ಇತ್ತೀಚಿನ ಸುದ್ದಿ
ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸುರಯ್ಯ ಅಂಜುಮ್ ಗೆಲುವು
08/02/2025, 11:02
![](https://reporterkarnataka.com/wp-content/uploads/2025/02/Screenshot_20250208_075812_WhatsApp.jpg)
ಬೆಂಗಳೂರು(reporterkarnataka.com): ಯುವ ಕಾಂಗ್ರೆಸ್ ಚುನಾವಣೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಯುವ ನಾಯಕಿ ಸುರಯ್ಯ ಅಂಜುಮ್ ಗೆಲುವು ಕಂಡಿದ್ದಾರೆ.
ಅವರು ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷೆಯಾಗಿ, ರಾಷ್ರ್ಟ್ರೀಯ ಯುವ ಕಾಂಗ್ರೆಸ್ ವಕ್ತಾರೆಯಾಗಿ ಕರ್ನಾಟಕ ರಾಜ್ಯ ದಾದ್ಯಂತ ಯುವ ನಾಯಕಿಯಾಗಿ ಚಿರಪರಿಚಿತರಾದ ಸುರಯ್ಯ ಅಂಜುಮ್ ಈ ಬಾರಿ ನಡೆದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ್ದರು. 5,800 ಮತಗಳ ಮೂಲಕ ಅವರು ಈ ಬಾರಿ ಕರ್ನಾಟಕ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿತರಾಗಿದ್ದಾರೆ.
ತನ್ನ ನೇರ ನುಡಿ ವಾಕ್ ಚಾತುರ್ಯದ ಮೂಲಕ ಗುರುತಿಸಿಕೊಂಡಿದ್ದಾರೆ.