1:34 AM Monday30 - June 2025
ಬ್ರೇಕಿಂಗ್ ನ್ಯೂಸ್
ಕವಿಕಾದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ: ಇಂಧನ… Kodagu Crime | ಸುಳ್ಳು ಕೊಲೆ ಕೇಸ್ ಮೂಲಕ ಅಮಾಯಕ ಜೈಲಿಗೆ: ಇನ್ಸ್​ಪೆಕ್ಟರ್,… ಜೆಡಿಎಸ್ ಇನ್ನೊಬ್ಬರ ಹೆಗಲ ಮೇಲೆ ಕೈ ಹಾಕೊಂಡೇ ಅಧಿಕಾರಕ್ಕೆ ಬರಬೇಕು, ಸ್ವಂತ ಶಕ್ತಿಯಿಂದ… Karnataka CM | ಸರಕಾರ 5 ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ: ಮೈಸೂರಿನಲ್ಲಿ ಸಿಎಂ… ಮಾಂಸಕ್ಕಾಗಿ ಜಿಂಕೆ ಕೊಲ್ಲುತ್ತಿದ್ದ ಪಾಪಿಯ ಬಂಧನ: 10 ಜಿಂಕೆ,1 ಕಾಡು ಹಂದಿ ಮಾಂಸ,… Shivamogga | ಯುವತಿಗೆ ಲೈಂಗಿಕ ಕಿರುಕುಳ: ಮೆಗ್ಗಾನ್ ಆಸ್ಪತ್ರೆ ವೈದ್ಯ ಡಾ.ಅಶ್ವಿನ್ ಹೆಬ್ಬಾರ್… Chikkamagaluru | 3 ದಿನಗಳು ಕಳೆದರೂ ನಾಪತ್ತೆಯಾದ ಫಾರೆಸ್ಟ್ ಗಾರ್ಡ್ ಪತ್ತೆ ಇಲ್ಲ:… ಸಿದ್ದರಾಮಯ್ಯರಿಗೆ ಅಂಬೇಡ್ಕರ್ ಸಂವಿಧಾನ ಬೇಕಾ, ಇಂದಿರಾ ಗಾಂಧಿ ಸಂವಿಧಾನ ಬೇಕಾ: ಬಸವರಾಜ ಬೊಮ್ಮಾಯಿ… Mandya | ಕಾವೇರಿ ಜಲಾಯನ ಪ್ರದೇಶದಲ್ಲಿ ವ್ಯಾಪಕ ಮಳೆ: ಹ ಕೆಆರ್ ಎಸ್… ವಿಜೃಂಭಣೆ ರಭಸದಲ್ಲಿ ದಸರಾದ ಚಾರಿತ್ರಿಕ‌ ಮಹತ್ವ ಮರೆಯಾಗಬಾರದು: ಸೆ. 22ರಂದು ದಸರಾಕ್ಕೆ ಚಾಲನೆ:…

ಇತ್ತೀಚಿನ ಸುದ್ದಿ

ಎಲ್ಲಾ ಗಂಡಸರೂ ಹೀಗೇನಾ? ಅಥವಾ ನಮ್ಮದೊಂದು ಮಾಸ್ಟರ್ ಪೀಸಾ!

30/11/2024, 23:16

ರಾಜೇಶ್ವರಿ ಕುಮಾರ್ ರಾವ್

info.reporterkarnataka@gmail.com

ಮದುವೆಗೆ ಗಂಡು ನೋಡುವಾಗ ಶಿವಾನಿ ಯಾವುದೇ ಉತ್ಸಾಹ ತೋರುತ್ತಿರಲಿಲ್ಲ. ನಾನಿನ್ನೂ ಓದಬೇಕು, ಕೆಲಸದಲ್ಲಿ ಸೆಟ್ಲ್ ಆಗಬೇಕೂಂತ ಒಂದೇ ರಾಗ. ಪ್ರಾಯ ನಿಲ್ಲುತ್ತದೆಯೇ?ನೋಡು ನೋಡುತ್ತಿದ್ದಂತೆಯೇ ಇಪ್ಪತ್ತೈದನೆಯ ವರ್ಷದ ಹುಟ್ಟಿದ ಹಬ್ಬವನ್ನು  ಆಚರಿಸಿದಾಗ ಶುಭಾಳ ಗೆಳತಿಯರು”ಏನೇ,ಮಗಳಿಗೆ ಮದುವೆ ಮಾಡೋ ಆಲೋಚನೆ ಇಲ್ವಾ?ವರ್ಷ ವರ್ಷವೂ ಬರೀ ಬರ್ತ್ ಡೇ ಕೇಕ್ ತಿನ್ನಿಸ್ತೀ.ಮದುವೆ ಊಟ ಯಾವಾಗ?”ಎಂದು ಹೇಳಿದಾಗ ಶುಭಾ ಏನೋ ಕಾರಣ ಹೇಳಿ ಮಾತು ಮರೆಸಿದಳು. ಆದರೂ ರಾತ್ರಿಯೆಲ್ಲಾ ಅದೇ ಯೋಚನೆ. ಶಿವಾನಿ ಆ ವಿಷಯ ಎತ್ತಿದರೆ ಮುಖ ಸಿಂಡರಿಸುತ್ತಾಳೆ. ಹೆಚ್ಚಿಗೆ ವಿವರಣೆ ಕೇಳಿದರೆ ಆ ಜಾಗ ಖಾಲಿ ಮಾಡಿ ಕೋಣೆಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಾಳೆ. ಅವಳ ಅಪ್ಪ ಗಣೇಶನಂತೂ ಶಿವಾನಿಯ ಪಕ್ಷ ಹಿಡಿದೇ ಮಾತನಾಡುತ್ತಾನೆ.”ಈಗೇನು ಮದುವೆಗೆ ಅವಸರ? ನಾವು ಮದುವೆಯಾಗಿ ಲೋಕೋದ್ಧಾರ ಮಾಡಿದ್ದು ಅಷ್ಟರಲ್ಲೇ ಇದೆ. ಅವಳಿಗೆ
ಬೇಕಾದಾಗ ಮಾಡಿಕೊಳ್ಳಲಿ” ಎಂಬ ತಲೆಬುಡವಿಲ್ಲದ ಉಡಾಫೆಯ ಮಾತು. ಶುಭಾಳಿಗೆ ತಲೆಚಚ್ಚಿಕೊಳ್ಳಬೇಕು ಎನಿಸುತ್ತದೆ. ಎಲ್ಲಾ ಗಂಡಸರೂ ಹೀಗೇನಾ? ಅಥವಾ ನಮ್ಮದೊಂದು ಮಾಸ್ಟರ್ ಪೀಸಾ! ಮರುದಿನ ಭಾನುವಾರ ರಾತ್ರಿ,ಶಿವಾನಿಯ ಗೆಳತಿಯರು ಯಾವುದೋ ರೆಸಾರ್ಟಿನಲ್ಲಿ ಸ್ಪೆಷಲ್ ಪಾರ್ಟಿ ಇಟ್ಟುಕೊಂಡಿದ್ದರು.ಶಿವಾನಿಯನ್ನು ಕರೆದೊಯ್ಯಲು ಅವಳ ಗೆಳೆಯ ರಿಶಿ ಬಂದಿದ್ದ. ಶುಭಾಳ ಆತಂಕವನ್ನೂ ಲೆಕ್ಕಿಸದೆ ಮಿನಿಡ್ರೆಸ್ ಧರಿಸಿದ ಶಿವಾನಿ ಬೈಕ್ ಏರಿ, ಬಾಗಿಲಲ್ಲೇ ನಿಂತು ನೋಡುತ್ತಿದ್ದ ಶುಭಾಗೆ ಕೈಬೀಸಿ ಹೊರಟು ಹೋದಳು. ಗಣೇಶ ಟೀವೀ ನ್ಯೂಸ್ ನೋಡುವುದರಲ್ಲಿ ತಲ್ಲೀನನಾಗಿದ್ದ. ಯಾವಾಗ ಬರುತ್ತಾಳೆ,ಜೊತೆಗೆ ಇನ್ಯಾರು ಇರುತ್ತಾರೆ ಒಂದೂ ಗೊತ್ತಿಲ್ಲ. ಅಂತೂ ಆತಂಕದಿಂದಲೇ ಬೆಳಗಾಯಿತು. ರಿಶಿಯ ಬೈಕ್ ಮನೆಯಮುಂದೆ ನಿಂತಾಗ ಮಗಳನ್ನು ಸಮಸ್ಥಿತಿಯಲ್ಲಿ ನೋಡಿದ ಶುಭಾಳಿಗೆ ಹೋದಜೀವ ಬಂದಂತಾಯ್ತು.”ಅಮ್ಮಾ, ತುಂಬಾ ನಿದ್ದೆ ಬರ್ತಾ ಇದೆ. ಮದ್ಯಾಹ್ನದ ವರೆಗೆ ನನ್ನನ್ನು ಎಬ್ಬಿಸಬೇಡ.” ಎಂದಳು ಕೋಣೆಯ ಬಾಗಿಲುಜಡಿದು ಒಳಗೆ ಸೇರಿಕೊಂಡಳು. ಶುಭಾಳಿಗೆ ಹುಚ್ಚು ಹಿಡಿದಂತಾಗಿದೆ. ಕಾಲ ಇಷ್ಟೂ ಕೆಟ್ಟುಹೋಯ್ತೇ!ಮಕ್ಕಳನ್ನು ಅಷ್ಟು ಶಿಸ್ತಿನಿಂದ ಸಾಕಿ ಬೆಳೆಸಿದ್ದು ಏನೂ ಪ್ರಯೋಜನವಿಲ್ಲ ದಂತಾಯ್ತೇ!
ರಾತ್ರಿ ಪಾರ್ಟಿ, ವಯಸ್ಸಿನ ಯುವಕರೊಂದಿಗೆ ತಿರುಗಾಟ, ಏನಾದರೂ ಹೆಚ್ಚು ಕಡಿಮೆ ಆದರೆ ಯಾರಿಗೆ ಕಷ್ಟ?
ಎಲ್ಲಾ ಅನುಭವಿಸುವುದು ಹೆಣ್ಣು ತಾನೇ! ಅದು ಹೇಗೋ ತನ್ನನ್ನು ಸಂಭಾಳಿಸಿಕೊಂಡು ಟೀವಿ ನೋಡುತ್ತಾ ಕುಳಿತುಕೊಂಡಳು. ನಿದ್ದೆಯಿಂದೆದ್ದ ಶಿವಾನಿ ಮುಖ ಊದಿಕೊಂಡಿದ್ದ ಅಮ್ಮನ ಬಳಿ ಕುಳಿತು ಅವಳ ಭುಜ ಬಳಸಿದಾಗ ಆಕೆ ಕೋಪದಿಂದ ಕೈಯ್ಯನ್ನು ನೂಕಿದರು. ಶಿವಾನಿ ಅಮ್ಮನ ಆತಂಕ ಅರಿಯದಂತಹಾ ಪೆದ್ದು ಏನಲ್ಲ.”ಅಮ್ಮಾ ಅಪ್ಪನನ್ನು ಕರಿ.ಏನೋ ವಿಷಯ ಡಿಸ್ಕಸ್ ಮಾಡಬೇಕು.”ಎಂದಳು ಸೀರಿಯಸ್ಸಾಗಿ. ಇವರ ಮಾತುಗಳನ್ನು ಕೇಳಿಸಿಕೊಂಡ ಗಣೇಶ ತಾನಾಗಿಯೇ ಬಂದು ಮಗಳ ಪಕ್ಕದಲ್ಲಿ ಕುಳಿತುಕೊಂಡ. “ಅಮ್ಮಾ.ನೀನು ನನ್ನ ಮುಖ ನೋಡಿದಾಗೆಲ್ಲಾ ಒಂದೇ ರಾಗ ಎಳೀತಿದ್ದಿಯಲ್ವಾ.ಈಗ ನಿನಗೆ ಒಂದು ಒಳ್ಳೆಯ ಸುದ್ದಿ ಹೇಳ್ತೇನೆ.ನಾನು ಮತ್ತು ರಿಶಿ ಎರಡು ವರ್ಷಗಳಿಂದ ಪ್ರೀತಿಸ್ತಾ ಇದ್ದೇವೆ. ಎಂಬಿಎ ಮುಗಿಸಿದವನಿಗೆ ಈ ವರ್ಷ ಆಸ್ಟ್ರೇಲಿಯಾದಲ್ಲಿ ಕೆಲಸ ಸಿಕ್ಕಿತು. ನಂದೂ ಓದು ಮುಗೀತು. ಅವನ ಮನೆಯವರು ಮಹಾರಾಷ್ಟ್ರದವರು. ಸೂರತಿನಲ್ಲಿ ಸ್ವಂತ ಬಿಸಿನೆಸ್ ಮಾಡ್ತಾ ಇದ್ದಾರೆ. ನಿಮಗೆ ಒಪ್ಪಿಗೆ ಆದರೆ ನಾವು ಮದುವೆಯಾಗಿ ಜೊತೆಗೇ ಆಸ್ಟ್ರೇಲಿಯಾಕ್ಕೆ ಹೋಗಬೇಕೂಂತ ಯೋಚನೆ.”ಎಂದು ಮಾತು ಮುಗಿಸಿ ಅಮ್ಮನ ಮುಖ ನೋಡಿದಳು. ಶುಭಾಳಿಗೆ ಅಭಿಪ್ರಾಯ ತಿಳಿಸಲು ಏನೂ ಉಳಿದಿರಲಿಲ್ಲ. ಎಲ್ಲವೂ ಮೊದಲೇ ನಿಶ್ಚಿತವಾದಂತಿತ್ತು. ತಾವು ಬೇಡ ಅಂದರೂ, ಬೇಕೆಂದರೂ ಏನೂ ಪ್ರಯೋಜನವಿಲ್ಲ ಎಂದವರಿಗೆ ಅರಿವಾಗಿತ್ತು.ಶುಭಾಳಿಗೆ ಒಂದು ವಿಷಯ ಸ್ಪಷ್ಟವಾಗಬೇಕಿತ್ತು.” ಹುಡುಗನ ಮನೆಯವರಿಗೆ ಒಪ್ಪಿಗೆ ಇದೆಯಾ? “ಶಿವಾನಿ ನಗುತ್ತಾ ರಿಶಿಯ ಅಪ್ಪನಿಗೂ ನನ್ನ ಅಪ್ಪನಿಗೂ ಅಭ್ಯಂತರವಿಲ್ಲ. ಪ್ರಾಬ್ಲಂ ಇರೋದು ಇಬ್ಬರೂ ಅಮ್ಮನವರಿಗೇ. ನೀನು ಒಪ್ಪಿದರೆ ಆಕೆಯೂ ರೆಡಿ.”ಎಂದಾಗ ಶುಭಾ ಪತಿಯ ಕಡೆ ಗುರಾಯಿಸಿ ನೋಡಿದಳು. ಓಹೋ!ಎಲ್ಲಾ ವಿಚಾರ ಅವಳಪ್ಪನಿಗೆ ಗೊತ್ತಿದ್ದರೂ ತನಗೆ ತಿಳಿಸಲಿಲ್ಲ.ಸಪ್ಪಗಾಗಿ ಕುಳಿತವಳ ಬಳಿಬಂದ ಶಿವಾನಿ,”ಅಮ್ಮಾ,ನಮ್ಮ ಕಾಲಕ್ಕೂ ನಿಮ್ಮದಕ್ಕೂ ತುಂಬಾ ವ್ಯತ್ಯಾಸವಿದೆ.ನಮ್ಮ ಅಭಿರುಚಿಗೆ ತಕ್ಕಂತೆ ನಾವು ಲೈಫ್ ಪಾರ್ಟ್‌ನರ್ ಹುಡುಕಬೇಕು, ಒಂದೆರಡು ವರ್ಷ ಜೊತೆಯಾಗಿ ಒಡನಾಡಿ ಒಬ್ಬರನ್ನು ಒಬ್ಬರು ಅರ್ಥಮಾಡಿಕೊಂಡ ಮೇಲೆ ಮಾತ್ರ ಮದುವೆ ಸಾಧ್ಯ. ಇದನ್ನೆಲ್ಲಾ ನಿಮಗೆ ಅರ್ಥ ಮಾಡಿಸುವುದು ಕಷ್ಟಾಂತ ಮೊದಲೇ ಹೇಳಲಿಲ್ಲ.”ಶುಭಾ ಹೆಚ್ಚಿಗೆ ಚರ್ಚೆ ಮಾಡದೆ ತನ್ನ ಒಪ್ಪಿಗೆ ಸೂಚಿಸಿದಳು. ಸಮಯದ ಪ್ರವಾಹದ ದಿಕ್ಕಿನ ವಿರುದ್ದ ಈಜುವುದು ಮೂರ್ಖತನ ವೆಂದರಿತು ಬಾರದ ನಗುವನ್ನು ಮುಖದ ಮೇಲೆ ತಂದುಕೊಂಡಳು.

ಇತ್ತೀಚಿನ ಸುದ್ದಿ

ಜಾಹೀರಾತು