11:34 PM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಹೊಸ ವರ್ಷ ಆಚರಣೆಗೆ ಕಾಫಿನಾಡು ಕಾತರ: ಜಿಲ್ಲಾಡಳಿತದಿಂದ ಮಾರ್ಗಸೂಚಿ ಬಿಡುಗಡೆ

30/12/2024, 15:26

*ಈಗಾಗಲೇ ಪ್ರವಾಸಿಗರಿಂದ ತುಂಬಿರೋ ಕಾಫಿನಾಡು ಚಿಕ್ಕಮಗಳೂರು*

*31ರ ಸಂಜೆ 6 ರಿಂದ 1ರ ಬೆಳಗ್ಗೆ 6ರವರೆಗೆ ಪ್ರವಾಸಿ ತಾಣಗಳಿಗೆ ಸಂಪೂರ್ಣ ನಿರ್ಬಂಧ*

*ರಾಜ್ಯದ ಅತ್ಯಂತ ಎತ್ತರ ಪ್ರದೇಶವಾದ ಮುಳ್ಳಯ್ಯನಗಿರಿ, ದತ್ತಪೀಠ, ದೇವರಮನೆ ಸೇರಿದಂತೆ ಝರಿ ಫಾಲ್ಸ್ , ಮಾಣಿಕ್ಯಧಾರ ಫಾಲ್ಸ್ ನ ಪ್ರಮುಖ ಪ್ರವಾಸಿತಾಣಗಳಿಗೆ ನಿರ್ಬಂಧ*

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಹೊಸ ವರ್ಷದ ಆಚರಣೆಗೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಕಾತರದಿಂದ ಕಾಯುತ್ತಿದ್ದು, ಜಿಲ್ಲಾಡಳಿತ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಮಾರ್ಗಸೂಚಿ ಪ್ರಕಾರ ಡಿ. 31ರ ಸಂಜೆ 6ರಿಂದ 1ರ ಬೆಳಗ್ಗೆ 6ರವರೆಗೆ ಪ್ರವಾಸಿ ತಾಣಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ರಾಜ್ಯದ ಅತ್ಯಂತ ಎತ್ತರ ಪ್ರದೇಶವಾದ ಮುಳ್ಳಯ್ಯನಗಿರಿ, ದತ್ತಪೀಠ, ದೇವರಮನೆ ಸೇರಿದಂತೆ ಝರಿ ಫಾಲ್ಸ್ , ಮಾಣಿಕ್ಯಧಾರ ಫಾಲ್ಸ್ ನ ಪ್ರಮುಖ ಪ್ರವಾಸಿ ತಾಣಗಳು ಕೂಡ ನಿರ್ಬಂಧದಲ್ಲಿ ಸೇರಿವೆ.
ಕಡ್ಡಾಯವಾಗಿ ರೇವ್ ಪಾರ್ಟಿ ರೀತಿಯ ಕಾರ್ಯಕ್ರಮಗಳಿಗೆ ಅವಕಾಶ ನೀಡಿಲ್ಲ. ಆಯೋಜಕರ ಮೇಲೆಯೇ ಪ್ರಕರಣ ದಾಖಲಿಸಲಾಗುತ್ತದೆ.
ರಾತ್ರಿ 10ರ ನಂತರ ಔಟ್ ಡೋರ್ ಡಿಜೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ.
ಸಿಎಲ್ 5 ಲೈಸನ್ಸ್ ಪಡೆದವರು ಸಿಸಿ ಕ್ಯಾಮರಾ ಹಾಕಬೇಕು, ಪೊಲೀಸ್ ಅನುಮತಿ ಪಡೆಯಬೇಕು.
ಆದಾಯಕ್ಕಾಗಿ ಇದೇ ಮೊದಲ ಬಾರಿಗೆ ಸಿ.ಎಲ್. 5 ಗೆ ಅನುಮತಿ ಸರ್ಕಾರ ನೀಡಿದೆ.
ಒಂದು ದಿನದ ಅನುಮತಿಗೆ 12000 ಸಾವಿರ ನಿಗಧಿ ಮಾಡಿದೆ. ಮುಖ್ಯರಸ್ತೆಯಲ್ಲಿ ಜಿಗ್ ಜಾಗ್ ರೀತಿ ಬ್ಯಾರಿಕೇಡ್ ಅಳವಡಿಸಲಾಗುವುದು.
ಕುಡಿದು ವಾಹನ ಚಾಲನೆ, ವೀಲ್ಹಿಂಗ್ ಮಾಡೋರ ಮೇಲೆ ಖಾಕಿ ಹದ್ದಿನಕಣ್ಣು ಇರಿಸಿದೆ. ಈ ಕುರಿತು ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು