ಇತ್ತೀಚಿನ ಸುದ್ದಿ
ಯಡ್ತಾಡಿಯಲ್ಲಿ ಉಲಾಯಿ- ಪಿದಾಯಿ ಅಡ್ಡೆಗೆ ಪೊಲೀಸರ ದಾಳಿ: 6 ಮಂದಿಯ ಬಂಧನ, ಇಬ್ಬರು ಪರಾರಿ
15/09/2022, 22:19

ಬ್ರಹ್ಮಾವರ(reporterkarnataka.com): ಅಂದರ್ ಬಾಹರ್ ಜುಗಾರಿಗೆ ಅಡ್ಡೆಗೆ ದಾಳಿ ನಡೆಸಿದ ಬ್ರಹ್ಮಾವರ ಪೊಲೀಸರು ಆರು ಮಂದಿಯನ್ನು ಬಂಧಿಸಿ, 3,730 ರೂ. ನಗದು ಸಹಿತ ಇತರೆ ಸ್ವತ್ತು ವಶಪಡಿಸಿಕೊಂಡ ಘಟನೆ ಬ್ರಹ್ಮಾವರ ತಾಲೂಕಿನ ಯಡ್ತಾಡಿ ಗ್ರಾಮದ ಅಲ್ತಾರು ಹಾಡಿಯಲ್ಲಿ ನಡೆದಿದೆ.
ಬಂಧಿತರನ್ನು ಸ್ಥಳೀಯ ನಿವಾಸಿಗಳಾದ ರಮೇಶ ಕುಲಾಲ, ಪ್ರಶಾಂತ ಹೆಚ್ ಪೂಜಾರಿ, ಮಂಜುನಾಥ ಪೂಜಾರಿ, ಉಮೇಶ, ಪ್ರವೀಣ್ ಶೆಟ್ಟಿ, ಹಾಗೂ ಅಣ್ಣು ಪೂಜಾರಿ ಎಂದು ಗುರುತಿಸಲಾಗಿದೆ. ನೀಲೇಶ್ ಹಾಗೂ ವೆಲೇರಿಯನ್ ಪರಾರಿಯಾಗಿದ್ದಾರೆ. ಅಲ್ತಾರು ಹಾಡಿಯಲ್ಲಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.