ಇತ್ತೀಚಿನ ಸುದ್ದಿ
ಜೀರೋ ಟ್ರಾಫಿಕ್ ಗೆ ಬ್ರೇಕ್; ಇನ್ನೇನಿದ್ದರೂ ಜಂಕ್ಷನ್ ಟು ಜಂಕ್ಷನ್ ಕ್ಲಿಯರೆನ್ಸ್ : ಮುಖ್ಯಮಂತ್ರಿ ಸೂಚನೆ
14/08/2021, 19:30
ಬೆಂಗಳೂರು(reporterkarnataka.com): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿವಿಐಪಿ ಸಂಸ್ಕೃತಿಗೆ ತಿಲಾಂಜಲಿ ಹಾಡಲು ಒಂದೊಂದು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಇದೀಗ ಜೀರೋ ಟ್ರಾಫಿಕ್ ನಿಲ್ಲಿಸುವಂತೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೋದ್ ಅವರಿಗೆ ಸೂಚನೆ ನೀಡಿದ್ದಾರೆ. ಈ ಕುರಿತು ಆದೇಶ ಕೂಡ ಹೊರಬಿದ್ದಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿಯವರು ಎಲ್ಲೇ ಪ್ರಯಾಣ ನಡೆಸಿದರೂ ಇನ್ನು ಮುಂದೆ ಜೀರೋ ಟ್ರಾಫಿಕ್ ವ್ಯವಸ್ಥೆ ಇರುವುದಿಲ್ಲ. ಅದರ ಬದಲಿಗೆ ಕೇವಲ ಜಂಕ್ಷನ್ ಟು ಜಂಕ್ಷನ್ ಕ್ಲಿಯರೆನ್ಸ್ ಇರುತ್ತದೆ.
ಸಮಾಜವಾದಿ ಹಿನ್ನೆಲೆಯಿಂದ ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾದ ತಕ್ಷಣ ತಾನು ಸಾಮಾನ್ಯ ಮನುಷ್ಯನಾಗಿ ಇರಲು ಇಚ್ಚಿಸುತ್ತೇನೆ ಎಂದು ತನ್ನ ಅಭಿಪ್ರಾಯವನ್ನು ಮಾಧ್ಯಮ ಮುಂದೆ ಹೇಳಿದ್ದರು. ರಾಜ್ಯ ಹಾಗೂ ಈ ದೇಶದ ಜನತೆ ಬಯಸುವುದು ಕೂಡ ಇದನ್ನೇ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ ತರಹ ಸಿಂಪಲ್ ಸಿಎಂ ಅನ್ನೇ ಜನರು ಲೈಕ್ ಮಾಡುತ್ತಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರು ಇತ್ತೀಚೆಗೆ ಅವರು ಮಂಗಳೂರಿಗೆ ಆಗಮಿಸಿದಾಗ ಅವರಿಗೆ ಜೀರೋ ಟ್ರಾಫಿಕ್ ಒದಗಿಸಲಾಗಿತ್ತು. ಇದರಿಂದ ಕೊಟ್ಟಾರ ಚೌಕಿಯಿಂದ ಆರಂಭಗೊಂಡು ಕುಳಾಯಿ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆ್ಯಂಬುಲೆನ್ಸ್ ಗಳು ಕೂಡ ಇದರಲ್ಲಿ ಸಿಕ್ಕಿ ಹಾಕಿಕೊಂಡಿದ್ದವು.