ಇತ್ತೀಚಿನ ಸುದ್ದಿ
10, 20 ರೂ. ಕೊಟ್ರೆ ಮುಟ್ಟೋಲ್ಲ, 100, 200ರೇ ಕೊಡ್ಬೇಕು!: ಚಿಕ್ಕಮಗಳೂರಿನಲ್ಲಿ ರಾಜಸ್ತಾನಿ ಯುವತಿಯರಿಂದ ವಸೂಲಿ ದಂಧೆ!!
24/05/2023, 20:36

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕುಂತಕ್ಕೆ ನಿಂತಕ್ಕೆ ಚಂದಾ ವಸೂಲಿ ಮಾಡುವುದು ಈಗ ಸಾಮಾನ್ಯವಾಗಿ ಹೋಗಿದೆ. ಇದೀಗ ಕಾಫಿನಾಡು ಚಿಕ್ಕಮಗಳೂರಿನಲ್ಲಿ ರಾಜಸ್ತಾನದ ಯುವತಿಯರ ತಂಡವೊಂದು ಹಣ ವಸೂಲಿಯಲ್ಲಿ ತೊಡಗಿದೆ.
ಸ್ಟ್ರೈಲಾಗಿ ಡ್ರೆಸ್ ಮಾಡ್ಕೊಂಡು ಬಂದು ಲೇಡಿಸ್ ಗ್ಯಾಂಗ್ ವೊಂದು ಹಣ ವಸೂಲಿ ಮಾಡುತ್ತಿದೆ. ಇವರಿಗೆ 10, 20 ರೂಪಾಯಿ ಕೊಟ್ರೆ ಮುಟ್ಟಲ್ಲ, 100, 200 ರೂಪಾಯಿಯನ್ನೇ ಕೊಡ್ಬೇಕು.ಚಿಕ್ಕಮಗಳೂರು ನಗರದ ಮನೆ ಮನೆಗಳಿಗೆ,
ಅಂಗಡಿಗಳಿಗೆ ತೆರಳಿ ಯುವತಿಯರು ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಪ್ರಕೃತಿ ವಿಕೋಪದಿಂದ ಮನೆ-ಆಸ್ತಿ ಕಳೆದುಕೊಂಡಿದ್ದೇವೆಂದು ಅನುಕಂಪ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಮನೆ ಬಿದ್ದು ಹೋಗಿದೆ, ಹಾಕೋಕೆ ಬಟ್ಟೆ ಇಲ್ಲ ಎಂದು ಹಣಕ್ಕಾಗಿ ಡಿಮ್ಯಾಂಡ್ ಇಡುತ್ತಾರೆ.
ತಂಡದಲ್ಲಿ ಸುಮಾರು ಐವರು ಯುವತಿಯರಿದ್ದಾರೆ.
ಈ ಕುರಿತು ನಗರ ನಿವಾಸಿಯೊಬ್ಬರು ಪ್ರಶ್ನಿಸಿದಾಗ
ಯುವತಿಯರು ಆಟೋ ಹತ್ತಿ ಎಸ್ಕೇಪ್ ಆಗಿದ್ದಾರೆ.