11:49 AM Monday23 - December 2024
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಬಂಧನಕ್ಕೊಳಗಾಗಿ ಬಿಡುಗಡೆಗೊಂಡ ಸಿ.ಟಿ. ರವಿಗೆ ಭಾರೀ ಸ್ವಾಗತ; ಮೆರವಣಿಗೆ ಸಿ. ಟಿ. ರವಿ ಸದಸ್ಯತ್ವ ಅನರ್ಹಗೊಳಿಸಿ: ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ… ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸೋಣ: ಆರ್ಚ್ ಬಿಷಪ್ಸ್ ಹೌಸ್ ಕ್ರಿಸ್ಮಸ್ ಆಚರಣೆಯಲ್ಲಿ ಮುಖ್ಯಮಂತ್ರಿ… ವಕ್ಫ್ ಹೋರಾಟಕ್ಕೆ ಮಣಿದು ಸಮಿತಿ ರಚನೆಗೆ ಸರಕಾರ ನಿರ್ಧಾರ: ಪ್ರತಿಪಕ್ಷ ನಾಯಕ ಆರ್‌.… ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ರಾತ್ರಿಯಡೀ ಪೊಲೀಸ್ ವಾಹನದಲ್ಲಿ ಸಿ.ಟಿ. ರವಿ ಸುತ್ತಾಟ!: ಕಾರಣ ಏನು ಗೊತ್ತೇ? ಸಿ.ಟಿ.ರವಿ ಬಂಧನ: ಚಿಕ್ಕಮಗಳೂರು, ಕೊಟ್ಟಿಗೆಹಾರದಲ್ಲಿ ಬಿಜೆಪಿ ಭಾರೀ ಪ್ರತಿಭಟನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪಿಒಸಿ ದರ್ಜೆ: ವಿಮಾನಯಾನ ಸಚಿವ ಜತೆ ಸಂಸದ ಕ್ಯಾಪ್ಟನ್… ಮಂಗಳೂರು: ಹೊಸ ವರ್ಷದ ಆಚರಣೆಗೆ ತರಿಸಿದ್ದ 9 ಲಕ್ಷ ರೂ. ಮೌಲ್ಯದ ಡ್ರಗ್ಸ್… ಎನ್.ಆರ್.ಪುರ: ತಂದೆ- ಮಗನ ಮೇಲೆ ಕಾಡಾನೆ ದಾಳಿ; ತಂದೆ ಸಾವು; ಮಗ ತಪ್ಪಿಸಿಕೊಂಡು…

ಇತ್ತೀಚಿನ ಸುದ್ದಿ

ಸಾಧನೆಯ ಹಾದಿಯಲ್ಲಿ ಮೊಡಂಕಾಪು ಕಾರ್ಮೆಲ್ ಪ್ರಥಮ ದರ್ಜೆ ಕಾಲೇಜು: ಫಲಿತಾಂಶ ಮಾತ್ರವಲ್ಲ ಪಠ್ಯೇತರ ಚಟುವಟಿಕೆಗಳಲ್ಲೂ ಸೈ!

03/04/2023, 21:52

ಬಂಟ್ವಾಳ(reporterkarnataka.com):
2010ರ ಶೈಕ್ಷಣಿಕ ವರ್ಷದಲ್ಲಿ ಆರಂಭವಾದ ಬಂಟ್ವಾಳದ ಮೊಡಂಕಾಪು ಬಳಿಯ ಕಾರ್ಮೆಲ್ ಪ್ರಥಮ ದರ್ಜೆ ಇಂದು ಹತ್ತು ಹಲವು ಸಾಧನೆಗಳ ರೂವಾರಿಯಾಗಿದೆ. ಉತ್ತಮ ಫಲಿತಾಂಶ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ದಾಖಲಿಸಿದೆ.

ಕಾರ್ಮೆಲ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ., ಬಿಬಿಎ, ಬಿಸಿಎ ಹಾಗೂ ಬಿಎ ಪದವಿ ಕೋರ್ಸ್ ಗಳನ್ನು ಹಂತ ಹಂತವಾಗಿ ಆರಂಭಿಸಿ ಹಲವಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ದಾರಿ ತೋರಿಸಿದೆ. ಇನ್ನೂ ಹಲವು ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣದ ಬಳಿಕ ಒಳ್ಳೆಯ ಉದ್ಯೋಗ ಸಿಕ್ಕಿದೆ. ಇನ್ನೂ ಕೆಲವರು ಸ್ವಂತ ಉದ್ಯೋಗವನ್ನು, ಇನ್ನು ಕೆಲವರು ಕುಟುಂಬ ಜೀವನವನ್ನು ಆರಂಭಿಸಿರುತ್ತಾರೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಈ ಸಂಸ್ಥೆ ದುಡಿಯುತ್ತಾ ಬಂದಿದೆ. ಸಮಾಜದಲ್ಲಿ ಎದುರಾಗುವ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎನ್ನುವ ನಿಟ್ಟಿನಲ್ಲಿ ಈ ಶಿಕ್ಷಣ ಸಂಸ್ಥೆ ಕಾರ್ಯನಿರ್ವಹಿಸುತ್ತಾ ಇದೆ.

ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ: ಕ್ರೀಡೆ, ವಿದ್ಯಾಭ್ಯಾಸ, ಪಾಠ, ಪಠ್ಯೇತರ ವಿಷಯ, ಬೇರೆ ಬೇರೆ ಸ್ಪರ್ಧೆಗಳು, ನೃತ್ಯ, ನಾಟಕ, ಯಕ್ಷಗಾನ ಕೊಳಲು ವಾದನ ಇನ್ನೂ ಹತ್ತು ಹಲವಾರು ವಿಷಯದಲ್ಲಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹುಟ್ಟಿಸುತ್ತಿದೆ. ಇಂತಹ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅವರನ್ನು ಹುರಿದುಂಬಿಸಿ ಪ್ರೋತ್ಸಾಹಿಸುವ ಶಿಕ್ಷಕರ ಬಳಗ ಕಾರ್ಮೆಲ್ ಕಾಲೇಜಿನಲ್ಲಿದೆ.
* 2015ರಲ್ಲಿ 3 ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ 3 ರಾಂಕ್ ಗಳನ್ನು ಪಡೆದ ಕೀರ್ತಿ ಕಾಲೇಜಿಗಿದೆ.
* ಕೇಂದ್ರದ ಉನ್ನತ ಶಿಕ್ಷಣ ಸಚಿವಾಲಯ, ಮಹಾತ್ಮ ಗಾಂಧಿ ರಾಷ್ಟ್ರೀಯ ಶಿಕ್ಷಣ ಮಂಡಳಿ ಆಯೋಜಿಸಿದ “ಒಂದು ಜಿಲ್ಲೆ ಒಂದು ಹಸಿರು” ಚಾಂಪಿಯನ್ ಪ್ರಶಸ್ತಿ
* 2020-21 ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ನಿಲಯ ಹಂತದಲ್ಲಿ ಉತ್ತಮ ಎನ್ಎಸ್ಎಸ್ ಕಾರ್ಯ ಕ್ರಮ ಅಧಿಕಾರಿ ಹಾಗೂ ಘಟಕ ಪ್ರಶಸ್ತಿ.
* 2021ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಹಾಗೂ ಕಾಲೇಜಿನ ಎನ್ಎಸ್ಎಸ್ ಘಟಕಕ್ಕೆ. ಈ ಪ್ರಶಸ್ತಿಗಳ ಗರಿಗಳು ಕಾರ್ಮೆಲ್ ಕಾಲೇಜಿನ ಕೀರ್ತಿಗೆ ಸಹಾಯಕವಾಗಿದೆ.
ವಿವಿಧ ಘಟಕಗಳು: ಹಲವಾರು ಘಟಕಗಳನ್ನು ಒಳಗೊಂಡ ಕಾರ್ಮೆಲ್ ಕಾಲೇಜ್ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮ, ಸೇವೆ, ಆರೋಗ್ಯ, ಕ್ರೀಡೆ, ಆಶ್ರಮದ ಭೇಟಿ, ಸ್ವಚ್ಛತೆ, ರಕ್ತದಾನ ಶಿಬಿರ, ಗ್ರಾಮದ ದತ್ತು ಸ್ವೀಕಾರ ಹೀಗೆ ಹಲವಾರು ಘಟಕಗಳಿಂದ ವಿದ್ಯಾರ್ಥಿಗಳು ತಮ್ಮಿಂದಾಗುವ ಸಹಾಯವನ್ನು ಸಮಾಜಕ್ಕೆ ಕೊಡುತ್ತಾ ಬಂದಿದ್ದಾರೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸಮಾಜದ ಬಗ್ಗೆ ಅರಿವು ಮೂಡುವಂತಾಗಿದೆ. ಆದ್ದರಿಂದ ಇಲ್ಲಿ ಕಲಿತ ವಿದ್ಯಾರ್ಥಿ /ವಿದ್ಯಾರ್ಥಿನಿಯರಲ್ಲಿ ಜೀವನವನ್ನು ಎದುರಿಸುವ ಸಾಮರ್ಥ್ಯ ಅವರಲ್ಲಿದೆ.
ಸೌಲಭ್ಯಗಳು ಏನೇನು ಇವೆ?
ಗ್ರಂಥಾಲಯ: ಕಾಲೇಜು ಎಲ್ಲಾ ರೀತಿಯ ಸುಸಜ್ಜಿತ ಸೌಲಭ್ಯಗಳನ್ನು ಹೊಂದಿದ್ದು, ಪಠ್ಯ ಹಾಗೂ ಪಠ್ಯೇತರ ವಿಷಯಕ್ಕೆ ಸಂಬಂಧಪಟ್ಟ ಗ್ರಂಥಾಲಯ ಕಾಲೇಜಿನಲ್ಲಿದ್ದು ವಿದ್ಯಾರ್ಥಿಗಳು E-Book ನ ಸೇವೆಯನ್ನು ಕೂಡ ಪಡೆಯಬಹುದಾಗಿದೆ.
ಕ್ರೀಡೆ: ಇನ್ ಡೋರ್ ಹಾಗೂ ಔಟ್ ಡೋರ್ ಕ್ರೀಡೆಯನ್ನು ವಿದ್ಯಾರ್ಥಿಗಳಿಗೆ ಆಡಲು ಅವಕಾಶವಿದೆ. ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿರುತ್ತಾರೆ.
ಸ್ಕಾಲರ್ಶಿಪ್ : ವಿದ್ಯಾರ್ಥಿಗಳಿಗೆ ಹಲವಾರು ರೀತಿಯ ಸ್ಕಾಲರ್ಶಿಪ್ ಕೊಡಲು ಕಾಲೇಜು ಹಾಗೂ ಸರ್ಕಾರಿ ಹಂತದಲ್ಲಿ ಸಿಗುವ ನಿಟ್ಟಿನಲ್ಲಿ ಪ್ರಯತ್ನಿಸುತ್ತದೆ.
ಕಂಪ್ಯೂಟರ್ ಕೋರ್ಸ್ ಗಳು:
ವಿದ್ಯಾರ್ಥಿಗಳಿಗೆ ಉದ್ಯೋಗವಕಾಶದ ನಿಟ್ಟಿನಲ್ಲಿ ವಿವಿಧ ರೀತಿಯ ಕಂಪ್ಯೂಟರ್ ಕೋರ್ಸ್ಗಳು Tally, Zoho Book, Data Analytics ಹಾಗೂ ಪಠ್ಯದ ವಿಷಯಕ್ಕೆ ಸಂಬಂಧಿಸಿದ ಮತ್ತು ಪಠ್ಯೇತರ ವಿಷಯಕ್ಕೆ ಸಂಬಂಧಿಸಿದ ಕೋರ್ಸ್ಗಳು ಬ್ಯೂಟಿಷಿಯನ್ ಫ್ಯಾಶನ್ ಡಿಸೈನಿಂಗ್ ರೀತಿಯ ಕೋರ್ಸ್ಗಳು ಇಲ್ಲಿ ನಡೆಯುತ್ತವೆ ಮಾತ್ರವಲ್ಲದೇ ಹೊಸ ವರ್ಷದಿಂದ ಹೊಸ ಕೋರ್ಸ್ ಗಳನ್ನು ನಾವು ಆರಂಭಿಸಲಿಕ್ಕಿದ್ದೇವೆ.
ಶೈಕ್ಷಣಿಕ ಪ್ರವಾಸ: ವಿದ್ಯಾರ್ಥಿಗಳಿಗೆ ಬೇರೆ ಬೇರೆ ಕೈಗಾರಿಕೋದ್ಯಮಗಳ ಬಗ್ಗೆ ಅರಿವು ಮೂಡುವಂತಹ, ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ದೊರೆಯುವಂತಹ ಶೈಕ್ಷಣಿಕ ಪ್ರವಾಹಗಳನ್ನು ಏರ್ಪಡಿಸಲಾಗುತ್ತದೆ.
ಉದ್ಯೋಗಾವಕಾಶ: ಕೆಲವು ಬ್ಯಾಂಕ್ ಗಳು ಕಂಪನಿಗಳು ವಿದ್ಯಾರ್ಥಿಗಳನ್ನು ತಮ್ಮ ಉದ್ಯೋಗಕ್ಕೆ ಆಯ್ಕೆ ಮಾಡಲು ಇಲ್ಲಿ ಬರುತ್ತಾರೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಇತರರಿಗೂ ಉದ್ಯೋಗವಕಾಶ ಸಿಕ್ಕಿದೆ ಎಂದು ಹೇಳಲು ಸಂತೋಷಪಡುತ್ತೇನೆ.
ಎನ್ಎಸ್ಎಸ್ ಘಟಕದ ವತಿಯಿಂದ adventure camp ಗೆ ಹೋಗಲು ಅವಕಾಶ:
ಗ್ರಾಮೀಣ ಪ್ರದೇಶದಲ್ಲಿ ಇರುವ ನಮ್ಮ ಕಾಲೇಜಿನ ಒಂದು ವಿದ್ಯಾರ್ಥಿ ನಿಗೆ ಹಿಮಾಚಲ ಪ್ರದೇಶದಲ್ಲಿ ನಡೆದ adventure ಕ್ಯಾಂಪ್ ನಲ್ಲಿ ಭಾಗವಹಿಸುವ ಸುಸಂದರ್ಭ ಒದಗಿ ಬಂತು.
ಫಲಿತಾಂಶ: 2020-21 ರ ಸಾಲಿನ ಬಿಬಿಎ, ಬಿಕಾಂ ನ ಎಲ್ಲಾ ವಿದ್ಯಾರ್ಥಿಗಳು ಪಾಸಾಗಿದ್ದು, ಪ್ರತಿ ವರ್ಷ ಉತ್ತಮ ಫಲಿತಾಂಶವನ್ನು ಕಾಲೇಜಿಗೆ ಕೊಡುತ್ತಾ ಬಂದಿದ್ದಾರೆ. ವಿದ್ಯಾರ್ಥಿಗಳು ಇಲ್ಲಿ ಬರುವಾಗ ಬಹಳ ಕಡಿಮೆ ಮಾರ್ಕ್ಸ್ ಪಡೆದು ಬಂದರು ಇಲ್ಲಿಂದ ಪದವಿ ಮುಗಿಸುವಾಗ ಉತ್ತಮ ಫಲಿತಾಂಶ ಪಡೆಯುತ್ತಾರೆ. ಈ ನಿಟ್ಟಿನಲ್ಲಿ ಶಿಕ್ಷಕ ವೃಂದದ ಪಾತ್ರ ಶ್ಲಾಘನೀಯ.
ಕಾರ್ಮೆಲ್ ಕಾಲೇಜಿಗೆ ಬರುವ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜೊತೆಗೆ ಅವರ ಸರ್ವತೋಮುಖ ಅಭಿವೃದ್ಧಿಗೆ ನಾವು ಶ್ರಮಿಸುತ್ತೇವೆ. ವಿದ್ಯಾರ್ಥಿಗಳು ಇಲ್ಲಿ ಬಂದು ತಮಗೆ ಸಿಗುವ ಎಲ್ಲಾ ಅವಕಾಶಗಳನ್ನು ಉಪಯೋಗಿಸಿಕೊಂಡು ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇನೆ. ಶಿಕ್ಷಣ ಹಾಗೂ ಮೌಲ್ಯಾಧಾರಿತ ಜೀವನವನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಮೆಲ್ ಡಿಗ್ರಿ ಕಾಲೇಜಿನ ಅಧ್ಯಾಪಕ ವೃಂದ ಸದಾ ದುಡಿಯುತ್ತದೆ

ಇತ್ತೀಚಿನ ಸುದ್ದಿ

ಜಾಹೀರಾತು