊರೆಯಬೇಕಿದೆ. ಚಿನ್ನದ ಕಲಶ ಸಮರ್ಪಣೆ, ದೇವಸ್ಥಾನದ ಕುಳಿಗೆಯ ಜತೆ ಜತೆಗೆ ಇತರ ಸಾಮಾಜಿಕವಾಗಿ ನೆರವಾಗುವ ಸಭಾ ಭವನ ನಿರ್ಮಾಣ, ಪುಷ್ಕರಣಿ ಅಭಿವೃದ್ಧಿ ಮತ್ತಿತರ ಯೋಜನೆಗಳಿವೆ. ಎಲ್ಲರ ಸಹಕಾರ ನೀಡುವಂತಾಗಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಸಂದರ್ಭ ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿಗಳು, ಕೋಶಾಧಿಕಾರಿಗಳು,ಪದಾಧಿಕಾರಿಗಳು, ಸಮಿತಿ ಸದಸ್ಯರು, ಸ್ಥಳೀಯ ಮೊಗವೀರ ಮಹಾಸಭಾದ ಪದಾಧಿಕಾರಿಗಳು,ಊರಿನ ಗ್ರಾಮಸ್ಥರು ಭಕ್ತಾಧಿಗಳು ಉಪಸ್ಥಿತರಿದ್ದರು.