10:33 PM Monday1 - March 2021
ಬ್ರೇಕಿಂಗ್ ನ್ಯೂಸ್
ಬಿಜೆಪಿ ಯುವ ಮೋರ್ಚಾ ನರಗುಂದ ಮಂಡಲ ವತಿಯಿಂದ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ರಮ ಜಾತಿ, ಮತ, ಕಟ್ಟುಪಾಡುಗಳನ್ನು ಮೀರಿ ಜನಪದ ಜನಮಾನಸದಲ್ಲಿ ನೆಲೆಗೊಂಡಿದೆ: ಎಡನೀರು ಮಠಾಧೀಶರು ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಸಚಿವ ಅಂಗಾರ ತವರಿನಲ್ಲಿ ಭಿನ್ನಮತ ಸ್ಫೋಟ: 3 ಮಂದಿ ಹಿರಿಯ ನಾಯಕರು ಬಿಜೆಪಿಯಿಂದ… ಅಥಣಿ ತಾಲೂಕಿನ ರಡೇರಹಟ್ಟಿ ಗ್ರಾಮದಲ್ಲಿ  ಆಕಸ್ಮಿಕವಾಗಿ ಬೆಂಕಿ ತಗುಲಿ ಗುಡಿಸಲು ಭಸ್ಮ: 4… ಒಂದೂವರೆ ತಿಂಗಳ ಅವಧಿಯಲ್ಲಿ 10 ಬಾರಿ ಇಂಧನ ದರ ಏರಿಕೆ: ಕೆಪಿಸಿಸಿ ಅಧ್ಯಕ್ಷ… ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆ: ಮಿನಿ ವಿಧಾನ ಸೌಧದ ಎದುರು ಎಬಿವಿಪಿ ಪ್ರತಿಭಟನೆ;… ಮಂಗಳೂರು ಮಹಾನಗರಪಾಲಿಕೆ  2020-21ನೇ  ಸಾಲಿನ ತೆರಿಗೆ ಪೂರ್ತಿ ಪಾವತಿಸಿದರೆ ಶೇ. 5% ವಿನಾಯಿತಿ ಮಹಿಳಾ ಸಿಬ್ಬಂದಿಗೆ ಮಾನಸಿಕ ಕಿರುಕುಳ ಪ್ರಕರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ

ಇತ್ತೀಚಿನ ಸುದ್ದಿ

ನವರಾತ್ರಿ ಪಿಲಿನಲಿಕೆಗೆ ಕೊನೆಗೂ ಒಪ್ಪಿಗೆ: ಷರತ್ತು ಮಾತ್ರ ಅನ್ವಯ !!

October 13, 2020, 9:46 PM

ಮಂಗಳೂರು(reporterkarnatakanews): ನವರಾತ್ರಿ ಉತ್ಸವದ ವೇಳೆ ಸಾಂಪ್ರದಾಯಿಕ ಹುಲಿ ವೇಷಕ್ಕೆ ಕೊನೆಗೂ ಒಪ್ಪಿಗೆ ದೊರೆತಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಧಾರ್ಮಿಕ ಪರಿಷತ್ ಸಭೆಯಲ್ಲಿ ಗ್ರೀನ್ ಸಿಗ್ನಲ್ ನೀಡಲಾಯಿತು.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ಮುನ್ನ ನಡೆದ ಧಾರ್ಮಿಕ ಪರಿಷತ್ ಸಭೆಯಲ್ಲಿ ಹುಲಿ ವೇಷಕ್ಕೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿತ್ತು. ಆದರೆ ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಕೆಲವು ಮಾರ್ಗದರ್ಶಿ ಸೂತ್ರದ ಪ್ರಕಾರ ಒಪ್ಪಿಗೆ ನೀಡಲಾಗಿದೆ.

ಮುಂಬರುವ ದಸರಾ ಹಬ್ಬದಲ್ಲಿ ದೇವಸ್ಥಾನದ ಆವರಣದಲ್ಲಿ ಮಾತ್ರ  ಭಕ್ತಿಯಿಂದ ಗರಿಷ್ಠ 10 ಹುಲಿ ವೇಷಧಾರಿಗಳು ನಿಗದಿತ ಕಾಲಮಿತಿಯೊಳಗೆ ಹರಕೆ ಅರ್ಪಿಸಲು ಮಾತ್ರ ಷರತ್ತು ಬದ್ಧ ಅನುಮತಿ ನೀಡಲಾಗಿದೆ. ಈ ರೀತಿ ಹರಕೆಯನ್ನು ಸಲ್ಲಿಸುವಾಗ ಎಲ್ಲರೂ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಸ್ಯಾನಿಟೈಸರ್ ಬಳಸುವಂತೆ ನೋಡಿಕೊಳ್ಳುವುದು ಸಂಬಂಧಪಟ್ಟ ದೇವಸ್ಥಾನದ ಆಡಳಿತ ಜವಾಬ್ದಾರಿಯಾಗಿರುತ್ತದೆ.

ಯಾವುದೇ ಮಾರ್ಗಸೂಚಿಗಳ ಉಲ್ಲಂಘನೆಯಾದಲ್ಲಿ ಮತ್ತು ಅಹಿತಕರ ಘಟನೆ ಸಂಭವಿಸಿದಲ್ಲಿ ಸಂಬಂಧಪಟ್ಟ ದೇವಳದ ಆಡಳಿತದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು. ಹುಲಿ ವೇಷಧಾರಿಗಳು ದೇವಸ್ಥಾನ ಹೊರಗೆ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಪ್ರದರ್ಶನ ನೀಡುವುದನ್ನು ನಿರ್ಬಂಧಿಸಲು ಸಭೆ ನಿರ್ಣಯಿಸಿತು. ಮತ್ತು ಸುಡುಮದ್ದು ಸಂಪೂರ್ಣವಾಗಿ ನಿಷೇಧಿಸಲು ನಿರ್ಣಯಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು