6:59 PM Monday15 - December 2025
ಬ್ರೇಕಿಂಗ್ ನ್ಯೂಸ್
ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ…

ಇತ್ತೀಚಿನ ಸುದ್ದಿ

ಎಲ್ಲೆಂದರಲ್ಲಿ ರಸ್ತೆ ಅಗೆತ: ಖಾಸಗಿ ಸಿಟಿ ಬಸ್ ಸಂಚಾರ ಶುರು; ದಾರಿ ಯಾವುದಯ್ಯಾ ಸ್ಮಾರ್ಟ್ ಸಿಟಿಗೆ? 

01/07/2021, 07:02

ಮಂಗಳೂರು(reporterkarnataka news): ಕೊರೊನಾ ಎರಡನೇ ಅಲೆಯ ಅರ್ಭಟದ ಹಿನ್ನೆಲೆಯಲ್ಲಿ ಲಾಕ್ ಡೌನ್ ಹೇರಿದ ಪರಿಣಾಮ ಸುಮಾರು ಒಂದು ತಿಂಗಳಿನಿಂದ ಸ್ಥಗಿತಗೊಂಡಿರುವ ಸಿಟಿ ಬಸ್ ಸಂಚಾರ ಇಂದಿನಿಂದ ಆರಂಭಗೊಂಡಿದೆ. ಬಸ್ ಸಂಚಾರವೇನು ಶುರುವಾಯಿತು ಅಂತ ನಗರಕ್ಕೆ ಆಗಮಿಸಿದವರಿಗೆ ಒಂದು ಕ್ಷಣ ಶಾಕ್ ಆಗುವುದು ಖಂಡಿತಾ. ಯಾಕೆಂದರೆ ದಾರಿ ಯಾವುದಯ್ಯಾ ಮಂಗಳೂರಿಗೆ ಎನ್ನುವ ಪರಿಸ್ಥಿತಿ ಉದ್ಭವಿಸಿದೆ.

ಸ್ಮಾರ್ಟ್ ಸಿಟಿ ಯೋಜನೆ ಹೆಸರಿನಲ್ಲಿ ನಗರಾದ್ಯಂತ ರಸ್ತೆಯನ್ನು ಅಗೆದು ಹಾಕಲಾಗಿದೆ. ನಗರದ ಆಯಕಟ್ಟಿನ ಪ್ರದೇಶವಾದ ಲೈಟ್ ಹೌಸ್ ಹಿಲ್ ರೋಡ್, ಬಂಟ್ಸ್ ಹಾಸ್ಟೆಲ್ ರೋಡ್, ಬೆಸೆಂಟ್ ರಸ್ತೆ, ಡೊಂಗರಕೇರಿ ರಸ್ತೆ ಇವೆಲ್ಲ ಕಡೆ ರಸ್ತೆ ಮರು ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಇದು ನಗರದ ಹೃದಯಭಾಗವಾಗ ಹಂಪನಕಟ್ಟೆ ಪ್ರದೇಶವನ್ನು ಸಂಪರ್ಕಿಸುವ ರಸ್ತೆ ಆಗಿದೆ. ಇಂದಿನಿಂದ ಆರಂಭವಾದ ಸಿಟಿ ಬಸ್, ಸರ್ವಿಸ್ ಬಸ್, ಖಾಸಗಿ ವಾಹನಗಳು ಈ ರಸ್ತೆಯ ಮೂಲಕವೇ ಸಂಚರಿಸಬೇಕು. ಅದಲ್ಲದೆ ಬಸ್ ಆರಂಭವಾಗುತ್ತಿದ್ದಂತೆ ಕೊರೊನಾ ಲಸಿಕೆ ಹಾಕಿಸುವವರು, ಇತರ ವೈದ್ಯಕೀಯೋಪಚಾರ ಪಡೆಯಲು ಬಯಸುವವರು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಆಗಮಿಸುತ್ತಾರೆ. ಅದಲ್ಲದೆ ಜಾಲಿ ರೈಡ್ ಹೋಗುವವರ ಸಂಖ್ಯೆಯೂ ಬಹಳಷ್ಟಿದೆ. ಇವೆಲ್ಲದರ ಪರಿಣಾಮವಾಗಿ ಟ್ರಾಫಿಕ್ ಕಿರಿಕಿರಿ ಉಂಟಾಗಲಿದೆ.

ಜಿಲ್ಲೆಯಲ್ಲಿ ನಾಳೆಯಿಂದ ಸಂಜೆ 5 ಗಂಟೆ ವರೆಗೆ ಅಂಗಡಿ ಮುಂಗಟ್ಟು ತೆರೆಯಲಿದೆ. ಮಾಲ್, ಥಿಯೇಟರ್, ಪಬ್, ಬಾರ್, ಹೋಟೆಲ್ ಹೊರತುಪಡಿಸಿ ಎಲ್ಲ ವ್ಯವಹಾರ ಆರಂಭವಾಗಲಿದೆ. ಹೋಟೆಲ್,  ಬಾರ್ ನಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ ಸಿಗಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು