5:31 AM Thursday16 - January 2025
ಬ್ರೇಕಿಂಗ್ ನ್ಯೂಸ್
ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ…

ಇತ್ತೀಚಿನ ಸುದ್ದಿ

ಎಲ್ಲೆಂದರಲ್ಲಿ ಬಳಸಿ ಎಸೆದ ಮಾಸ್ಕ್ ಗಳನ್ನು ಸಂಗ್ರಹಿಸುವ ಶಿವದಾಸನ್ !: ಇದು ಯಾಕೆ ಗೊತ್ತೇ? ಮುಂದಕ್ಕೆ ಓದಿ…

01/07/2021, 07:27

ಮಲಪುರಂ(reporterkarnataka news):  ಕೆಲವರು ಪ್ರಚಾರಕ್ಕಾಗಿ ಸಮಾಜ ಸೇವೆ ಮಾಡಿದರೆ, ಇನ್ನೂ ಕೆಲವರ ರಕ್ತದಲ್ಲೇ ಸಮಾಜ ಸೇವೆ ಗುಣ ಬಂದಿರುತ್ತದೆ. ಇವರಿಗೆ ಯಾವುದೇ ಪ್ರಚಾರ ಬೇಕಾಗಿಲ್ಲ. ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಲೇ ಇರುತ್ತಾರೆ. ಅಂಥವರಲ್ಲೊಬ್ಬರು ಕೆ.ಬಿ. ಶಿವದಾಸನ್.!


ಕೇರಳದ ಮಲ್ಲಪುರ ಜಿಲ್ಲೆಯ ಚಂಗರಾಮ್ ಕುಲಂ ಪಟ್ಟಣದ ಮುಕ್ಕುತ್ತಲದವರು ಈ ಶಿವದಾಸನ್. ಬಡ, ದೀನ ದಲಿತರಿಗಾಗಿ ಇವರು ಪ್ರತಿದಿನ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಯಾವುದೇ ಸಂಘಟನೆಯ, ಸಂಘ – ಸಂಸ್ಥೆಗಳ ಬೆಂಬಲವಿಲ್ಲದ ವೈಯಕ್ತಿಕ ನೆಲೆಯಲ್ಲಿ ತಾನೇ ಕೈಯಿಂದ ಹಣ ಹಾಕಿ ಸಮಾಜ ಸೇವೆ ಮಾಡುತ್ತಾರೆ. ಲಾಕ್ ಡೌನ್ ಸಮಯದಲ್ಲಿ ಆಹಾರ ಕಿಟ್ ವಿತರಿಸಿದ್ದಾರೆ. ಇದೀಗ ಲಾಕ್ ಡೌನ್ ತೆರವಾಗುತ್ತಿದ್ದಂತೆ ಜನರು ಬಳಸಿ ಎಲ್ಲೆಂದರಲ್ಲಿ ಎಸೆದ ಮಾಸ್ಕ್ ಗಳನ್ನು ಸಂಗ್ರಹಿಸಿ ಅದನ್ನು ನಾಶ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.


ಶಿವದಾಸನ್ ಅವರು ಮೊದಲಿಗೆ ಈ ಕೆಲಸವನ್ನು ತನ್ನ ಮನೆ ಸುತ್ತಮುತ್ತಲಿನ ಪ್ರದೇಶದಿಂದಲೇ ಆರಂಭಿಸಿದ್ದಾರೆ. ಪೊನ್ನಾಣಿ ತಾಲೂಕಿನ ನನ್ನಮುಕ್ಕು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮುಕ್ಕುತ್ತಲ ಪ್ರದೇಶದಲ್ಲಿ ಬಳಸಿ ಎಸೆದ ಮಾಸ್ಕ್ ಗಳನ್ನು ಸಂಗ್ರಹಿಸಿ ಅದನ್ನು ಜನವಸತಿ ಇಲ್ಲದ ಪ್ರದೇಶಕ್ಕೆ ಕೊಂಡೋಗಿ ಬೆಂಕಿ ಹಚ್ಚಿ ನಾಶ ಮಾಡುವ ಕೆಲಸ ಮಾಡುತ್ತಿದ್ದಾರೆ.

ಎಲ್ಲೆಂದರಲ್ಲಿ ಎಸೆದ ಮಾಸ್ಕ್ ಗಳನ್ನು ನಾಯಿ, ಬೆಕ್ಕುಗಳು ಮೂಸಿ ಅದರ ಮೂಲಕ ಕೊರೊನಾ ಹರಡುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ಎಸೆದ ಮಾಸ್ಕ್ ಗಳನ್ನು ಸಂಗ್ರಹಿಸಿ ನಾಶ ಮಾಡುವ ಕೆಲಸ ಮಾಡುತ್ತಿದ್ದೇನೆ ಎಂದು ರಿಪೋರ್ಟರ್ ಕರ್ನಾಟಕ ಜತೆ ಮಾತನಾಡಿದ ಶಿವದಾಸನ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು