10:10 AM Tuesday16 - September 2025
ಬ್ರೇಕಿಂಗ್ ನ್ಯೂಸ್
ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ

ಇತ್ತೀಚಿನ ಸುದ್ದಿ

ಕಾಣದ ಕೊರೊನಾಕ್ಕೆ ಕಡಲನಗರಿ ಮತ್ತೆ ಸ್ತಬ್ಧ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡನೇ ಅಲೆಯ ಬೀಸಿಗೆ ಫುಲ್ ಲಾಕ್ 

28/04/2021, 06:25

ಮಂಗಳೂರು (reporterkarnataka news):

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಸೋಂಕು ವಿಪರೀತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿ ಒಂದು ದಿನ ರಿಲಾಕ್ಸ್ ನೀಡಿದ ಬಳಿಕ ಮಂಗಳವಾರ ರಾತ್ರಿ 9 ಗಂಟೆಯಿಂದ ಇಡೀ ರಾಜ್ಯ 14 ದಿನಗಳ ದೀರ್ಘ ಲಾಕ್ ಡೌನ್ ಗೆ ಜಾರಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯ ಕೇಂದ್ರವಾದ ಮಂಗಳೂರಿನಲ್ಲಿಯೂ ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.

ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ 14 ದಿನಗಳ ಲಾಕ್ ಡೌನ್ ಗೆ

ನಿರ್ಧರಿಸಿದೆ. ಇದರೊಂದಿಗೆ ಕರಾವಳಿ ಸೇರಿದಂತೆ ಇಡೀ ರಾಜ್ಯದ ಜನಜೀವನ ಮತ್ತೆ ಸ್ತಬ್ದಗೊಂಡಿದೆ.

ಮಂಗವಾರ ರಾತ್ರಿಯಿಂದ ಲಾಕ್ ಡೌನ್ ಜಾರಿಯಲ್ಲಿದೆ. ಕಳೆದ ವರ್ಷ ಮಾರ್ಚ್ 21ರಿಂದ ದೇಶಾದ್ಯಂತ ವಿಧಿಸಿದ ಲಾಕ್ ಡೌನ್ ಬರೊಬ್ಬರಿ ಎರಡು ತಿಂಗಳ ಬಳಿಕ ತೆರವುಗೊಂಡಿತ್ತು. ಜಿಲ್ಲೆಯಲ್ಲಿ ಜನಜೀವನ ಇನ್ನೇನು ಸಹಜ ಸ್ಥಿತಿಗೆ ಬರುತ್ತದೆ ಎನ್ನುವಷ್ಟರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸಿಕ್ಕಾಪಟ್ಟೆ ಏರ ತೊಡಗಿದ ಕಾರಣ ಎರಡನೇ ಸುತ್ತಿನ ಲಾಕ್ ಡೌನ್ ವಿಧಿಸಲಾಗಿತ್ತು. ಮತ್ತೆ ಜನಜೀವನ ಸಹಜ ಸ್ಥಿತಿಗೆ ಬರಲಾರಂಭಿಸಿತು. ಅಷ್ಟರಲ್ಲಿ ಕೊರೊನಾ ಎರಡನೇ ಅಲೆಯ ಅರ್ಭಟ ಜೋರಾಗಲಾರಂಭಿಸಿತು. ಇದೀಗ ಎರಡನೇ ಅಲೆಯ ಮೊದಲ ಲಾಕ್ ಡೌನ್ ಪ್ರಾರಂಭವಾಗಿದೆ.

ಲಾಕ್ ಡೌನ್ ನಿಯಮ ಪ್ರಕಾರ ಮೊದಲ ದಿನ ಬೆಳಗ್ಗೆ 10 ಗಂಟೆ ವರೆಗೆ ಜನರಿಗೆ ದಿನನಿತ್ಯದ ಸಾಮಗ್ರಿ ಒಯ್ಯಲು ಅವಕಾಶ ನೀಡಲಾಯಿತು. ಆದರೆ ಕೊಳ್ಳುವವರ ಸಂಖ್ಯೆ ಹಲವೆಡೆ ತೀರಾ ಇಳಿಮುಖವಾಗಿತ್ತು. 10 ಗಂಟೆ ಕಳೆಯುತ್ತಿದ್ದಂತೆ ನಗರದ ಎಲ್ಲ ಪ್ರಮುಖ ರಸ್ತೆಗಳು ಸೇರಿದಂತೆ ಗಲ್ಲಿ ಗಲ್ಲಿಗಳು ಬಿಕೋ ಎನ್ನಲಾರಂಭಿಸಿತು. ಜನರು ಸ್ವಯಂಪ್ರೇರಿತರಾಗಿ ರಸ್ತೆಗೆ ಇಳಿಯದೆ ಸಹಕರಿಸಿದರು.

ಬೆಳಗ್ಗೆ 10ರ ಬಳಿಕ ನಗರದ ಸ್ಟೇಟ್ ಬ್ಯಾಂಕ್ ಪರಿಸರ, ಮೀನು ಮಾರುಕಟ್ಟೆ, ಸೆಂಟ್ರಲ್ ಮಾರ್ಕೆಟ್, ಅತ್ತಾವರ ಹಾಗೂ ಕಂಕನಾಡಿ ರೈಲ್ವೆ ಸ್ಟೇಶನ್,  ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಕಂಕನಾಡಿ ಮಾರುಕಟ್ಟೆ, ಹಳೆ ಬಂದರು ಪ್ರದೇಶ ಭಣಗುಟ್ಟುತ್ತಿತ್ತು.

ಹೊರ ಊರಿನಿಂದ ನಗರ ಪ್ರವೇಶಿಸುವ ಎಲ್ಲ ರಸ್ತೆಗಳಲ್ಲಿ ಪೊಲೀಸ್ ನಾಕಾಬಂಧಿ ಹಾಕಲಾಗಿತ್ತು.  ಎಲ್ಲ ಪ್ರಮುಖ ರಸ್ತೆಗಳಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು ತಿರುಗಾಡುತ್ತಿರುವುದು ಬಿಟ್ಟರೆ ನಗರ ಸಂಪೂರ್ಣ ಖಾಲಿ ಖಾಲಿಯಾಗಿತ್ತು. ನಗರದ ಪ್ರವೇಶಿಸುವ ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್ ನಲ್ಲಿ ಮುಚ್ಚುವ  ಮೂಲಕ ನಗರದಲ್ಲಿ ಓಡಾಡುವವರ ಸಂಖ್ಯೆಯನ್ನು ಶೂನ್ಯಕ್ಕೆ  ಇಳಿಸಲಾಯಿತು.

ಸ್ಟೇಟ್ ಬ್ಯಾಂಕ್ ಪ್ರವೇಶಿಸುವ ಆರ್ ಟಿಒ ಕಚೇರಿ ಎದುರು ಪೊಲೀಸ್ ನಾಕಾಬಂಧಿ ಹಾಕಲಾಗಿತ್ತು. ವೈದ್ಯಕೀಯ ಹಾಗೂ ಇತರ ತುರ್ತು ಅಗತ್ಯಕ್ಕಾಗಿ ಸ್ವಂತ ವಾಹನಗಳ ಮೂಲಕ ಅಗಮಿಸಿದವರನ್ನು  ಪರಿಶೀಲನೆ ನಡೆಸಿ ಹೋಗಲು ಅನುಮತಿ ನೀಡಲಾಗುತ್ತಿತ್ತು.

ಪೊಲೀಸ್ ಗಸ್ತು ಜತೆ ಜಿಲ್ಲಾ ಆರೋಗ್ಯ ಇಲಾಖೆ, ಮಂಗಳೂರು ಮಹಾನಗರಪಾಲಿಕೆ ಆರೋಗ್ಯ ವಿಭಾಗದ ವಾಹನಗಳು , ಅಧಿಕಾರಿಗಳ ವಾಹನಗಳು ನಗರದಲ್ಲಿ ಓಡಾಟ ನಡೆಸುತ್ತಿದ್ದವು.

ಜಿಲ್ಲೆಯ ಇತರ ತಾಲೂಕುಗಳಲ್ಲಿ ಕೂಡ ಸಂಪೂರ್ಣ ಲಾಕ್ ಡೌನ್ ಮಾಡಲಾಯಿತು. ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯದಲ್ಲಿ ಸಂಪೂರ್ಣ ಬಂದ್ ಮಾಡಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು