7:34 AM Saturday28 - November 2020
ಬ್ರೇಕಿಂಗ್ ನ್ಯೂಸ್
ಉಗ್ರ ಸಂಘಟನೆ ಪರ ಗೋಡೆ ಬರಹದ ತನಿಖೆಗೆ ಪ್ರತ್ಯೇಕ ತಂಡ ರಚನೆ: ಪೊಲೀಸ್ ಯಕ್ಷಗಾನ ದೇವ ಪರಂಪರೆಯ ಮೂಲ ಕಲೆಯಾಗಿದ್ದು ಅಧ್ಯಯನ ಅಗತ್ಯ: ನಿತ್ಯಾನಂದ  ಸಂಸದರ ಜತೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಚರ್ಚೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಕಚೇರಿ ಇಂದು ಉದ್ಘಾಟನೆ ನಿವಾರ್ ಚಂಡಮಾರುತದ ಪ್ರಭಾವ: ಬೆಂಗಳೂರಿನಲ್ಲಿ  ಸೇರಿ 6 ಜಿಲ್ಲೆಗಳಲ್ಲಿ ಯಲ್ಲೊ ಅಲರ್ಟ್  ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ: 5 ಮಂದಿ ರೋಗಿಗಳು ಸಜೀವ ದಹನ, ತನಿಖೆಗೆ ಆದೇಶ ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆ ಇಂದು: ವಿಜಯ ನಗರ ಜೆಲ್ಲೆ ರಚನೆ… ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ನೂತನ ಮೇಳದ ಪ್ರಥಮ ವರ್ಷದ ತಿರುಗಾಟ 27ರಂ ವಿದ್ಯುತ್ ಸಂಪರ್ಕವೇ ಕಾಣದ 2 ಮನೆಗಳಿಗೆ  ಕೊನೆಗೂ ಬಂತು ಬೆಳಕು ! ಶ್ರೀನಗರದಲ್ಲಿ ಭದ್ರತಾ ಪಡೆಯ ಮೇಲೆ ಭಯೋತ್ಪಾದಕರ ದಾಳಿ: ಸ್ಥಳಕ್ಕೆ ಹೆಚ್ಚುವರಿ ಸೇನೆ

ಇತ್ತೀಚಿನ ಸುದ್ದಿ

ನಿರ್ಮಿಸಲು ಆಗ್ರಹಿಸಿ ಪ್ರತಿಭಟನಾ ಪ್ರದರ್ಶನಆಹಾರದ ಹಕ್ಕು ಸಂರಕ್ಷಿಸಲು, ಸುಸಜ್ಜಿತ ವಧಾಗೃಹ

November 7, 2020, 9:19 PM

ಮಂಗಳೂರು(reporterkarnataka news):

ಜನತೆಯ ಆಹಾರದ ಹಕ್ಕನ್ನು ಸಂರಕ್ಷಿಸಲು, ಸ್ವಚ್ಛ ಆಹಾರ, ಸುಸಜ್ಜಿತವಾದ ಜಾನುವಾರು ವಧಾಗೃಹದ ನಿರ್ಮಾಣಕ್ಕೆ ಒತ್ತಾಯಿಸಿ ಆಹಾರದ ಹಕ್ಕು ಸಂರಕ್ಷಣಾ ಹೋರಾಟ ಸಮಿತಿಯ ನೇತೃತ್ವದಲ್ಲಿ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನಾ ಪ್ರದರ್ಶನ ಜರುಗಿತು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್, ಸಿಪಿಎಂ, ಸಿಪಿಐ, ಜೆಡಿಎಸ್ ಪಕ್ಷಗಳು ಸೇರಿದಂತೆ ವಿದ್ಯಾರ್ಥಿ ಯುವಜನ ಮಹಿಳಾ ದಲಿತ ಸಂಘಟನೆಗಳು ಭಾಗವಹಿಸಿದ್ದವು.

ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ರಾಜ್ಯ ನಾಯಕ ಎಂ.ಬಿ.ಸದಾಶಿವ ಅವರು ಮಾತನಾಡಿ, ಆಹಾರ ಸೇವನೆಯ ವಿಚಾರ ಪ್ರತಿಯೊಬ್ಬರ ತೀರಾ ಖಾಸಗೀ ವಿಷಯವಾಗಿದ್ದು, ಅದನ್ನು ರಾಜಕೀಯಗೊಳಿಸಿ ತನ್ನ ಬೇಳೆ ಬೇಯಿಸಿಕೊಳ್ಳುವ ಕೋಮುವಾದಿ ಶಕ್ತಿಗಳ  ಹುನ್ನಾರಗಳನ್ನು ಬಯಲಿಗೆಳೆಯಬೇಕಾಗಿದೆ. ಜನತೆಯ ಆಹಾರದ ಹಕ್ಕನ್ನು ಸಂರಕ್ಷಿಸುವುದು, ಸ್ವಚ್ಛ ಪೌಷ್ಠಿಕ ಆಹಾರವನ್ನು ಒದಗಿಸುವುದು ಸರಕಾರಗಳ ಕರ್ತವ್ಯ. ಇಡೀ ದೇಶದಲ್ಲಿ ಶೇ. 71ರಷ್ಟು ಮಾಂಸಾಹಾರಿಗಳಿದ್ದು, ಅವರಿಗೆ ಪೂರಕವಾಗಿ ಸುಸಜ್ಜಿತವಾದ ಕುರಿ, ಆಡು, ಜಾನುವಾರು ವಧಾಗ್ರಹಗಳನ್ನು ನಿರ್ಮಾಣ ಮಾಡಬೇಕಾದದ್ದು ಸರಕಾರಗಳ ಜವಾಬ್ದಾರಿ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಸುನಿಲ್ ಕುಮಾರ್ ಬಜಾಲ್ , ಜಾನುವಾರು ಸಾಗಾಟದ ವಾಹನದಲ್ಲಿ ಎತ್ತು ಕೋಣ ಎಮ್ಮೆಗಳಿದ್ದರೂ ವಿನಾಃ ಕಾರಣ ತಡೆಯಲಾಗುತ್ತಿದೆ.  ಮೊಬೈಲ್ ಹಣವನ್ನು ಲೂಟಿ ಮಾಡಲಾಗುತ್ತದೆ. ಎಲ್ಲಾ ಅಧಿಕೃತ ದಾಖಲೆಗಳನ್ನು ಹೊಂದಿದ್ದರೂ ವಿನಾಃ ಕಾರಣ ಕಳ್ಳತನದ ಕೇಸ್ ಜಡಿದು ಮಾಂಸ ವ್ಯಾಪಾರಸ್ಥರನ್ನು ಜೈಲಿಗೆ ತಳ್ಳುವುದು, ಹಲ್ಲೆ ನಡೆಸುವುದು ವ್ಯಾಪಕವಾಗಿ ನಡೆಯುತ್ತಿದೆ ಎಂದು ಹೇಳಿದರು.

ಸಿಪಿಎಂ ಜಿಲ್ಲಾ ನಾಯಕರಾದ ಕೆ.ಯಾದವ ಶೆಟ್ಟಿ,

ಕಾಂಗ್ರೆಸ್ ನಾಯಕ ಐವನ್ ಡಿಸೋಜ,  ಸಿಪಿಐ ಜಿಲ್ಲಾ ನಾಯಕರಾದ ಸೀತಾರಾಮ ಬೇರಿಂಜ, ಮಾಜಿ ಶಾಸಕ ಮೊಯಿದಿನ್ ಭಾವ, ಮಾಜಿ ಮೇಯರ್ ಅಶ್ರಫ್, ಮಾಂಸ ವ್ಯಾಪಾರಸ್ಥರ ಸಂಘದ ಮುಖಂಡರಾದ ಆಲಿ ಹಸನ್, ಡಿವೈಎಫ್ ಐ ಜಿಲ್ಲಾ ನಾಯಕರಾದ ಅಶ್ರಫ್ ಕೆ.ಸಿ.ರೋಡ್

ಮುಂತಾದವರು ಮಾತನಾಡಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾದ ಸದಾಶಿವ ಉಳ್ಳಾಲ, ಮುಸ್ತಾಫ, ಸಿಪಿಎಂ ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ವಾಸುದೇವ ಉಚ್ಚಿಲ, ಸಿಪಿಐ ನಾಯಕರಾದ ವಿ.ಕುಕ್ಯಾನ್, ಕರುಣಾಕರ್, ಬಿ.ಶೇಖರ್, ಸುರೇಶ್ ಬಂಟ್ವಾಳ, ಜೆಡಿಎಸ್  ನಾಯಕರಾದ ಪ್ರವೀಣ್ ಚಂದ್ರ ಜೈನ್, ಸುಮತಿ ಹೆಗ್ಡೆ, ಅಜೀಜ್ ಕುದ್ರೋಳಿ, ದಲಿತ ಸಂಘಟನೆಗಳ ಮುಖಂಡರಾದ ಎಂ.ದೇವದಾಸ್, ತಿಮ್ಮಯ್ಯ ಕೊಂಚಾಡಿ, ಐಎನ್ ಟಿಯುಸಿ ನಾಯಕರಾದ ಬೊಂಡಾಲ ಚಿತ್ತರಂಜನ್ ಶೆಟ್ಟಿ, ಮಾಂಸ ವ್ಯಾಪಾರಸ್ಥರ ಸಂಘದ ನಾಯಕರಾದ ಯಾಸಿನ್ ಕುದ್ರೋಳಿ, ಅಬ್ದುಲ್ ಖಾದರ್, ಮುಸ್ತಾಕ್ ಆಲಿ, ಸಾಮಾಜಿಕ ಚಿಂತಕರಾದ ಪ್ರಮೀಳಾ ದೇವಾಡಿಗ, ಅಶುಂತಾ ಡಿಸೋಜ, ಕಾರ್ಪೋರೇಟರ್ ಶಂಶುದ್ದೀನ್, ಅಬ್ದುಲ್ ಲತೀಫ್, ವಕೀಲರ ಸಂಘಟನೆಯ ಯಶವಂತ ಮರೋಳಿ, ರಾಮಚಂದ್ರ ಬಬ್ಬುಕಟ್ಟೆ, ಶಾಲಿನಿ, ಡಿವೈಎಫ್ ಐ ನಾಯಕರಾದ ನವೀನ ಕೊಂಚಾಡಿ, ರಫೀಕ್ ಹರೇಕಳ, ಸಿಐಟಿಯು ಮುಖಂಡರಾದ ನಾಗೇಶ್ ಕೋಟ್ಯಾನ್, ಮಹಿಳಾ ಸಂಘಟನೆಯ ಮುಖಂಡರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ, ಜಯಲಕ್ಷ್ಮಿ, ಮಾಜಿ ಕಾರ್ಪೋರೇಟರ್ ಅಬೂಬಕ್ಕರ್, ಸಾಮಾಜಿಕ ಹೋರಾಟಗಾರರಾದ ಕಬೀರ್ ಉಳ್ಳಾಲ, ಮೊಯಿದಿನ್ ಮೋನು, ಆಶ್ರಫ್ ಕಿನಾರೆ, ವಹಾಬ್ ಕುದ್ರೋಳಿ ಮುಂತಾದವರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು