ಇತ್ತೀಚಿನ ಸುದ್ದಿ
ನಂಜನಗೂಡು: ದುಷ್ಕರ್ಮಿಗಳಿಂದ ಎರಡು ವರ್ಷದ ಮಗು ಅಪಹರಣ
October 2, 2020, 8:58 AM

ಮೈಸೂರು(reporterkarnataka news): ರಾಜ್ಯದ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಸಮೀಪ ಎರಡು ವರ್ಷದ ಮಗುವನ್ನು ದುಷ್ಕರ್ಮಿಯೊಬ್ಬ ಅಪಹರಿಸಿದ್ದಾನೆ. ಇದು ಆತಂಕ ಸೃಷ್ಟಿಸಿದೆ. ಪಾರ್ವತಿ ಎಂಬವರ ಮಗು ಕವಿತಾಳನ್ನು ದುಷ್ಕರ್ಮಿಯೊಬ್ಬ ಅಪಹರಿಸಿದ್ದಾನೆ. ಈ ಸಂಬಂಧ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳೆದ ವಾರ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಮಗುವೊಂದನ್ನು ಅಪಹರಿಸಲಾಗಿತ್ತು. ಬಳಿಕ ಮಗುವನ್ನು ಕೇರಳದ ತಿರುವನಂತಪುರದಲ್ಲಿ ಪತ್ತೆ ಹಚ್ಚಲಾಗಿತ್ತು.