ಇತ್ತೀಚಿನ ಸುದ್ದಿ
1000 ರೂ. ದಾಟಿದ ಅಡುಗೆ ಅನಿಲ ದರ: ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯೂ ಹೆಚ್ಚಳ
19/05/2022, 13:39
ಹೊಸದಿಲ್ಲಿ(reporterkarnataka.com): ದಿನ ಬಳಕೆಯ ಅಗತ್ಯ ವಸ್ತುಗಳ ಜತೆಗೆ ಅಡುಗೆ ಅನಿಲ ದರ ಸ್ಪರ್ಧೆಗೆ ನಿಂತಿದೆ. ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆ ಮತ್ತೊಮ್ಮೆ ಏರಿಕೆಯಾಗಿದ್ದು, ಸಿಲಿಂಡರ್ ಬೆಲೆ 1,000 ರೂ. ದಾಟಿದೆ.
ಅಲ್ಲದೇ ವಾಣಿಜ್ಯ ಎಲ್‍ಪಿಜಿ ಗ್ಯಾಸ್ ದರವವನ್ನೂ ಸಹ ಏರಿಕೆ ಮಾಡಲಾಗಿದೆ. ಇಂದು (ಗುರುವಾರ)ದಿಂದಲೇ ಜಾರಿಗೆ ಬರುವಂತೆ 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಗಳ ಬೆಲೆಯನ್ನು 3 ರೂಪಾಯಿ 50 ಪೈಸೆ ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 8 ರೂ ನಷ್ಟು ಏರಿಸಲಾಗಿದೆ. ಇಂದಿನಿಂದ ಗೃಹಬಳಕೆಯ ಸಿಲಿಂಡರ್ ಬೆಲೆ 1003 ರೂಪಾಯಿ ಆಗಲಿದೆ. ಈ ಮೊದಲು 999.50 ರೂಪಾಯಿಗಳಾಗಿತ್ತು.
ಈ ಮೂಲಕ ಒಂದೇ ತಿಂಗಳ ಅವಧಿಯಲ್ಲಿ ಗೃಹಬಳಕೆಯ ಸಿಲಿಂಡರ್‌ಗಳ ಬೆಲೆ ಎರಡನೇ ಬಾರಿ ಏರಿಕೆ ಕಂಡಂತಾಗಿದೆ. ಈ ಹಿಂದೆ ಮೇ 8 ರಂದು ಗೃಹಬಳಕೆಯ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 50 ರೂಪಾಯಿಗಳಷ್ಟು ಬೆಲೆ ಹೆಚ್ಚಿಸಲಾಗಿತ್ತು. ಗೃಹಬಳಕೆಯ ಸಿಲಿಂಡರ್ ಜೊತೆಗೆ ವಾಣಿಜ್ಯ ಸಿಲಿಂಡರ್ ಬೆಲೆಯನ್ನೂ ಹೆಚ್ಚಳ ಮಾಡಲಾಗಿತ್ತು.