11:54 PM Thursday14 - August 2025
ಬ್ರೇಕಿಂಗ್ ನ್ಯೂಸ್
ಕೇಂದ್ರದಿಂದ ಸ್ವಾತಂತ್ರ್ಯೋತ್ಸವದ ವಿಶಿಷ್ಠ ಕೊಡುಗೆ; ಉತ್ತರ ಕರ್ನಾಟಕಕ್ಕೆ ವಿಶೇಷ ಆರ್ಥಿಕ ವಲಯ ಘೋಷಣೆ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ; ಎಸ್ಐಟಿ ತನಿಖೆ ನಡೆಯುತ್ತಿರುವಾಗ ಸದನದಲ್ಲಿ ಪ್ರಸ್ತಾಪ ಸರಿಯಲ್ಲ:… ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್: ನಟ ದರ್ಶನ್​​, ಪವಿತ್ರಾ ಗೌಡ ಸಹಿತ 4… ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆ ರಾಜ್ಯದ ಸಮಸ್ಯೆಗೆ ಕಾರಣ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ Kodagu | ಮಡಿಕೇರಿ: ಅಸ್ಸಾಂ ಕಾರ್ಮಿಕರಿಂದ ಆಧಾರ್ ಕಾರ್ಡಿನ ದುರ್ಬಳಕೆ ಆರೋಪ ರಾಜ್ಯ ಸರಕಾರದ ವಿನೂತನ ಯೋಜನೆ: ವಿದೇಶದಲ್ಲಿ ವ್ಯಾಸಂಗ ಮಾಡುವವರಿಗೆ ಮಾಹಿತಿ ನೀಡಲು ಆ.… ಬಾಲ್ಯವಿವಾಹ ತಡೆಗಟ್ಟಲು ಸರ್ಕಾರದಿಂದ ಕಠಿಣ ಕ್ರಮ: ವಿಧಾನ ಸಭೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಮಶಾನ ಜಾಗ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ: ವಿಧಾನಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಬಂಡೀಪುರ: ಕಾಡಾನೆ ಜತೆ ಸೆಲ್ಫಿಗೆ ಹೋಗಿ ದಾಳಿಗೊಳಗಾಗಿದ್ದ ವ್ಯಕ್ತಿಗೆ 25 ಸಾವಿರ ರೂ.… ವಿಶ್ವ ವಿಖ್ಯಾತ ಮೈಸೂರು ದಸರಾ: ಗಜಪಡೆಯ ತೂಕ ಪರೀಕ್ಷೆ; ಯಾರ್ಯಾರು, ಎಷ್ಟೆಷ್ಟು ಕೆಜಿ?

ಇತ್ತೀಚಿನ ಸುದ್ದಿ

ಯೋಗ ವಿದ್ ಯೋಧ: ಸೋಮೇಶ್ವರ ದೇಗುಲದಲ್ಲಿ ಸಂಸದರ ನೇತೃತ್ವದಲ್ಲಿ ಯೋಗ ದಿನಾಚರಣೆ

21/06/2025, 23:22

ಚಿತ್ರ:ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಯೋಗ ವಿದ್ ಯೋಧ ಎಂಬ ಅಂತಾರಾಷ್ಟ್ರೀಯ ಯೋಗ ದಿನ ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಇಂದು ಸೋಮೇಶ್ವರ ದೇವಾಲಯದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು, ಸೋಮನಾಥನ ಆಶೀರ್ವಾದದಿಂದ ಯೋಗ ಕೂಡಿ ಬಂದರೆ ಎಲ್ಲವೂ ಸಫಲವಾಗುತ್ತದೆ, ನಾವು ಮಾಡುವ ಪ್ರಯತ್ನ ಮುಖ್ಯವಾಗಿದೆ. ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ಯೋಗವನ್ನು ಜಗದಗಲಕ್ಕೆ ಕೊಂಡೊಯ್ಯಿದಕ್ಕೆ ಅಭಿನಂದಿಸೋಣ ಎಂದರು.
ಈ ದಿನ ಒಂದು ದಿನಕ್ಕೆ ಸಿಮಿತವಾಗದೆ ನಮ್ಮ ತುಳುನಾಡನ್ನು ಜಗತ್ತಿದೆ ಪರಿಚಯಮಾಡಿಕೊಡುತಾಗಲಿ ಎಂದು ಅವರು ನುಡಿದರು.
ನಮ್ಮೆಲರ ಆರಾಧ್ಯ ಮೂರ್ತಿ ಸೋಮೇಶ್ವರನ ಆಶೀರ್ವಾದವನ್ನು ಬೇಡುತ್ತ ಯೋಗ ವಿಥ್ ಯೋಧ ಎಂಬ ಕಾರ್ಯಕ್ರಮವನ್ನು ಕಳೆದ ಬಾರಿ ಪ್ರಾರಂಭಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಗೆ ಈ ರಾಜ್ಯದ ಅಥವಾ ದೇಶದ ಎಲ್ಲ ಆಯಾಮಗಳಿಂದ ನಂಬರ್ 1 ಆಗುವಂತಹ ಯೋಗ್ಯತೆಯಿದೆ. ಆ ಯೋಗ್ಯತೆಗೆ ಯೋಗ ಕೂಡಿ ಬರಬೇಕಾದರೆ ಜನರು ಮನಸು ಮಾಡಬೇಕು. ನಮ್ಮೆಲರ ಸಂಕಲ್ಪ ಶಕ್ತಿ ಸರಕಾರಕ್ಕೆ ಸರಕಾರೇತರ ಸಂಸ್ಥೆಗಳಿಗೆ ತಲುಪಬೇಕು. ಆಗ ಮಾತ್ರ ಕರಾವಳಿ ಕರ್ನಾಟಕ. ತುಳುನಾಡು ಇದು ಒಂದು ಸಾಧ್ಯತೆಗಳ ಸಾಗರ ಎಂದು ನಂಬಿದ್ದು ಸಾಧ್ಯತೆಗಳನ್ನು ಸಹಕಾರಗೊಳಿಸಲು ಎಲ್ಲರ ಸಂಕಲ್ಪ ಶಕ್ತಿ ಅಗತ್ಯವಿದ್ದು ಭಗವಂತನ ಆಶೀರ್ವಾದದ ಅಗತ್ಯವಿದೆ ಎಂದರು.
ಆ ಕಾರಣಗಳಿಂದ ಯೋಗ ವಿಥ್ ಯೋಧ ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದು ಕರಾವಳಿ ಭಾಗದ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಮಾಡಬೇಕೆಂಬ ಯೋಚನೆಯಿದ್ದು ಕಳೆದ ಬಾರಿ ಸಸಿಹಿತ್ಲು ವಿನಲ್ಲಿ ನಡೆಸಿದ್ದೇವೆಂದು ಹೇಳಿದರು. ಸಸಿಹಿತ್ಲು ಏಷ್ಯಾ ಖಂಡದಲ್ಲಿ ಅಡ್ವೆಂಚರ್ ಸ್ಪೋರ್ಟ್ಸ್‌ಗೆ ಅತ್ಯಂತ ಬೆಸ್ಟ್ ಲೊಕೇಶನ್ ಎಂದು ಹೇಳಿದ್ದು ಆದರೆ ಈ ಬಾರಿ ಸೋಮನಾಥ ಕ್ಷೇತ್ರವನ್ನು ಗುರುತಿಸಿದ್ದು ಯಾಕೆಂದರೆ ಗುಜರಾತಿನ ಸೋಮನಾಥ ಕ್ಷೇತ್ರದಲ್ಲಿ ಭಾರತದ ಪುನರುತ್ಥಾನವಾಗಿದೆ ಎಂದರು.
ಸರದಾರ್ ವಲ್ಲಭಾಯಿ ಪಟೇಲ್ ಅವರು ಭಾರತದ ಸ್ವತಂತ್ರ ವಾದ ಸಂದರ್ಭದಲ್ಲಿ ಗುಜರಾತಿನ ಸೋಮನಾಥ ಕ್ಷೇತ್ರವನ್ನು ಅಭಿವೃದ್ಧಿಪಡಿಸಿ ದರು.ಆ ಸೋಮನಾಥ ಆಶೀರ್ವಾದದಿಂದ ಈ ದೇಶ ಅಖಂಡವಾಗಿದೆ ಎಂದು ಹೇಳಿದರು.
ಈ ದೇಶ ಸ್ವಾತಂತ್ರದ ಸಂದರ್ಭದಲ್ಲಿ ಒಂದು ಪುನರುತ್ಥಾನದ ಪ್ರಕ್ರಿಯೆ ಆ ಗುಜರಾತಿನ ಸೋಮನಾಥ ಕ್ಷೇತ್ರದಿಂದ ಪ್ರಾರಂಭವಾಗಿದ್ದು ಅದೇ ರೀತಿ ಗುಜರಾತಿನ ಸೋಮನಾಥ ಕ್ಷೇತ್ರದಿಂದ ಕರಾವಳಿಯ ಸೋಮನಾಥನವರೆಗೆ ಹೇಗೆ ಹೆಮ್ಮೆಯ ಪ್ರಧಾನ ಮಂತ್ರಿಯನ್ನು ಆಶೀರ್ವಾದ ಮಾಡಿದರೋ ಅದೇ ರೀತಿ ಸೋಮೇಶ್ವರದ ಸೋಮನಾಥ ಈ ಕರಾವಳಿ ಕರ್ನಾಟಕದ ತುಳುನಾಡಿನ ಮಂಗಳೂರಿನ ಸಾಧ್ಯತೆಯನ್ನು ಅನಾವರಣ ಗೊಳಿಸಲು ನಮಗೆಲ್ಲರಿಗೆ ಶಕ್ತಿಯನ್ನು, ಪ್ರೇರಣೆಯನ್ನು ನೀಡಲಿ ಮನಸಿಗೆ ಸಂಕಲ್ಪ ಮಾಡುವಂತೆಯಾಗಲಿ, ಕರಾವಳಿ ಕರ್ನಾಟಕ ರಾಜ್ಯದಲ್ಲಿ ನಂಬರ್ ಒನ್ ಸ್ಥಾನ ಪಡೆಯುವಂತಾಗಲಿ. ಆ ಯೋಗ್ಯತೆ ನಮ್ಮಲಿದೆ ಎಂದು ಹೇಳಿದರು.
ಬಳಿಕ ಶ್ರದ್ಧಾ ಸಂದೇಶ್ ರೈ ಯೋಗಾಭ್ಯಾಸ ಮಾಡಿದರು.
ಸೋಮನಾಥ ದೇವಸ್ಥಾನ ವ್ಯವಸ್ಥಾಪಕರು ರವೀಂದ್ರ ರೈ, ಟ್ರಸ್ಟ್ ಸದಾನಂದ ಸುವರ್ಣ, ಸತೀಶ್ ಕುಂಪಲ, ರವೀಂದ್ರನಾಥ, ಸದಾನಂದ ಸುವರ್ಣ, ದೀಪಕ್ ಪಿಲಾರ್ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು