ಇತ್ತೀಚಿನ ಸುದ್ದಿ
ಯಡ್ತಾಡಿ: ನಾಪತ್ತೆಯಾಗಿದ್ದ ವೃದ್ಧ ಮಹಿಳೆಯ ಶವ ಕಲ್ಲುಕೋರೆಯಲ್ಲಿ ಪತ್ತೆ
17/08/2022, 10:31
ಬ್ರಹ್ಮಾವರ(reporterkarnataka.com): ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಬ್ರಹ್ಮಾವರ ತಾಲೂಕಿನ ಯಡ್ತಾಡಿ ಗ್ರಾಮದ ಹಂಚಿನಕೆರೆ ಬಳಿಯ ಕಲ್ಲುಕೋರೆಯಲ್ಲಿ ನಡೆದಿದೆ.
ಯಡ್ತಾಡಿ ಗ್ರಾಮದ ಹಂಚಿನಕೆರೆ ನಿವಾಸಿ ಸೀತು ಮರಕಾಲ್ತಿ(65) ಮೃತದುರ್ದೈವಿ. ಅವರು ಆ.13ರಿಂದ ಕಾಣೆಯಾಗಿದ್ದರು. ಇವರು ಪ್ರತಿದಿನ ಬೆಳಿಗ್ಗೆ 5.30ಕ್ಕೆ ದನಕ್ಕೆ ಹುಲ್ಲು ತರಲು ಮನೆಯಿಂದ ಗದ್ದೆಗೆ ಹೋಗುತ್ತಿದ್ದರು. ಆ. 15ರಂದು ಕೂಡ ಬೆಳಿಗ್ಗೆ ಹುಲ್ಲು ತರಲು ಹೋಗಿದ್ದು, ಅಲ್ಲೆ ಪಕ್ಕದಲ್ಲಿದ್ದ ಕಲ್ಲುಕೋರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.