1:15 PM Wednesday17 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ಯಕ್ಷ ಕಲಾವಿದ ಗಣೇಶ್ ಕೊಲೆಕಾಡಿ ಅವರ ಚಿಕಿತ್ಸೆಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ನಿಂದ 50 ಸಾವಿರ ರೂ. ಕೊಡುಗೆ

06/12/2024, 00:25

ಬಂಟ್ವಾಳ(reporterkarnataka.com): ಯಕ್ಷಗಾನ ಪ್ರಪಂಚ ಕಂಡ ಅಪ್ರತಿಮ ವಿದ್ವಾಂಸ ಗಣೇಶ್ ಕೊಲೆಕಾಡಿ ಅವರ ಆರೋಗ್ಯದ ತುರ್ತು ಪರಿಸ್ಥಿತಿಯನ್ನು ಮನಗಂಡು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರಿನ ಕೇಂದ್ರೀಯ ಸಮಿತಿಯ ಪದಾಧಿಕಾರಿಗಳು ಅವರ
ಮನೆಗೆ ಭೇಟಿ ನೀಡಿ ಫೌಂಡೇಶನ್ ವತಿಯಿಂದ 50,000 ಸಹಾಯವಧನ ನೀಡಲಾಯಿತು.
ಈ ಮೊದಲು ಕೂಡ ನಮ್ಮ ಫೌಂಡೇಶನ್ ಸುಮಾರು 2 ಲಕ್ಷಕ್ಕಿಂತಲೂ ಹೆಚ್ಚು ಶ್ರೀಯುತ ರಿಗೆ ಸಹಕಾರ ನೀಡಿದೆ.ಅಷ್ಟೇ ಅಲ್ಲದೆ ಕಳೆದ 6 ವರ್ಷಗಳಿಂದ ಪ್ರತಿ ತಿಂಗಳು 1000 ಚಿಕಿತ್ಸಾ ವೆಚ್ಚಕ್ಕಾಗಿ ಯಕ್ಷಧ್ರುವ ಫೌಂಡೇಶನ್ ನೀಡುತ್ತಿದೆ.
ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮ್ ಭಂಡಾರಿ, ಕೋಶಾಧಿಕಾರಿ ಸಿ ಎ ಸುದೇಶ್ ಕುಮಾರ್ ರೈ , ಕದ್ರಿ ನವನೀತ್ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ ಹಾಗೂ ಯಕ್ಷಗಾನ ಅಕಾಡೆಮಿ ಸದಸ್ಯರಾದ ವಿಜಯ್ ಕುಮಾರ್ ಮೊಯ್ಲೊಟ್ಟು ಉಪಸ್ಥಿತರಿದ್ದರು.
*ಈ ಕಲಾವಿದರು ಕಳೆದ 18 ವರ್ಷಗಳಿಂದ ತೀರಾ ಅನಾರೋಗ್ಯ ದಿಂದ ಇದ್ದಾರೆ. ತಾಯಿ ಕೂಡ ತುಂಬಾ ಪ್ರಾಯದವರಗಿದ್ದು, ಮನೆಯಲ್ಲಿ ಊಟಕ್ಕೂ ಮದ್ದಿಗೂ ಪರದಾಡುವ ಸ್ಥಿತಿ,ಬೇರೆ ಯಾರೂ ಕುಟುಂಬಸ್ಥರು ಇವರಿಗೆ ಇಲ್ಲ.ಇವರು ಕಲಾ ವಲಯಕ್ಕೆ ನೀಡಿದ ಕೊಡುಗೆ ಅಪಾರ.ಇಂತಹ ವಿದ್ವಾಂಸರ ಸ್ಥಿತಿ, ಅವರ ತಾಯಿಯ ಸ್ಥಿತಿ ಚಿಂತಾಜನಕ.*
ತೀರಾ ಸಂಕಷ್ಟದಲ್ಲಿರುವ *ಗಣೇಶ್ ಪೂಜಾರಿ ಕೊಲೆಕಾಡಿ* ಕಲಾವಿದನ ಕಷ್ಟಕ್ಕೆ ನಾವೆಲ್ಲರೂ ಕೈಜೋಡಿಸೋಣ.
ಅವರ ಫೋನ್ ಪೇ ಅಥವಾ ಗೂಗಲ್ ಪೇ ನಂಬರ್
9482130381

ಇತ್ತೀಚಿನ ಸುದ್ದಿ

ಜಾಹೀರಾತು