9:00 AM Sunday7 - December 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ: ಆಕಸ್ಮಿಕ ಗುಂಡಿನ ಚೂರು ತಗುಲಿ ಇಬ್ಬರು ಯುವಕರಿಗೆ ಗಾಯ ರಾಷ್ಟ್ರವ್ಯಾಪಿ ನಿಮ್ಹಾನ್ಸ್ ಮಾದರಿಯ ಸಂಸ್ಥೆ ಸ್ಥಾಪನೆಗೆ ಸಚಿವ ಡಾ. ಶರಣಪ್ರಕಾಶ್‌ ಒತ್ತಾಯ ಸೌರಶಕ್ತಿಗೆ 3ನೇ ಅತಿದೊಡ್ಡ ಕೊಡುಗೆದಾರ ಭಾರತ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Shivamogga | ಬಸ್ ಚಾಲಕನ ಅತೀ ವೇಗ, ಅಜಾಗರೂಕತೆ: ಬೈಕ್ ಸವಾರ ಗಂಭೀರ ತೋಟಕ್ಕೆ ತೆರಳಿದ್ದ ಸಂದರ್ಭ ಏಕಾಏಕಿ ಹೆಜ್ಜೇನು ದಾಳಿ: ಮಹಿಳೆ ಸಹಿತ 3 ಮಂದಿಗೆ… ವಿರಾಜಪೇಟೆ | ಕ್ಷುಲ್ಲಕ ಕಾರಣ: ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲಿ ಯುವಕರ ಮಾರಮಾರಿ..!! “ಸ್ವಸ್ಥ ಮೈಸೂರು” ಅಭಿಯಾನ ಒಪ್ಪಂದಕ್ಕೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸಹಿ New Delhi | ಬೆಳ್ಳಿ ವಸ್ತು, ಆಭರಣಗಳಿಗಿನ್ನು BIS ಹಾಲ್‌ಮಾರ್ಕ್‌, HUID ಕಡ್ಡಾಯ ರಾಜ್ಯ ಸರಕಾರ ಅನ್ನದಾತ ರೈತನ ಬಗ್ಗೆ ಕಾಳಜಿ ವಹಿಸುತ್ತಿಲ್ಲ: ಮಾಜಿ ಗೃಹ ಸಚಿವ… ವಿಶೇಷ ಚೇತನರು ಇನ್ನು ವಿಮಾನವೇರುವುದು ಸುಲಭ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಮೊಬಿಲಿಟಿ…

ಇತ್ತೀಚಿನ ಸುದ್ದಿ

ಅಮಿತ್ ಶಾ ಹೇಳಿದ್ದೆಲ್ಲ ಮಾಡಲಾಗದು; ತಮಿಳುನಾಡಿನಲ್ಲಿ ಹಿಂದಿ ಹೇರಿಕೆಗೆ ಅವಕಾಶ ನೀಡಲಾರೆ: ಅಣ್ಣಾಮಲೈ 

14/04/2022, 09:24

ಚೆನ್ನೈ(reporterkarnataka.com): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹಿಂದಿ ಹೇರಿಕೆ ಕುರಿತು ತಮಿಳುನಾಡು ಬಿಜೆಪಿ ಮುಖ್ಯಸ್ಥ, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಮಿತ್ ಶಾ ಹೇಳಿದ್ದನ್ನೆಲ್ಲ ಕೇಳಲಾಗದು. ಅವರು ಹೇಳಿದ ರೀತಿ ಎಲ್ಲವೂ ಮಾಡುವುದಿಲ್ಲ ಎಂದಿದ್ದಾರೆ.

ತಮಿಳುನಾಡಿನಲ್ಲಿ ಹಿಂದಿ ಹೇರಿಕೆಗೆ ಯಾವತ್ತೂ.ಅವಕಾಶ ನೀಡುವುದಿಲ್ಲ. ದೇಶದಲ್ಲಿ ತಮಿಳು ಸಂಪರ್ಕ ಭಾಷೆಯಾಗಬೇಕು ಎಂದು‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದರು.

ಅಣ್ಣಾಮಲೈ ಅವರು ಇಂಧನ ಬೆಲೆ ಏರಿಕೆ ಬಗ್ಗೆ ಕೂಡ ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರಗಳು ಇಂಧನದ ಮೇಲಿನ ತೆರಿಗೆ ಕಡಿಮೆ‌ ಮಾಡಬೇಕು ಎಂದು ಹೇಳಿದರು.

ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ ಎಸ್ ಪಿ ಆಗಿ ಕಾರ್ಯನಿರ್ವಹಿಸಿದ್ದರು. ಖಡಕ್ ಅಧಿಕಾರಿ ಎಂದು ಹೆಸರುಗಳಿಸಿದ್ದ ಅವರನ್ನು ಸಿಂಗಂ ಎಂದು ಕರೆಯಲಾಗುತ್ತಿತ್ತು.
 

ಇತ್ತೀಚಿನ ಸುದ್ದಿ

ಜಾಹೀರಾತು