ಇತ್ತೀಚಿನ ಸುದ್ದಿ
ಯುವ ನ್ಯಾಯವಾದಿ ಮೇಲೆ ಪೊಲೀಸರ ಅಮಾನುಷ ಹಲ್ಲೆ: ವಕೀಲರಿಂದ ಭಾರೀ ಪ್ರತಿಭಟನೆ; ಎಸ್ಪಿ ಕಚೇರಿಗೆ ಖಾಕಿ ಸರ್ಪಗಾವಲು
01/12/2023, 18:52
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಫಿನಾಡಲ್ಲಿ ವಕೀಲರ ಮೇಲೆ ಪೊಲೀಸರ ಹಲ್ಲೆ ನಡೆಸಿರುವುದನ್ನು ವಿರೋಧಿಸಿ ಶುಕ್ರವಾರ ಚಿಕ್ಕಮಗಳೂರಿನ ವಕೀಲರು ಭಾರೀ ಪ್ರತಿಭಟನೆ ನಡೆಸಿದರು. ಇದರ ಪರಿಣಾಮವಾಗಿ ಎಸ್ಪಿ ಕಚೇರಿ ಸುತ್ತಲೂ ಖಾಕಿ ಸರ್ಪಗಾವಲು ಹಾಕಲಾಗಿತ್ತು.
ವಕೀಲರ ಸಂಘ ಆಶ್ರಮದಲ್ಲಿ ಕೋರ್ಟಿನಿಂದ ಮೆರವಣಿಗೆ ಹೊರಟ ನ್ಯಾಯವಾದಿಗಳು ಎಸ್ಪಿ ಕಚೇರಿ ಬಳಿ ಎಸ್ಪಿ ವಿರುದ್ಧ ಘೋಷಣೆ ಕೂಗಿದರು. ಎಸ್ಪಿ ಕಚೇರಿಗೆ 100ಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್ ಮಾಡಲಾಗಿತ್ತು. ಕೋರ್ಟಿನಿಂದ ಆಜಾದ್ ಪಾರ್ಕ್ ವೃತ್ತದವರಿಗೆ ವಕೀಲರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಆರೋಪಿಗಳನ್ನ ಬಂಧಿಸೋವರೆಗೂ ಹೋರಾಟ ಮುಂದುವರಿಸೋದಾಗಿ ತೀರ್ಮಾನ ಮಾಡಲಾಯಿತು.