8:32 PM Tuesday31 - March 2026
ಬ್ರೇಕಿಂಗ್ ನ್ಯೂಸ್
ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬರೀ ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಮಾಡಲಿಲ್ಲ: ಸಿಎಂ… ಸಿದ್ದರಾಮಯ್ಯ ಕಳ್ಳಮತಗಳಿಂದ ನನ್ನ ವಿರುದ್ಧ ಬಾದಾಮಿಯಲ್ಲಿ ಗೆದ್ದರು: ಶ್ರೀರಾಮುಲು ಆರೋಪ ಯತ್ನಾಳ್‌ ಬಂದರೆ ಸ್ವಾಗತ: ರಾಜ್ಯ ಬಿಜೆಪಿಯಲ್ಲಿ ಕುತೂಹಲ ಮೂಡಿಸಿದ ಮಾಜಿ ಸಿಎಂ ಯಡಿಯೂರಪ್ಪ… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ… ಬಾಗಲಕೋಟೆ ಉಪ ಚುನಾವಣೆ: ಆಲಮಟ್ಟಿ ಬಳಿ ರಾತೋರಾತ್ರಿ ಸಿಎಂ ಭೇಟಿಯಾದ ಮುಸ್ಲಿಂ​ ಮುಖಂಡರು;… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ… ರಂಗೇರಿದ ಉಪ ಚುನಾವಣಾ ಕಣ: ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ, ವಿಜಯೇಂದ್ರ; ಕೈ, ಕಮಲ… ಕೌಟುಂಬಿಕ ಕಲಹ: ಭದ್ರಾ ಬಲದಂಡೆ ನಾಲೆ ಬ್ರಿಡ್ಜ್ ನಿಂದ ಹಾರಿ ಸೂಪರ್ ವೈಸರ್… ಗ್ಯಾಸ್ ಸಿಲಿಂಡರ್ ಗೆ ರೆಗ್ಯುಲೇಟರಿ ಅಳವಡಿಸುವಾಗ ಏಕಾಏಕಿ ಸ್ಫೋಟ: ಮನೆ ಛಿದ್ರಛಿದ್ರ; 4… ಭಕ್ತ ಸಾಗರದ ಹರ್ಷೋದ್ಗಾರದೊಂದಿಗೆ ನಡೆದ ನಂಜನಗೂಡಿನ ದೊಡ್ಡ ಜಾತ್ರೆ: ಶ್ರೀ ಗೌತಮ ಪಂಚ…

ಇತ್ತೀಚಿನ ಸುದ್ದಿ

ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬರೀ ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಮಾಡಲಿಲ್ಲ: ಸಿಎಂ ಸಿದ್ದರಾಮಯ್ಯ

31/03/2026, 20:26

ಬಾಗಲಕೋಟೆ(reporterkarnataka.com): ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಆಲಮಟ್ಟಿ ವಿಚಾರದಲ್ಲಿ ಜನವಿರೋಧಿ ನಿಲುವು ಹೊಂದಿದೆ. ಹದಿಮೂರು ವರ್ಷಗಳಿಂದ ಗೆಜೆಟ್ ನೋಟಿಫಿಕೇಶನ್ ಕೂಡ ಮಾಡಲಿಲ್ಲ. ನಾಲ್ಕು ವರ್ಷ ಅಧಿಕಾರದಲ್ಲಿದ್ದಾಗಲೂ ಭೂ ಪರಿಹಾರ ಘೋಷಿಸಿದರೂ ಹಣ ನೀಡಲಿಲ್ಲ ಎಂದು ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬರೀ ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ಒಂದೇ ಒಂದು ರೂಪಾಯಿ ರೈತರ ಸಾಲ ಮನ್ನಾ ಮಾಡಲಿಲ್ಲ ಅಧಿಕಾರದಲ್ಲಿದ್ದಾಗ ಜನರಿಗೆ ಸ್ಪಂದಿಸದೆ, ಈಗ ನಮ್ಮ ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಿಜೆಪಿಯವರಿಗೆ ಮತ ಕೇಳುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ. ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಉಮೇಶ್ ಮೇಟಿ ಪರ ಪ್ರಚಾರ ಮಾಡಿದ ಅವರು, ನನ್ನ ಆತ್ಮೀಯರೂ-ಪಕ್ಷ ನಿಷ್ಠೆ ಇದ್ದವರಾಗಿದ್ದ ಎಚ್.ವೈ. ಮೇಟಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಉಮೇಶ್ ಮೇಟಿ ಗೆಲ್ಲಬೇಕು. ನಾನೇ ಚುನಾವಣೆಗೆ ನಿಂತಿದ್ದೀನಿ ಎಂದುಕೊಂಡು ಮತ ಹಾಕಿ ಎಂದು ಮನವಿ ಮಾಡಿದರು. ನುಡಿದಂತೆ ನಡೆದು ಕೆಲಸ ಮಾಡುತ್ತಿರುವ ನಮ್ಮ ಸರ್ಕಾರದ ಬಗ್ಗೆ ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಆದರೆ, ಬಿಜೆಪಿ ಸರ್ಕಾರ ತನ್ನ ಅವಧಿಯಲ್ಲಿ ಬಾಕಿ ಉಳಿಸಿದ್ದ 30 ಸಾವಿರ ಕೋಟಿಯಲ್ಲಿ ನಮ್ಮ ಸರ್ಕಾರ 24 ಸಾವಿರ ಕೋಟಿ ರೂಪಾಯಿ ಬಾಕಿ ತೀರಿಸಿದೆ. ಹಣ ಇಲ್ಲದಿದ್ದರೂ ಬಿಜೆಪಿಯವರು ಗುತ್ತಿಗೆ ನೀಡಿ ಹೋದರು ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು