1:13 AM Monday6 - April 2026
ಬ್ರೇಕಿಂಗ್ ನ್ಯೂಸ್
Kodagu | ನಟಿ ರಶ್ಮಿಕಾ ಮಂದಣ್ಣಗೆ ತಂದೆಯಿಂದ ವಿರಾಜಪೇಟೆಯ “ಸೆರಿನಿಟಿ ಕಾಟೇಜ್” ಗಿಫ್ಟ್ ಮಧ್ಯಪ್ರಾಚ್ಯ ಯುದ್ಧ: ಕೊಡಗಿನಲ್ಲಿ ಸಿಲುಕಿದ ಇರಾನಿ ದಂಪತಿ; ಪಾಸ್‌ಪೋರ್ಟ್ ಆತಂಕ ಬಾಗಲಕೋಟೆ ಉಪ ಚುನಾವಣೆ | ಬಿಜೆಪಿ ಅಭ್ಯರ್ಥಿ ವಿರುದ್ಧ ಕರಪತ್ರ ಹಂಚಿಕೆ: ಇಬ್ಬರು… ಮುಖ್ಯಮಂತ್ರಿ ಸಿದ್ದರಾಮಯ್ಯ ನಿದ್ದೆಗೆಡಿಸಿದ ಉಪ ಚುನಾವಣೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ Bangalore | ಅಡುಗೆ ಅನಿಲ ದಾಸ್ತಾನು ಕೊರತೆ ಇಲ್ಲ: ವದಂತಿಗಳಿಗೆ ಕಿವಿಗೊಡಬೇಡಿ: ಡಿಸಿ… ಮಂಜೇಶ್ವರ ದಲ್ಲಿ ಸಿದ್ದರಾಮಯ್ಯ ಅಬ್ಬರದ ಪ್ರಚಾರ | ಪ್ರಧಾನಿ ಮೋದಿ ಅವರಿಂದ ಆಹಾರ… ಕೇರಳ ಚುನಾವಣೆಗೆ ಕರ್ನಾಟಕದ ಹಣ?: ತಿರುವನಂತಪುರದಲ್ಲಿ ಕಂತೆ ಕಂತೆ ನೋಟು ಸಮೇತ ಸಿಕ್ಕಿಬಿದ್ದ… ಚಾರಣಕ್ಕೆ ತೆರಳಿ 4 ದಿನಗಳಿಂದ ನಾಪತ್ತೆಯಾಗಿದ್ದ ಕೇರಳದ ಟೆಕ್ಕಿ ಶರಣ್ಯ ಪತ್ತೆ ಸಿದ್ದರಾಮಯ್ಯ ಬಗ್ಗೆ ಪ್ರತಾಪ್ ಸಿಂಹ ನೀಡಿರುವ ಹೀನಾಯ ಹೇಳಿಕೆ ಬಿಜೆಪಿಯ ನೀಚ ರಾಜಕಾರಣ… ಎಸ್ಸೆಸ್ಸೆಲ್ಸಿ ಗ್ರೇಡಿಂಗ್ ಪದ್ಧತಿಗೆ ರಾಜ್ಯಪಾಲರು ವಿರೋಧ: ನಾಳೆ ರಾಜಭವನಕ್ಕೆ ಕರವೇ ಮುತ್ತಿಗೆ

ಇತ್ತೀಚಿನ ಸುದ್ದಿ

ಯೇನಪೊಯ ರಿಸರ್ಚ್ ಸೆಂಟರ್ ಫಾರ್ ಫೈನಾನ್ಸ್ ಆಂಡ್ ಆ್ಯಂಟರ್‌ಪ್ರಿನರ್‌ಶಿಪ್ ಡೆಲವಪ್‌ಮೆಂಟ್ ನಿಂದ 2 ದಿನಗಳ ರಾಷ್ಟ್ರೀಯ ಕಾರ್ಯಾಗಾರ

18/05/2024, 23:05

ಮಂಗಳೂರು(reporterkarnataka.com) ಯೇನಪೊಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸಯನ್ಸ್, ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ಯೇನಪೊಯ ರಿಸರ್ಚ್ ಸೆಂಟರ್ ಫಾರ್ ಫೈನಾನ್ಸ್ ಆಂಡ್ ಆ್ಯಂಟರ್‌ಪ್ರಿನರ್‌ಶಿಪ್ ಡೆಲವಪ್‌ಮೆಂಟ್ ವತಿಯಿಂದ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.
ಕಾಂಪ್ರಹೆನ್ಸಿವ್ ಸ್ಟ್ರಾಟಜೀಸ್ ಆ್ಯಂಡ್ ಎಕ್ಸ್‌ಪರ್ಟ್ ಗೈಡೆನ್ಸ್ ಫಾರ್ ಪಬ್ಲಿಕೇಶನ್ ಇನ್ ಟಾಪ್ ಟೈಯರ್ ಜರ್ನಲ್ಸ್- ರಿಸರ್ಚ್ ಡಿಸೈನ್ ಆಂಡ್ ಮಲ್ಟಿವೇರಿಯೇಟ್ ಅನಾಲಿಸಿಸ್- ಹ್ಯಾಂಡ್ಸ್ ಆನ್ ಪ್ರ್ಯಾಕ್ಟೀಸ್ ವಿಷಯದಲ್ಲಿ ಕಾರ್ಯಾಗಾರ ಆಯೋಜಿಸಲಾಯಿತು. ನಬಾರ್ಡ್‌ನ ಘಟಕವಾಗಿರುವ ಬ್ಯಾಂಕರ್ಸ್ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಡೆವಲಪ್‌ಮೆಂಟ್ ಜಂಟಿ ನಿರ್ದೇಶಕ ವಿ.ಎಸ್.ಬಾಲಸುಬ್ರಮಣಿಯನ್ ಅವರು ಉದ್ಘಾಟಿಸಿದರು. ಕೋಯಿಕ್ಕೋಡ್ ಐಐಎಂನ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಜೇಶ್ ಎಸ್. ಮುಖ್ಯ ಅತಿಥಿಯಾಗಿದ್ದರು. ಪ್ರಾಂಶುಪಾಲ ಪ್ರೊ. ಅರುಣ್ ಭಾಗವತ್ ಅವರು ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲರಾದ ಡಾ. ಶರೀನಾ ಪಿ., ಡಾ. ಜೀವನ್ ರಾಜ್, ಯೆನ್‌ರಿಫೈನ್ಡ್ ಸಂಯೋಜಕ ಡಾ. ನಿಯಾಝ್ ಪನಕಜೆ ಉಪಸ್ಥಿತರಿದ್ದರು.
ಸಹಾಯಕ ಪ್ರಾಧ್ಯಾಪಕ ಡಾ. ಪ್ರಶಾಂತ್ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಮಹಮ್ಮದ್ ಶಾಹಿದ್ ವಂದಿಸಿದರು.
ಸಮಾರೋಪ ಸಮಾರಂಭದಲ್ಲಿ ಪ್ರಾಂಶುಪಾಲರು ಕಾರ್ಯಾಗಾರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು
ಸಂಶೋಧನಾ ಸಹಾಯಕ ಡಾ. ಅಭಿನಂದನ್ ಕುಲಾಲ್ ಅವರ ಉಸ್ತುವಾರಿಯಲ್ಲಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಕೇರಳ, ಗೋವಾ, ಪಾಂಡಿಚೇರಿ, ತಮಿಳುನಾಡು, ಕೋಲ್ಕತ್ತಾ ಮೊದಲಾದ ಕಡೆಗಳ 102 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಡಾ. ಶಕೀರಾ ಇರ್ಫಾನ್, ಸ್ವಾಗತಿಸಿದರು.
ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥೆ ನೀಕ್ಷಿತಾ ಶೆಟ್ಟಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು