5:41 PM Sunday7 - March 2021
ಬ್ರೇಕಿಂಗ್ ನ್ಯೂಸ್
ಸೆಕ್ಸ್ ಸಿಡಿ ಪ್ರಕರಣ: ಯುವತಿಯ ವಿಚಾರಣೆಗೆ ಮುನ್ನವೇ ದೂರು ವಾಪಸ್ ಪಡೆಯಲು ಕಲ್ಲಹಳ್ಳಿ… ‘ನಮ್ಮ ನೇತ್ರಾವತಿ ನಮ್ಮ ಜವಾಬ್ದಾರಿ’ ಅಭಿಯಾನ: ವಿದ್ಯಾರ್ಥಿಗಳು ಹಗ್ಗದ ಸಹಾಯದಿಂದ ಇಳಿದು ತ್ಯಾಜ್ಯ ತೆರವು ಕುಂಬಳ ಕಾಯಿ ಕಳ್ಳ ಗಾದೆ: ಸೆಕ್ಸ್ ಸಿಡಿ ಬಳಿಕ ತಡೆಯಾಜ್ಞೆ ಕೋರುವ ಸಚಿವರ ಸಂಖ್ಯೆ… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ದೆಹಲಿ ಖಾಸಗಿ ಆಸ್ಪತ್ರೆಗೆ ಸಂಸದ ಅನಂತ ಕುಮಾರ್ ಹೆಗಡೆ ದಾಖಲು: ಕಾಲಿಗೆ ಶಸ್ತ್ರ… ತಮಿಳುನಾಡು ವಿಧಾನಸಭೆ ಚುನಾವಣೆ: 243 ಸ್ಥಾನಗಳ ಪೈಕಿ ಬಿಜೆಪಿ 20 ಸ್ಥಾನಗಳಲ್ಲಿ ಸ್ಪರ್ಧೆ?… ಅಸ್ಸಾಂ: 126 ಸ್ಥಾನಗಳಲ್ಲಿ ಬಿಜೆಪಿ 92ರಲ್ಲಿ ಸ್ಪರ್ಧೆ?: ಮಿಕ್ಕ ಸೀಟುಗಳು ಮಿತ್ರ ಪಕ್ಷಕ್ಕೆ? ಹೊರ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮೂಡುಗೆರೆಯ ಕುಮಾರ್: ನೆರವಿಗೆ ಬಂದ ಕೆಸಿಎಫ್ ಸೌದಿ… ಕೇರಳ ಬಿಜೆಪಿ ಸಿಎಂ ಕ್ಯಾಂಡಿಡೇಟ್: ಬಿಜೆಪಿ ಹೈಕಮಾಂಡ್ ಇನ್ನೂ ಘೋಷಣೆ ಮಾಡಿಲ್ವಂತೆ! ಸೆಕ್ಸ್ ಸಿಡಿ ಬಳಿಕ ಸಂಕಟದಲ್ಲಿ ಸಾಲು ಸಾಲು ಸಚಿವರು: ಮಾನಹಾನಿ ವರದಿ ತಡೆಯುವಂತೆ…

ಇತ್ತೀಚಿನ ಸುದ್ದಿ

ಕಾಣದ ಕೊರೊನಾಕ್ಕೆ ಕಡಲನಗರಿ ಮತ್ತೆ ಸ್ತಬ್ಧ

July 16, 2020, 5:41 AM

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡನೇ ಹಂತದ ಲಾಕ್ ಡೌನ್ ಜಾರಿ

ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಎರಡನೇ ಸುತ್ತಿನ ಲಾಕ್ ಡೌನ್ ವಿಧಿಸಿರುವುದರಿಂದ ಜಿಲ್ಲೆಯಲ್ಲಿ ಗುರುವಾರ ಜನಜೀವನ ಮತ್ತೆ ಸ್ತಬ್ದಗೊಂಡಿತು.

ಬುಧವಾರ ರಾತ್ರಿಯಿಂದ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ.

ಮಾರ್ಚ್ 21ರಿಂದ ದೇಶಾದ್ಯಂತ ವಿಧಿಸಿದ ಲಾಕ್ ಡೌನ್ ಬರೊಬ್ಬರಿ ಎರಡು ತಿಂಗಳ ಬಳಿಕ ತೆರವುಗೊಂಡಿತ್ತು. ಜಿಲ್ಲೆಯಲ್ಲಿ ಜನಜೀವನ ಇನ್ನೇನು ಸಹಜ ಸ್ಥಿತಿಗೆ ಬರುತ್ತದೆ ಎನ್ನುವಷ್ಟರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸಿಕ್ಕಾಪಟ್ಟೆ ಏರ ತೊಡಗಿತು. ಈ ಹಿನ್ನೆಲೆಯಲ್ಲಿ  ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಸಭೆ ನಡೆಸಿ ಮತ್ತೆ ಲಾಕ್ ಡೌನ್ ವಿಧಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಗ್ರಹಿಸಿತ್ತು. ಜಿಲ್ಲಾಡಳಿತದ ಆಶಯದಂತೆ ಬುಧವಾರ ರಾತ್ರಿಯಿಂದ  ಒಂದು ವಾರ ಕಾಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ವಿಧಿಸಲಾಗಿದೆ.

ಎರಡನೇ ಹಂತದ ಲಾಕ್ ಡೌನ್ ನ ಮೊದಲ ದಿನ ಬೆಳಗ್ಗೆ 11 ಗಂಟೆ ವರೆಗೆ ಜನರಿಗೆ ದಿನನಿತ್ಯದ ಸಾಮಗ್ರಿ ಒಯ್ಯಲು ಅವಕಾಶ ನೀಡಲಾಯಿತು. ಆದರೆ ಕೊಳ್ಳುವವರ ಸಂಖ್ಯೆ ಹಲವೆಡೆ ತೀರಾ ಇಳಿಮುಖವಾಗಿತ್ತು. 11 ಗಂಟೆ ಕಳೆಯುತ್ತಿದ್ದಂತೆ ನಗರದ ಎಲ್ಲ ಪ್ರಮುಖ ರಸ್ತೆಗಳು ಸೇರಿದಂತೆ ಗಲ್ಲಿ ಗಲ್ಲಿಗಳು ಬಿಕೋ ಎನ್ನಲಾರಂಭಿಸಿತು. ಜನರು ಸ್ವಯಂಪ್ರೇರಿತರಾಗಿ ರಸ್ತೆಗೆ ಇಳಿಯದೆ ಸಹಕರಿಸಿದರು.

ನಗರದ ಸೆಂಟ್ರಲ್ ಮಾರ್ಕೆಟ್ ಕಳೆದ ಲಾಕ್ ಡೌನ್ ಅವಧಿಯಲ್ಲೇ ಮುಚ್ಚಿರುವುದರಿಂದ ಗುರುವಾರ ಲಾಕ್ ಡೌನ್ ಸಡಿಲಿಕೆ ಅವಧಿಯಲ್ಲಿಯೂ ಇಲ್ಲಿನ ರಸ್ತೆಗಳಲ್ಲಿ ಜನ ಸಂಚಾರ ತೀರಾ ವಿರಳವಾಗಿತ್ತು. ಬೆಳಗ್ಗೆ 11ರ ಬಳಿಕ ನಗರದ ಸ್ಟೇಟ್ ಬ್ಯಾಂಕ್ ಪರಿಸರ, ಮೀನು ಮಾರುಕಟ್ಟೆ, ಸೆಂಟ್ರಲ್ ಮಾರ್ಕೆಟ್, ಅತ್ತಾವರ ಹಾಗೂ ಕಂಕನಾಡಿ ರೈಲ್ವೆ ಸ್ಟೇಶನ್,  ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಕಂಕನಾಡಿ ಮಾರುಕಟ್ಟೆ, ಹಳೆ ಬಂದರು ಪ್ರದೇಶ ಭಣಗುಟ್ಟುತ್ತಿತ್ತು.

ಹೊರ ಊರಿನಿಂದ ನಗರ ಪ್ರವೇಶಿಸುವ ಎಲ್ಲ ರಸ್ತೆಗಳಲ್ಲಿ ಪೊಲೀಸ್ ನಾಕಾಬಂಧಿ ಹಾಕಲಾಗಿತ್ತು.  ಎಲ್ಲ ಪ್ರಮುಖ ರಸ್ತೆಗಳಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು ತಿರುಗಾಡುತ್ತಿರುವುದು ಬಿಟ್ಟರೆ ನಗರ ಸಂಪೂರ್ಣ ಖಾಲಿ ಖಾಲಿಯಾಗಿತ್ತು. ನಗರದ ಪ್ರವೇಶಿಸುವ ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್ ನಲ್ಲಿ ಮುಚ್ಚುವ  ಮೂಲಕ ನಗರದಲ್ಲಿ ಓಡಾಡುವವರ ಸಂಖ್ಯೆಯನ್ನು ಶೂನ್ಯಕ್ಕೆ  ಇಳಿಸಲಾಯಿತು. 

ಸ್ಟೇಟ್ ಬ್ಯಾಂಕ್ ಪ್ರವೇಶಿಸುವ ಆರ್ ಟಿಒ ಕಚೇರಿ ಎದುರು ಪೊಲೀಸ್ ನಾಕಾಬಂಧಿ ಹಾಕಲಾಗಿತ್ತು. ವೈದ್ಯಕೀಯ ಹಾಗೂ ಇತರ ತುರ್ತು ಅಗತ್ಯಕ್ಕಾಗಿ ಸ್ವಂತ ವಾಹನಗಳ ಮೂಲಕ ಅಗಮಿಸಿದವರನ್ನು  ಪರಿಶೀಲನೆ ನಡೆಸಿ ಹೋಗಲು ಅನುಮತಿ ನೀಡಲಾಗುತ್ತಿತ್ತು.

ಪೊಲೀಸ್ ಗಸ್ತು ಜತೆ ಜಿಲ್ಲಾ ಆರೋಗ್ಯ ಇಲಾಖೆ, ಮಂಗಳೂರು ಮಹಾನಗರಪಾಲಿಕೆ ಆರೋಗ್ಯ ವಿಭಾಗದ ವಾಹನಗಳು , ಅಧಿಕಾರಿಗಳ ವಾಹನಗಳು ನಗರದಲ್ಲಿ ಓಡಾಟ ನಡೆಸುತ್ತಿದ್ದವು.

ಜಿಲ್ಲೆಯ ಇತರ ತಾಲೂಕುಗಳಲ್ಲಿ ಕೂಡ ಸಂಪೂರ್ಣ ಲಾಕ್ ಡೌನ್ ಮಾಡಲಾಯಿತು. ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯದಲ್ಲಿ ಸಂಪೂರ್ಣ ಬಂದ್ ಮಾಡಲಾಯಿತು. 

ಹಾಲು – ಪೇಪರ್ ಅಬಾಧಿತ

 ಲಾಕ್ ಡೌನ್ ನಡುವೆ ಹಾಲು-ಮೊಸರು, ಪೇಪರ್ ಸೇವೆ ಎಂದಿನಂತೆ ನಡೆಯಿತು.

ಹಾಲಿನ ಬೂತ್, ಪೇಪರ್ ಸ್ಟಾಲ್ ಬೆಳಗ್ಗೆ 11  ಗಂಟೆ ವರೆಗೆ ತೆರೆದುಕೊಂಡಿದ್ದವು. ನಂತರ ಮುಚ್ಚಿದವು.

ವೆನ್ಲಾಕ್ ಮೌನ

ಸದಾ ಜನಜಂಗುಳಿಯಿಂದ ತುಂಬಿ ಗಿಜಿಗುಡುತ್ತಿದ್ದ ಸರಕಾರಿ ಜಿಲ್ಲಾಸ್ಪತ್ರೆ ಮೌನಕ್ಕೆ ಜಾರಿದೆ. ಆಸ್ಪತ್ರೆ ಆವರಣ ಜನರಿಲ್ಲದೆ ಡಲ್ ಹೊಡೆಯುತ್ತಿತ್ತು.ಆಸ್ಪತ್ರೆಯನ್ನು ಪೂರ್ತಿಯಾಗಿ ಕೊರೊನಾಕ್ಕೆ ಮೀಸಲಿಟ್ಟಿರುವುದರಿಂದ ಇತರ ರೋಗಿಗಳನ್ನು ಇಲ್ಲಿಂದ ಸ್ಥಳಾಂತರಿಸಲಾಗಿದೆ.

ಬ್ಲ್ಯಾಕ್ ನಲ್ಲಿ ಮದ್ಯ

ಕೊರೊನಾ ಲಾಕ್ ಡೌನ್ ನಡುವೆ ಅಮಲು ಪ್ರಿಯರಿಗೆ ಮದ್ಯ ಬ್ಲ್ಯಾಕ್ ನಲ್ಲಿ ಮಾರಾಟ ಮಾಡಲಾಗುತ್ತಿದೆ.

ನಗರದ ಹೆಚ್ಚಿನ ಕಡೆಗಳಲ್ಲಿ ಬ್ಲಾಕ್ ನಲ್ಲಿ ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಬಾಟ್ಲಿ ಮೇಲೆ ಕಮಿಷನ್ ಇಟ್ಟು ಹೆಚ್ಚಿನ ರೇಟಿಗೆ ಬಿಕಾರಿಯಾಗುತ್ತಿದೆ. ನಗರದ ಪೊಲೀಸ್ ಇಲಾಖೆ ಹಾಗೂ ಸಹಕಾರಿ ಇಲಾಖೆ ಎಚ್ಚರಿಕೆ ವಹಿಸಬೇಕೆಂದು ಸಾರ್ವಜನಿಕ ಆಗ್ರಹಿಸುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು