ಇತ್ತೀಚಿನ ಸುದ್ದಿ
ಮುಖ್ಯಮಂತ್ರಿ ಉದ್ದವ್ ಠಾಕ್ರೆ ಜತೆ ಮುಂದುವರಿದ ಸಮರ: ನಟಿ ಕಂಗನಾ ರಾಜ್ಯಪಾಲರ ಭೇಟಿ
September 13, 2020, 1:53 PM

ಮುಂಬೈ(reporterkarnataka news): ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರಕಾರದ ವಿರುದ್ಧ ಸಮರ ಸಾರಿರುವರು ಬಾಲಿವುಡ್ ನಟಿ ಕಂಗನಾ ರಣಾವತ್ ಭಾನುವಾರ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಕಂಗನಾ ಜತೆ ಅವರ ಸಹೋದರಿ ರಂಗೋಲಿ ಕೂಡ ಉಪಸ್ಥಿತರಿದ್ದರು.
ನಂತರ ಸುದ್ದಿಗಾರರ ಜತೆ ಮಾತನಾಡಿದ ನಟಿ ಕಂಗನಾ ಅವರು ರಾಜ್ಯಪಾಲರು ತನ್ನನ್ನು ಮಗಳಂತೆ ನಡೆಸಿಕೊಂಡರು ಎಂದು ಹೇಳಿದರು.