ಇತ್ತೀಚಿನ ಸುದ್ದಿ
ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿಗೆ ಎನ್ಎಂಪಿಎನಿಂದ 11 ಕೋಟಿ ಅನುದಾನ
13/04/2026, 22:20
ಸುರತ್ಕಲ್ (reporterkarnataka.com): ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕಿಸುವ ಹೆದ್ದಾರಿ ಬದಿಯ ರಸ್ತೆಯ ಕಾಂಕ್ರೀಟ್ ಕಾಮಗಾರಿ ಹಾಗೂ ಟ್ರಕ್ ಯಾರ್ಡ್ ಗುರುವಾರದಿಂದ ಆರಂಭವಾಗಲಿದ್ದು, 11 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣ ವಾಗಲಿದೆ. ಎನ್ ಎಂಪಿಎ ಇದಕ್ಕೆ ಅನುದಾನ ನೀಡಲಿದೆ.
ಶಾಸಕ ಡಾ. ಭರತ್ ಶೆಟ್ಟಿ ಅವರು ಎನ್ ಎಂಪಿಎಗೆ ಮನವಿ ಮಾಡಿದ ಮೇರೆಗೆ ಬಂದರು ಅನುದಾನ ಬಿಡುಗಡೆ ಮಾಡಿದೆ.
ಈ ಕುರಿತು ಸೋಮವಾರ ಶಾಸಕರ ನೇತೃ ತ್ವದಲ್ಲಿ ಸಭೆ ನಡೆಯಿತು.



ಕೆಐಎಡಿಬಿ ಇಲಾಖೆ, ಟ್ರಾಫಿಕ್ ಪೊಲೀಸ್ ಹಾಗೂ ಬಂದರು ಪ್ರಾಧಿಕಾರದ ಅಧಿಕಾರಿಗಳ ಮಹತ್ವದ ಸಭೆ ನಡೆದು
ಸಭೆಯಲ್ಲಿ ಕಾಮಗಾರಿ ಅವಧಿ, ಸಂಚಾರ ನಿಯಂತ್ರಣ ಹಾಗೂ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಕಾಮಗಾರಿ ಚರ್ಚೆ ನಡೆಸಲಾಯಿತು.
ಕಾಮಗಾರಿ ಸುಗಮವಾಗಿ ನಡೆಯುವ ಉದ್ದೇಶದಿಂದ ಸಂಬಂಧಿತ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲು ಪೊಲೀಸರು ಆದೇಶ ಹೊರಡಿಸಲಿದ್ದು ಗುರುವಾರದಿಂದ ಪರ್ಯಾಯ ಸಂಚಾರ ಅವಕಾಶ ಮಾಡಿ ಕೊಡಲಾಗುವುದು.ವಿಶೇಷವಾಗಿ ಭಾರೀ ವಾಹನಗಳ ಓಡಾಟ ಹೆಚ್ಚಿರುವ ಈ ಪ್ರದೇಶದಲ್ಲಿ ಸಂಚಾರ ನಿಯಂತ್ರಣ ಕ್ರಮಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಬೈಕಂಪಾಡಿ ಕೈಗಾರಿಕಾ ಪ್ರದೇಶವು ಪ್ರಮುಖ ಉದ್ಯಮ ವಲಯವಾಗಿರುವುದರಿಂದ, ದೀರ್ಘಕಾಲದಿಂದ ರಸ್ತೆ ದುರಸ್ತಿ ಹಾಗೂ ಕಾಂಕ್ರೀಟ್ ನಿರ್ಮಾಣದ ಬೇಡಿಕೆ ಕೇಳಿಬರುತ್ತಿತ್ತು. ಈಗ ಕಾಮಗಾರಿ ಆರಂಭವಾಗುತ್ತಿರುವುದರಿಂದ ಸ್ಥಳೀಯ ಉದ್ಯಮಿಗಳು, ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇನ್ನು ಎರಡು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಿತ ಅಧಿಕಾರಿಗಳಿಗೆ ಶಾಸಕ ಡಾ. ಭರತ್ ಶೆಟ್ಟಿ ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಬಂದರು ಪ್ರಾಧಿಕಾರ, ಟ್ರಾಫಿಕ್, ಕೆಐಎಡಿಬಿ ಅಧಿಕಾರಿಗಳು ಉಪಸ್ಥಿತರಿದ್ದರು.












