8:14 AM Wednesday25 - November 2020
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ನ ತಂತ್ರಗಾರಿಕೆ ನಾಯಕ ಅಹಮ್ಮದ್ ಪಟೇಲ್ ಮಾರಕ ಕೊರೊನಾಕ್ಕೆ ಬಲಿ ನಿವಾರ್ ಚಂಡಮಾರುತ: ರಾಜ್ಯದ ಹಲವೆಡೆ ಇನ್ನೆರಡು ದಿನ ಭಾರೀ ಮಳೆ ನಿರೀಕ್ಷೆ, ಯಲ್ಲೋ… ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಬಯಲು: ಬೆಂಗಳೂರಿನಲ್ಲಿ ಬೃಹತ್  ಪ್ರಮಾಣದ ಮಾದಕ ದ್ರವ್ಯ ವಶ ಒಂದೇ ದಿನ ಮಾರಕ ಕೊರೊನಾಕ್ಕೆ 480 ಬಲಿ: 86,04,955 ಮಂದಿ ಗುಣಮುಖ ರೆಬೆಲ್ ಸ್ಟಾರ್  ಅಂಬರೀಷ್ ಎರಡನೆ ಪುಣ್ಯತಿಥಿ ಇಂದು ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ಆಯ್ಕೆ ಪ್ರಶ್ನಿಸಿ ಅರ್ಜಿ: ಇಂದು ಸುಪ್ರೀಂ ಕೋರ್ಟ್… ಸಹಕಾರ ಹಾಲು ಡೈರಿಗೆ ಕ್ಷೀರ ನೀಡುವ ಮೂಲಕ ವಿವಿಧ ಸೌಲಭ್ಯ ಪಡೆಯಲು ಸಲಹೆ ಮಾಜಿ ಸಭಾಪತಿ ರಮೇಶ್ ಕುಮಾರ್ ಹುಟ್ಟುಹಬ್ಬ ಪ್ರಯುಕ್ತ ಕಾಂಗ್ರೆಸ್ ನಿಂದ ಅನ್ನಸಂತರ್ಪಣೆ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗಯ್ ನಿಧನ ಶಾಲೆ ಆರಂಭ ಪ್ರಸ್ತಾಪ: ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ 

ಇತ್ತೀಚಿನ ಸುದ್ದಿ

ಕಸ ವಿಲೇವಾರಿ ಆಗದಿದ್ದರೆ ಆ್ಯಪ್ ಬಳಸಿ ದೂರು ದಾಖಲಿಸಿ

September 10, 2020, 2:57 PM

ಮಂಗಳೂರು ( reporterkarnataka news): ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹೊರಡಿಸಿರುವ ‘ಸ್ವಚ್ಛತಾ ಮೊಹ್ವಾ’ ಆ್ಯಪನ್ನು ಸಾರ್ವಜನಿಕರು ಬಳಸಿ ತಮ್ಮ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ದೂರುಗಳನ್ನು ಛಾಯಾ ಚಿತ್ರದೊಂದಿಗೆ ದಾಖಲಿಸಬಹುದಾಗಿರುತ್ತದೆ. 

 ಆಪ್ ಬಳಸಿ ತಮ್ಮ ನಗರ ವ್ಯಾಪ್ತಿಯಲ್ಲಿ ಶೇಖರಣೆ ಆಗಿರುವ ಕಸದ ವಿಲೇವಾರಿ ಆಗದೇ ಇರುವ ಬಗ್ಗೆ, ಕಸ ವಿಲೇವಾರಿ ಗಾಡಿ ಅಥವಾ ವಾಹನ ತಮ್ಮ ವಾರ್ಡ್‍ನಲ್ಲಿ ಬಾರದೇ ಇದ್ದಲ್ಲಿ, ರಸ್ತೆಗಳ ಸ್ವಚ್ಛತೆಯಲ್ಲಿ ಲೋಪಗಳು ಕಂಡು ಬಂದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮೃತ ಜಾನುವಾರುಗಳ ವಿಲೇವಾರಿ ಆಗದೇ ಇದ್ದಲ್ಲಿ, ಸಾರ್ವಜನಿಕ ಶೌಚಾಯದಲ್ಲಿ ಸ್ವಚ್ಛತೆ, ನೀರಿನ ಸೌಲಭ್ಯ ಮತ್ತು ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಕಂಡುಬಂದಲ್ಲಿ ಮತ್ತು ಸ್ವಚ್ಛತೆಗೆ ಸಂಬಂಧಿಸಿದ ಇತರೆ ಸಮಸ್ಯೆಗಳು ಕಂಡು ಬಂದಲ್ಲಿ ಮೇಲಿನ ಆಪ್ ಬಳಸಿ ನಗರ ಸಂಸ್ಥೆಗಳಲ್ಲಿ ದೂರು ದಾಖಲಿಸಬಹುದಾಗಿದೆ. ದೂರಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮದ ಬಗ್ಗೆ ಮಾಹಿತಿಯನ್ನು ದೂರುದಾರರಿಗೆ ರವಾಸಿಸಲಾಗುವುದು.

 ಆಪ್ ಬಳಸಿ ತಮ್ಮ ನಗರದಲ್ಲಿ ಸ್ವಚ್ಛತೆಯನ್ನು ನಿರ್ವಹಿಸಿಲು ಆಡಳಿತದೊಂದಿಗೆ ಕೈ ಜೋಡಿಸಬೇಕೆಂದು ದ.ಕ. ಜಿಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು