ಇತ್ತೀಚಿನ ಸುದ್ದಿ
ಯಶಸ್ವಿ ಯೋಜನೆ: ವಂತಿಗೆ ತಾರತಮ್ಯ ಸರಿಪಡಿಸಲು ಶಾಸಕ ಮಂಜುನಾಥ ಭಂಡಾರಿ ಸದನದಲ್ಲಿ ಆಗ್ರಹ
29/12/2022, 21:15

ಬೆಂಗಳೂರು(reporterkarnataka.com): ಸಹಕಾರ ಇಲಾಖೆಯ ಯಶಸ್ವಿ ಯೋಜನೆಯಲ್ಲಿ ಗ್ರಾಮಾಂತರ ಪ್ರದೇಶ ಹಾಗೂ ನಗರ ಪ್ರದೇಶದ ಫಲಾನುಭವಿಗಳಿಗೆ ನಿರ್ಧರಿಸಲಾಗಿರುವ ವಂತಿಗೆ ತಾರತಮ್ಯವನ್ನು ಸರಿಪಡಿಸುವಂತೆ ಸರಕಾರವನ್ನು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಒತ್ತಾಯಿಸಿದ್ದಾರೆ.
ವಿಧಾನ ಮಂಡಲದ ಇಂದಿನ ಅಧಿವೇಶನದಲ್ಲಿ ಶಾಸಕ ಮಂಜುನಾಥ ಭಂಡಾರಿ ಅವರು ಈ ಕುರಿತು ಸದನದಲ್ಲಿ ಸಮಗ್ರ ವಿವರಣೆ ನೀಡಿದರು. ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು ತಾರತಮ್ಯ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಆಗ್ರಹಿಸಿದರು.