ಇತ್ತೀಚಿನ ಸುದ್ದಿ
ಕೊಡಗು ಜಿಲ್ಲೆಯಲ್ಲಿ ಗಾಳಿ ಮಳೆಯ ಆರ್ಭಟ: ರಸ್ತೆಗೆ ಉರುಳಿದ ಮರ; ಹಲವೆಡೆ ಸಂಚಾರ ಸ್ಥಗಿತ; ಭಾರೀ ಹಾನಿ
26/07/2025, 22:21

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೊಡಗು ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಮೈಸೂರು ರಸ್ತೆಯ ಬೋಯಿಕೇರಿಯಲ್ಲಿ ಶಾಲೆ ರಸ್ತೆಯ ಮೇಲೆ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ವಿರಾಜಪೇಟೆ ತಾಲ್ಲೂಕಿನ ಹಾಲುಗುಂದ ಮೈತಡಿ ಗ್ರಾಮದ ಸಂಪರ್ಕ ರಸ್ತೆಯಲ್ಲಿ ಬೃಹತ್ ಮರ ಬಿದ್ದು ಸಂಚಾರ ಕಡಿತಗೊಂಡಿದೆ. ಕೊಂಡಂಗೇರಿಯಲ್ಲಿ ಶಾದಿ ಮಹಲ್ ಬಳಿ ನಿಲ್ಲಿಸಿದ್ದ ಕಾರಿನ ಮೇಲೆ ಮರ ಬಿದ್ದು ಹಾನಿ ಉಂಟಾಗಿದೆ. ತಲಕಾವೇರಿ -ಭಾಗಮಂಡಲ ರಸ್ತೆಯಲ್ಲಿ ಮರ ಬಿದ್ದು ದೇವಾಲಯಕ್ಕೆ ಭಕ್ತರು ತೆರಳಳು ಅಡ್ಡಿ ಉಂಟಾಗಿರುವ ಬಗ್ಗೆ ವರದಿಯಾಗಿದೆ.