5:32 AM Thursday1 - January 2026
ಬ್ರೇಕಿಂಗ್ ನ್ಯೂಸ್
ಕೋವಿಡ್ ಸಾವು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ: ಸರಕಾರಕ್ಕೆ ಅಂತಿಮ ವರದಿ… ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆಗೆ 25 ಸಾವಿರ ರೂ. ದಂಡ ವಿಧಿಸಿದ… ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ ಕೆ.ಸಿ.‌ವೇಣುಗೋಪಾಲ್ ರಾಜ್ಯದ ಸೂಪರ್ ಸಿಎಂ: ಬಿಜೆಪಿಯ ಎನ್.ರವಿಕುಮಾರ್ ಆರೋಪ ಅಕ್ರಮ ವಲಸಿಗರ ಕುರಿತು ಉನ್ನತ ಮಟ್ಟದ ತನಿಖೆಯಾಗಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ಜಮೀನು ಅಕ್ರಮ ಒತ್ತುವರಿಯಾದರೆ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಗಳ ಮೇಲೆ… ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಹೊಸ ವರ್ಷಾಚರಣೆ: ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ತಾಕೀತು ಕನ್ನಡ ಭಾಷೆ, ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ರಾಜಿ ಇಲ್ಲ:…

ಇತ್ತೀಚಿನ ಸುದ್ದಿ

ಕೋವಿಡ್ ಹಗರಣದ ಕುರಿತು ರಾಜಕೀಯ ‌ದ್ವೇಷಕ್ಕೆ ಪ್ರಾಸಿಕ್ಯೂಶನ್ ಅನುಮತಿ: ಯಡಿಯೂರಪ್ಪ

09/11/2024, 18:09

ಗಣೇಶ್ ಇನಾಂದಾರ ಬಳ್ಳಾರಿ

info.reporterkarnataka@gmail.com

ಕೋವಿಡ್ ಹಗರಣದ ಕುರಿತು ಸರಕಾರ ಪ್ರಾಸಿಕ್ಯೂಶನ್ ಅನುಮತಿಗೆ ಶಿಫಾರಸು ಮಾಡಿರುವುದರ ಹಿಂದೆ ರಾಜಕೀಯ ‌ದುರುದ್ದೇಶವಿದೆ‌ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು‌.
ತೋರಣಗಲ್‌‌ನಲ್ಲಿ ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾವು ಯಾವ ಹಗರಣವನ್ನೂ‌ ಮಾಡಿಲ್ಲ. ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲಿ ಮಾಡಿದ್ದೇವೆ. ಯಾವ ತನಿಖೆಗೂ ಬೇಕಿದ್ದರೆ ಕೊಡಲಿ ಎಂದ ಯಡಿಯೂರಪ್ಪ, ರಾಜ್ಯದ ಮೂರು ಕ್ಷೇತ್ರಗಳಲ್ಲಿ ‌ನಿರೀಕ್ಷೆ ಮೀರಿ ಜನ ಬೆಂಬಲ ಸಿಗುತ್ತಿದೆ. ಮೋದಿ ಅವರ ಅಪಾರ ಪ್ರಭಾವ ಕೆಲಸ‌ ಮಾಡಲಿದೆ. ಮೂರಕ್ಕೂ ಮೂರು ಕ್ಷೇತ್ರದಲ್ಲಿ ಗೆಲುವು ಸಿಗಲಿದೆ ಎನ್ನುವ ವಿಶ್ವಾಸವಿದೆ. ನನ್ನ ಅಧಿಕಾರ ಅವಧಿಯಲ್ಲಿ ‌ಯಾವ ಹಗರಣವೂ‌ ನಡೆದಿಲ್ಲ. ಎಲ್ಲವೂ ಕಾನೂನು ಚೌಕಟ್ಟಿನಲ್ಲಿ ಅನುಷ್ಠಾನ ಮಾಡಿದ್ದೇವೆ. ದುರುದ್ದೇಶ‌‌ ಪೂರಕವಾಗಿ ಕೇಸ್ ದಾಖಲಿಸುವುದು,‌ ವಿಚಾರಣೆಗೆ ಅನುಮತಿ ‌ನೀಡುವುದು ನಡೆದಿದೆ ಎಂದರು.
ಶ್ರೀರಾಮುಲು ಕೋವಿಡ್ ನಲ್ಲಿ ‌ಯಾವುದೇ ಹಗರಣ ಮಾಡಿಲ್ಲ. ರಾಜಕೀಯ ‌ದ್ವೇಷಕ್ಕೆ ಪ್ರಾಸಿಕ್ಯೂಶನ್ ಅನುಮತಿ ನೀಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸೋಲುವ ಭೀತಿ‌ ಶುರುವಾಗಿದೆ. ಇಡೀ ಕ್ಯಾಬಿನೆಟ್ ‌ಜತೆ ಇಲ್ಲೆ ಕುಳಿತ್ತಿದ್ದಾರೆ.ರಾಮುಲು ಮೇಲೂ‌ ದುರುದ್ದೇಶ ಪೂರ್ವಕ ಪ್ರಾಸಿಕ್ಯೂಶನ್ ಅನುಮತಿ ‌ನೀಡಿದ್ದಾರೆ ಎಂದು

ಇತ್ತೀಚಿನ ಸುದ್ದಿ

ಜಾಹೀರಾತು