ಇತ್ತೀಚಿನ ಸುದ್ದಿ
ಗುತ್ತಿಗೆದಾರರಿಗೆ ಲೈಸನ್ಸ್ ನೀಡಲು 10 ಸಾವಿರ ಲಂಚ: ಡಿ ಗ್ರೂಪ್ ನೌಕರ ಲೋಕಾಯುಕ್ತ ಬಲೆಗೆ
18/02/2026, 20:08
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಗುತ್ತಿಗೆದಾರ ಪರವಾನಗಿ ನೀಡಲು ಲೋಕೋಪಯೋಗಿ ಇಲಾಖೆ ಕಚೇರಿ ನೌಕರನೊಬ್ಬ ಲಂಚ ಪಡೆಯುವ ವೇಳೆ ಲೋಕಾಯುಕ್ತ ದಾಳಿ ನಡೆಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಮಡಿಕೇರಿಯ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಕಚೇರಿಯಲ್ಲಿ ಡಿ ದರ್ಜೆ ನೌಕರ ಶರತ್ ಎಂಬಾತ ಕುಶಾಲನಗರ ಸಮೀಪ ಕೂಡು ಮಂಗಳೂರು ಬಸವತ್ತೂರು ಬಳಿ ತನ್ನ ಮನೆಯಲ್ಲಿ ಗುತ್ತಿಗೆದಾರರಿಗೆ ಲೈಸನ್ಸ್ ನೀಡಲು ರಾಘವೇಂದ್ರ ಎಂಬುವರಿಂದ 10 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾನೆ. ಗುತ್ತಿಗೆ ದಾರ ಲೈಸನ್ಸ್ ನೀಡಲು ತನಗೆ 10 ಸಾವಿರ ಹಾಗೂ ಕಚೇರಿಯಲ್ಲಿ 4 ಸಾವಿರ ಸೇರಿದಂತೆ ಒಟ್ಟು 14 ಸಾವಿರ ರೂ ಗಳಿಗೆ ಬೇಡಿಕೆ ಇಟ್ಟಿದ್ದ, ಅದ್ರಂತೆ ದೂರುದಾರ ರಾಘವೇಂದ್ರ ಲೋಕಾಯುಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಲೋಕಾಯುಕ್ತ ಎಸ್ಪಿ ಉದ್ದೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಭ್ರಷ್ಟ ಅಧಿಕಾರಿಯನ್ನು ಕೆಡವಿದ್ದಾರೆ.













